ನವದೆಹಲಿ : ಭಾರತದ ಆರ್ಥಿಕ ಚೇತರಿಕೆಯು 'ವಿ' (V) ಬದಲು 'ಯು' (U) ಅಥವಾ 'ಡಬ್ಲ್ಯೂ' (W) ಆಕಾರದ ಇರುವ ಸಾಧ್ಯತೆ ದಟ್ಟವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಪರಿಣಾಮ ಮುನ್ನವೇ ವಿತ್ತೀಯ ವೃದ್ಧಿ ಬೆಳವಣಿಗೆಗಾಗಿ ಹೆಣಗಾಡುತ್ತಿತ್ತು ಎಂದು ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ.
ಕೋವಿಡ್-19 ಪ್ರಾರಂಭವಾಗುವ ಮೊದಲು ಭಾರತೀಯ ಆರ್ಥಿಕತೆಯು ಜಿಡಿಪಿ ಬೆಳವಣಿಗೆಯಲ್ಲಿ ಶೇ 4.5ಕ್ಕೆ ಇಳಿದಿತ್ತು. 2018 ಮತ್ತು 2019ರ ಜಾಗತಿಕ ಪುನರ್ ನಿರ್ಮಾಣದಲ್ಲಿ ಪಾಲುದಾರ ಆಗಿರಲಿಲ್ಲ ಎಂದು ಸೆಂಟ್ರಮ್ ಇನ್ಸ್ಟಿಟ್ಯೂಷನಲ್ ರಿಸರ್ಚ್ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ನ ದಿಟ್ಟ ಕ್ರಮಗಳ ನಂತರ ಆರ್ಥಿಕತೆಯು ಚೇತರಿಕೆಯ ಹೊಸ ಲಕ್ಷಣಗಳನ್ನು ತೋರಿಸುತ್ತಿತ್ತು. ಅಷ್ಟರಲ್ಲಿ ಸಾಂಕ್ರಾಮಿಕ ರೋಗವು ಹಬ್ಬಿಕೊಂಡಿತು.
ಕೋವಿಡ್-19 ಸೋಂಕು ಎದುರಿಸಲು ಭಾರತವು ನಿಗದಿಗೂ ಮೊದಲೇ ಲಾಕ್‌ಡೌನ್ ಮೊರೆ ಹೋಗಿತ್ತು. ಇದನ್ನು ದೀರ್ಘಕಾಲದವರೆಗೆ ವಿಧಿಸಿತ್ತು. ಕಳೆದ ಎರಡು ವರ್ಷಗಳ ಕಳಪೆ ಬೆಳವಣಿಗೆ ಗಮನಿಸಿದ್ರೆ, ಆರ್ಥಿಕತೆಯಲ್ಲಿ ಬೇಡಿಕೆ ಪ್ರೋತ್ಸಾಹಿಸಲು ಸರ್ಕಾರವು ಸೀಮಿತ ಸಂಪನ್ಮೂಲಗಳನ್ನು ಹೊಂದಿತ್ತು ಎಂಬುದು ತಿಳಿದು ಬರುತ್ತದೆ. ಹೀಗಾಗಿ ಕೋವಿಡ್-19 ಪ್ರಭಾವವು ಭಾರತದಲ್ಲಿ ಆಳವಾಗಿರಲಿದೆ. ಕೆಲವು ವಲಯಗಳ ಸುಧಾರಿತದಿಂದಾಗಿ ಆರ್ಥಿಕತೆ 'ವಿ' ಚೇತರಿಕೆಗಿಂದ ಹೆಚ್ಚು 'ಯು' ಅಥವಾ 'ಡಬ್ಲ್ಯೂ' ಆಗಿರುತ್ತದೆ ಎಂದು ವಿಶ್ಲೇಷಿಸಿದೆ.
ಒಂದು ರಾಷ್ಟ್ರದ ಆರ್ಥಿಕ ಹಿಂಜರಿತ ಮತ್ತು ಚೇತರಿಕೆಯನ್ನು ಸಾಮಾನ್ಯವಾಗಿ ಯು, ವಿ ಮತ್ತು ಡಬ್ಲ್ಯೂ ಅಕ್ಷರಗಳ ಆಕಾರಗಳಲ್ಲಿ ಪಟ್ಟಿಮಾಡಲಾಗುತ್ತದೆ. ಲೆಕ್ಕಾಚಾರ ಮಾನದಂಡದ 'V', 'W' ಮತ್ತು 'U' ಅಕ್ಷಗಳ ಆಕಾರದಲ್ಲಿ ಆರ್ಥಿಕ ಹಿಂಜರಿತ ಮತ್ತು ಚೇತರಿಕೆಯ ಚಕ್ರವು ಏರಿಳಿತವನ್ನು ಸೂಚಿಸುತ್ತವೆ.
'V' -ಆಕಾರದ ಚೇತರಿಕೆ ಎಂದರೇನು?
V-ಆಕಾರದ ಚೇತರಿಕೆ ಎಂದರೇ ಪುನಶ್ಚೇತನದ ಚಾರ್ಟಿಂಗ್‌ನಲ್ಲಿ "ವಿ" (V) ಆಕಾರ ಹೋಲುತ್ತದೆ. ಸರಳವಾಗಿ ಹೇಳುವುದಾದರೇ ತೀವ್ರ ಕುಸಿತದ ಬಳಿಕ ಹಿಂದಿನ ಗರಿಷ್ಠ ಮಟ್ಟಕ್ಕೆ ತೀಕ್ಷ್ಣವಾಗಿ ಏರಿಕೆ ಕಾಣುತ್ತದೆ. ತೀಕ್ಷ್ಣ ಆರ್ಥಿಕ ಕುಸಿತದ ನಂತರ ಆರ್ಥಿಕ ಕಾರ್ಯಕ್ಷಮತೆಯು ತ್ವರಿತ ಮತ್ತು ನಿರಂತರ ಚೇತರಿಕೆಯಿಂದ ಕೂಡಿರುತ್ತದೆ.
'W'- ಆಕಾರದ ಚೇತರಿಕೆ ಎಂದರೇನು?
W ಆಕಾರದ ಚೇತರಿಕೆ ತೀಕ್ಷ್ಣವಾದ ಕುಸಿತದ ಬಳಿಕ ತೀಕ್ಷ್ಣವಾಗಿ ಮೇಲಕ್ಕೆ ಏರುತ್ತದೆ. ಮತ್ತೆ ತೀಕ್ಷ್ಣ ಇಳಿಕೆ ಕಂಡು ಮತ್ತೊಂದು ವೇಗದ ಮೇಲ್ಮುಖದ ಏರಿಕೆಯೊಂದಿಗೆ ಕೊನೆಗೊಳ್ಳುತ್ತದೆ. 'W'ನ ಮಧ್ಯದ ವಿಭಾಗದ ಸೂಚಕವು ಕರಡಿ ಮಾರುಕಟ್ಟೆಯ ಸೀಸನ್ ಅಥವಾ ಹೆಚ್ಚುವರಿ ಆರ್ಥಿಕ ಬಿಕ್ಕಟ್ಟಿನ ಚೇತರಿಕೆ ಪ್ರತಿನಿಧಿಸುತ್ತದೆ.
'U'-ಆಕಾರದ ಚೇತರಿಕೆ ಎಂದರೇನು?
'U'-ಆಕಾರದ ಚೇತರಿಕೆ ಮಾಪನ ಮಾಡಿದಾ ಚಾರ್ಟ್ನ ಯು ಆಕಾರ ಹೋಲುತ್ತದೆ. ಯು 'U' -ಆಕಾರದ ಚೇತರಿಕೆ ಉದ್ಯೋಗ, ಜಿಡಿಪಿ ಮತ್ತು ಕೈಗಾರಿಕಾ ಉತ್ಪಾದನೆಯಂತಹ ಕೆಲವು ಆರ್ಥಿಕ ಕ್ರಮಗಳನ್ನು ಪ್ರತಿನಿಧಿಸುತ್ತದೆ. ಯು-ಆಕಾರದ ಚೇತರಿಕೆ ವಿ-ಆಕಾರದ ಚೇತರಿಕೆ ಹೋಲುತ್ತಿದ್ದರೂ ವಿತ್ತೀಯ ಬೆಳವಣಿಗೆ ತಕ್ಷಣ ಮರುಕಳಿಸುವ ಬದಲು ಹಿಂಜರಿತದ ಕೆಳಭಾಗದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬಳಿಕ ವೇಗವಾಗಿ ಮೇಲಕೇರುತ್ತದೆ.