ETV Bharat / business

ಕಡು ಬಡವರಿಗೆ 72 ಸಾವಿರ ರೂ. ಪಾವತಿಸುವ ಸಾಮರ್ಥ್ಯ ಭಾರತಕ್ಕಿದೆ; ಚಿದಂಬರಂ

ಕನಿಷ್ಠ ಆದಾಯ ಯೋಜನೆ ಅನುಷ್ಠಾನದ ಬಗ್ಗೆ ಸಾಕಷ್ಟು ಅರ್ಥಶಾಸ್ತ್ರಜ್ಞರ ಹಾಗೂ ಹೂಡಿಕೆ ತಜ್ಞರ ಸಲಹೆ ಪಡೆಯಲಾಗಿದೆ. ಈ ಯೋಜನೆ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟು ಜಿಡಿಪಿಯಲ್ಲಿ ಶೇ 1.8ರಷ್ಟು ಹಂಚಿಕೆ ಆಗಲಿದೆ ಎಂಬ ಮಾಹಿತಿ ಸಹ ನೀಡಿದ್ದಾರೆ; ಪಿ.ಚಿದಂಬರಂ

ಪಿ. ಚಿದಂಬರಂ
author img

By

Published : Mar 27, 2019, 1:20 PM IST

ಚೆನ್ನೈ: ದೇಶದ ಶೇ 20ರಷ್ಟು ಕಡು ಬಡ ಕುಟುಂಬಗಳಿಗೆ ವರ್ಷಕ್ಕೆ ₹ 72 ಸಾವಿರ ರೂ. ಕನಿಷ್ಠ ಆದಾಯವಾಗಿ ನೀಡುವ ವಾಗ್ದಾನ ನೀಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ಸಾಕಷ್ಟು ಪರ- ವಿರೋಧ ಅಭಿಪ್ರಾಯಗಳನ್ನು ಹುಟ್ಟು ಹಾಕಿದ್ದು, 'ಭಾರತಕ್ಕೆ ಈ ಯೋಜನೆ ಕಾರ್ಯಗತಗೊಳಿಸುವ ಸಾಮರ್ಥವಿದೆ' ಎಂದು ಮಾಜಿ ಹಣಕಾಸು ಸಚಿವ/ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ರಾಹುಲ್​ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕನಿಷ್ಠ ಆದಾಯದ ಯೋಜನೆಯನ್ನು ವಿವಿಧ ಹಂತಗಳಲ್ಲಿ ಜಾರಿಗೆ ತರೆಲಿದೆ. ಐದು ಕೋಟಿ ಫಲಾನುಭವಿಯ ಕುಟುಂಬಗಳನ್ನು ನಾನಾ ಸ್ಥರದಲ್ಲಿ ವಿಂಗಡಿಸಲಾಗುವುದು ಎಂದು ತಿಳಿಸಿದ್ದಾರೆ.

ನಮ್ಮ (ಪಕ್ಷ) ಲೆಕ್ಕಾಚಾರದ ಪ್ರಕಾರ ಒಟ್ಟು ಜಿಡಿಪಿಯಲ್ಲಿ ಶೇ 2ರಷ್ಟು ದಾಟುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಈಗ ಆರ್ಥಿಕ ತಜ್ಞರೇ ಯಾವುದೇ ಕಾರಣಕ್ಕೂ ಶೇ 1.8ರಷ್ಟು ಮೀರುವುದಿಲ್ಲ ಎಂದಿದ್ದಾರೆ. ಯೋಜನೆಯ ಜಾರಿಗೆ ತರುವ ಸಾಧ್ಯತೆ ಇದ್ದು, ವಿವಿಧ ಹಂತಗಳಲ್ಲಿ 5 ಕೋಟಿ ಕುಟುಂಬಗಳನ್ನು ಗುರುತಿಸುತ್ತೇವೆ ಎಂದು ಚಿದಂಬರಂ ಮಾಹಿತಿ ನೀಡಿದರು.

ಆರ್​ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಸಹ ಯೋಜನೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಪರೀಕ್ಷಾರ್ಥ ಪ್ರಾಯೋಗಿಕ ಅನುಷ್ಠಾನಕ್ಕೆ ಪಕ್ಷದ ಹಿರಿಯ ಮುಖಂಡರು ಸಲಹೆ ನೀಡಿದ್ದಾರೆ. ಹೀಗಾಗಿ, ಪರಿಣಿತರ ಸಮಿತಿ ರಚನೆ ಸಹ ಸಿದ್ಧತಾ ಹಂತದಲ್ಲಿ ಇದೆ. ಮುಂದಿನ ಹೆಜ್ಜೆ ಇರಿಸುವ ಮುನ್ನ ಯೋಜನೆಯ ವಿನ್ಯಾಸ, ರೂಪುರೇಷ ಕುರಿತು ಸಮಿತಿಯೊಂದಿಗೆ ಚರ್ಚಿಸಲಿದ್ದೇವೆ. ಐದು ಕೋಟಿ ಕುಟುಂಬಗಳನ್ನು ಗುರುತಿಸುವಷ್ಟು ದತ್ತಾಂಶ ಸಂಗ್ರಹವಾಗಿದೆ ಎಂದು ವಿವರಿಸಿದರು.

2009ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೆಗಾ) ಜಾರಿಗೆ ಬಂದಾಗ, ಆಗಿನ ಬಿಜೆಪಿ ಮುಖಂಡ ಅರುಣ್ ಜೇಟ್ಲಿ 'ಮನ್ರೆಗಾ ಅನುಷ್ಠಾನ ಸಾಧ್ಯವಿಲ್ಲ' ಎಂದು ಜರಿದಿದ್ದರು. ಆದರೆ, ಮೋದಿ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಘೋಷಿಸಿದಾಗ ಇದು ಕೂಡ ಸಾಧ್ಯವಿಲ್ಲ ಎಂದು ಹೇಳುವುದನ್ನು ಜೇಟ್ಲಿ ಮರೆತಿದ್ದಾರೆ ಎಂದು ಅಣುಕಿಸಿದರು.

ಬಡತನ ತೊಡೆದು ಹಾಕುವ ಉದ್ದೇಶದ ಯಾವುದೇ ಯೋಜನೆಯನ್ನು ಟೀಕಿಸುವರಿಗೆ ನಾವು ಉತ್ತರಿಸಬಾರದು. ಮನ್ರೆಗಾ ಹಸಿವು ನಿರ್ಮೂಲನೆ ಮಾಡಿದೆ, ಆದಾಯ ಯೋಜನೆಯು ಬಡತದಿಂದ ಅವರನ್ನು ಮೇಲೆತ್ತಿದೆ ಎಂದರು.

Intro:Body:

ಕಡು ಬಡವರಿಗೆ 72 ಸಾವಿರ ರೂ. ಪಾವತಿಸುವ ಸಾಮರ್ಥ್ಯ ಭಾರತಕ್ಕಿದೆ; ಚಿದಂಬರಂ

ಚೆನ್ನೈ: ದೇಶದ ಶೇ 20ರಷ್ಟು ಕಡು ಬಡ ಕುಟುಂಬಗಳಿಗೆ ವರ್ಷಕ್ಕೆ ₹ 72 ಸಾವಿರವನ್ನು ಕನಿಷ್ಠ ಆದಾಯವಾಗಿ ನೀಡುವ ವಾಗ್ದಾನ ನೀಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ಸಾಕಷ್ಟು ಪರ- ವಿರೋಧ ಅಭಿಪ್ರಾಯಗಳನ್ನು ಹುಟ್ಟು ಹಾಕಿದ್ದು, 'ಭಾರತಕ್ಕೆ ಈ ಯೋಜನೆ ಕಾರ್ಯಗತಗೊಳಿಸುವ ಸಾಮರ್ಥವಿದೆ' ಎಂದು ಮಾಜಿ ಹಣಕಾಸು ಸಚಿವ/ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕನಿಷ್ಠ ಆದಾಯದ ಯೋಜನೆಯನ್ನು ವಿವಿಧ ಹಂತಗಳಲ್ಲಿ ಜಾರಿಗೆ ತರೆಲಿದೆ. ಐದು ಕೋಟಿ ಫಲಾನುಭವಿಯ ಕುಟುಂಬಗಳನ್ನು ನಾನಾ ಸ್ಥರದಲ್ಲಿ ವಿಂಗಡಿಸಲಾಗುವುದು ಎಂದು ತಿಳಿಸಿದ್ದಾರೆ.

ಯೋಜನೆ ಅನುಷ್ಠಾನದ ಬಗ್ಗೆ ಸಾಕಷ್ಟು ಅರ್ಥಶಾಸ್ತ್ರಜ್ಞರ ಹಾಗೂ ಹೂಡಿಕೆ ತಜ್ಞರ ಸಲಹೆ ಪಡೆಯಲಾಗಿದೆ. ಈ ಯೋಜನೆ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟು ಜಿಡಿಪಿಯಲ್ಲಿ ಶೇ 1.8ರಷ್ಟು ಹಂಚಿಕೆ ಆಗಲಿದೆ ಎಂಬ ಮಾಹಿತಿ ಸಹ ನೀಡಿದ್ದಾರೆ ಎಂದು ಹೇಳಿದರು.

ನಮ್ಮ (ಪಕ್ಷ) ಲೆಕ್ಕಾಚಾರದ ಪ್ರಕಾರ ಒಟ್ಟು ಜಿಡಿಪಿಯಲ್ಲಿ ಶೇ 2ರಷ್ಟು ದಾಟುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಈಗ ಆರ್ಥಿಕ ತಜ್ಞರೇ ಯಾವುದೇ ಕಾರಣಕ್ಕೂ ಶೇ 1.8ರಷ್ಟು ಮೀರುವುದಿಲ್ಲ ಎಂದಿದ್ದಾರೆ. ಯೋಜನೆಯ ಜಾರಿಗೆ ತರುವ ಸಾಧ್ಯತೆ ಇದ್ದು, ವಿವಿಧ ಹಂತಗಳಲ್ಲಿ 5 ಕೋಟಿ ಕುಟುಂಬಗಳನ್ನು ಗುರುತಿಸುತ್ತೇವೆ ಎಂದು ಚಿದಂಬರಂ ಮಾಹಿತಿ ನೀಡಿದರು.

ಆರ್​ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಸಹ ಯೋಜನೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಪರೀಕ್ಷಾರ್ಥ ಪ್ರಾಯೋಗಿಕ ಅನುಷ್ಠಾನಕ್ಕೆ ಪಕ್ಷದ ಹಿರಿಯ ಮುಖಂಡರು ಸಲಹೆ ನೀಡಿದ್ದಾರೆ. ಹೀಗಾಗಿ, ಪರಿಣಿತರ ಸಮಿತಿ ರಚನೆ ಸಹ ಸಿದ್ಧತಾ ಹಂತದಲ್ಲಿ ಇದೆ. ಮುಂದಿನ ಹೆಜ್ಜೆ ಇರಿಸುವ ಮುನ್ನ ಯೋಜನೆಯ ವಿನ್ಯಾಸ, ರೂಪುರೇಷ ಕುರಿತು ಸಮಿತಿಯೊಂದಿಗೆ ಚರ್ಚಿಸಲಿದ್ದೇವೆ. ಐದು ಕೋಟಿ ಕುಟುಂಬಗಳನ್ನು ಗುರುತಿಸುವಷ್ಟು ದತ್ತಾಂಶ ಸಂಗ್ರಹವಾಗಿದೆ ಎಂದು ವಿವರಿಸಿದರು.

2009ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನ್ರೆಗಾ) ಜಾರಿಗೆ ಬಂದಾಗ, ಆಗಿನ ಬಿಜೆಪಿ ಮುಖಂಡ ಅರುಣ್ ಜೇಟ್ಲಿ 'ಮನ್ರೆಗಾ ಅನುಷ್ಠಾನ ಸಾಧ್ಯವಿಲ್ಲ' ಎಂದು ಜರಿದಿದ್ದರು. ಆದರೆ, ಮೋದಿ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಘೋಷಿಸಿದಾಗ ಇದು ಕೂಡ ಸಾಧ್ಯವಿಲ್ಲ ಎಂದು ಹೇಳುವುದನ್ನು ಜೇಟ್ಲಿ ಮರೆತಿದ್ದಾರೆ ಎಂದು ಅಣುಕಿಸಿದರು.

ಬಡತನ ತೊಡೆದು ಹಾಕುವ ಉದ್ದೇಶದ ಯಾವುದೇ ಯೋಜನೆಯನ್ನು ಟೀಕಿಸುವರಿಗೆ ನಾವು ಉತ್ತರಿಸಬಾರದು. ಮನ್ರೆಗಾ ಹಸಿವು ನಿರ್ಮೂಲನೆ ಮಾಡಿದೆ, ಆದಾಯ ಯೋಜನೆಯು ಬಡತದಿಂದ ಅವರನ್ನು ಮೇಲೆತ್ತಿದೆ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.