ನವದೆಹಲಿ: ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಬಿದ್ದಿದೆ. ಇದರಿಂದ ಪ್ರಮುಖ ವಲಯಗಳ ಉತ್ಪಾದನೆ ಪ್ರಮಾಣ ಸಹ ಕ್ಷೀಣಿಸಿದೆ. ವಿವಿಧ ಕ್ಷೇತ್ರಗಳು ಆರ್ಥಿಕವಾಗಿ ಕುಗ್ಗಿ ಉಳಿವಿನ ಭರವಸೆಯನ್ನೇ ಕಳೆದುಕೊಂಡಂತಾಗಿದೆ. ಮುಂದಿನ ದಿನಗಳಲ್ಲಿ ಶರವೇಗದಲ್ಲಿ ಉದ್ಯೋಗ ಕಡಿತ ಆಗುವ ಸಂಭವವಿದೆ ಎಂದು ಸಮೀಕ್ಷೆಯೊಂದು ಎಚ್ಚರಿಸಿದೆ.
ಐಎಚ್‌ಎಸ್ ಮಾರ್ಕಿಟ್ ಇಂಡಿಯಾ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ), ಮೇ ತಿಂಗಳಲ್ಲಿನ ಶೇ 30.8ರಷ್ಟು ಮತ್ತು ಏಪ್ರಿಲ್‌ನಲ್ಲಿನ ಶೇ 27.4ರಷ್ಟು ಕುಸಿತವು ದೇಶದ ಉತ್ಪಾದನಾ ಕ್ಷೇತ್ರದ ಆರೋಗ್ಯದ ಗಣನೀಯ ಕುಸಿತವನ್ನು ಸೂಚಿಸುತ್ತದೆ. ಸತತ 32 ತಿಂಗಳ ಬೆಳವಣಿಗೆಯ ವಲಯದಲ್ಲಿ ಉಳಿದ ನಂತರ ಏಪ್ರಿಲ್‌ನಲ್ಲಿ ಸೂಚ್ಯಂಕವು ಸಂಕೋಚಿತಕ್ಕೆ ಜಾರಿತು. ಪಿಎಂಐ ಪರಿಭಾಷೆಯಲ್ಲಿ ಹೇಳುವುದಾದರೇ ಶೇ 50ಕ್ಕಿಂತ ಅಧಿಕವಾದದ್ದು, ವಿಸ್ತರಣೆ ಎಂದರ್ಥ. ಅದರೆ ಕೆಳಗಿನ ಸ್ಕೋರ್ ಸಂಕೋಚನ ಸೂಚಿಸುತ್ತದೆ.
ಇತ್ತೀಚಿನ ಪಿಎಂಐ ದತ್ತಾಂಶವು ಮೇ ತಿಂಗಳಲ್ಲಿ ಭಾರತೀಯ ತಯಾರಿಕ ಉತ್ಪಾದನೆಯು ಮತ್ತಷ್ಟು ಕುಸಿದಿದೆ ಎಂಬುದನ್ನು ಸೂಚಿಸಿದೆ. ಈ ಫಲಿತಾಂಶವು ಏಪ್ರಿಲ್‌ನಲ್ಲಿನ ದಾಖಲೆಯ ಇಳಿಕೆಯ ಗಮನದಲ್ಲಿ ಇರಿಸಿಕೊಂಡು ವ್ಯಾಪಕವಾದ ವಹಿವಾಟು ಸ್ಥಗಿತಕ್ಕೆ ಕಾರಣವಾಗಿದೆ ಎಂದು ಐಎಚ್‌ಎಸ್ ಮಾರ್ಕಿಟ್‌ನ ಅರ್ಥಶಾಸ್ತ್ರಜ್ಞ ಎಲಿಯಟ್ ಕೆರ್ ಹೇಳಿದರು.
ಸಮೀಕ್ಷೆಯ ಪ್ರಕಾರ, ಏಪ್ರಿಲ್‌ನ ದಾಖಲೆಯ ಕುಸಿತದ ನಂತರ ದುರ್ಬಲ ಬೇಡಿಕೆ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಇದರ ಪರಿಣಾಮವಾಗಿ 15 ವರ್ಷಗಳ ಹಿಂದೆ ಡೇಟಾ ಸಂಗ್ರಹಣೆ ಆರಂಭವಾದಾಗಿನಿಂದ ಸಂಸ್ಥೆಗಳು ಸಿಬ್ಬಂದಿ ಸಂಖ್ಯೆಯನ್ನು ತ್ವರಿತಗತಿಯಲ್ಲಿ ಕಡಿತಗೊಳಿಸುತ್ತವೆ ಎಂದು ಎಚ್ಚರಿಸಿದೆ.