ನವದೆಹಲಿ: ಜಿಎಸ್‌ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು 9ನೇ ಕಂತಿನಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಮೂಲಕ ಇದುವರೆಗೂ 4,9033 ಕೋಟಿ ರೂ. ಹಂಚಿಕೆ ಮಾಡಿದೆ.
ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹಣದಲ್ಲಿ 23 ರಾಜ್ಯಗಳಿಗೆ 5,516.60 ಕೋಟಿ ರೂ. ಹಾಗೂ 483.40 ಕೋಟಿ ರೂ. ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು & ಕಾಶ್ಮೀರ ಮತ್ತು ಪುದುಚೇರಿ) ಬಿಡುಗಡೆ ಮಾಡಲಾಗಿದೆ ಎಂದು ಜಿಎಸ್‌ಟಿ ಮಂಡಳಿ ತಿಳಿಸಿದೆ.
ಉಳಿದ ಐದು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಜಿಎಸ್‌ಟಿ ಅನುಷ್ಠಾನದಿಂದ ಆದಾಯದಲ್ಲಿ ಅಂತರ ಇಲ್ಲ ಎಂದು ಹೇಳಿದೆ.
ಇದನ್ನೂ ಓದಿ: ದಾಖಲೆ ಬೆಲೆಗೆ ಮೆಣಸಿನಕಾಯಿ ಮಾರಾಟ: ಗದಗದ ರೈತನಿಗೆ ಸನ್ಮಾನ
ರಾಜ್ಯಗಳಿಗೆ ನೀಡಲಾದ 1,06,830 ಕೋಟಿ ರೂ. ಪೈಕಿ ಈವರೆಗೆ ಒಟ್ಟು 42,000 ಕೋಟಿ ರೂ. ಒದಗಿಸಲಾಗಿದೆ. ಜಿಎಸ್‌ಟಿ ಅನುಷ್ಠಾನದ ಕಾರಣದಿಂದ ಉಂಟಾಗುವ ನಷ್ಟದ ಕೊರತೆ ಆದಾಯದಲ್ಲಿ ಅಂದಾಜು 1.10 ಲಕ್ಷ ಕೋಟಿ ರೂ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾಗಿ ಕೇಂದ್ರ ಸರ್ಕಾರ ವಿಶೇಷ ವಿಂಡೋ ಮೂಲಕ ಸಾಲ ಪಡೆಯುತ್ತದೆ.
ಒಂಭತ್ತು ಹಂತಗಳಲ್ಲಿ ಸಾಲ ಮಾಡಿದ ಕೇಂದ್ರ ಅಕ್ಟೋಬರ್ 23, ನವೆಂಬರ್ 2, ನವೆಂಬರ್ 9, ನವೆಂಬರ್ 23, ಡಿಸೆಂಬರ್ 1, ಡಿಸೆಂಬರ್ 7, ಡಿಸೆಂಬರ್ 14, ಡಿಸೆಂಬರ್ 21 ಮತ್ತು ಡಿಸೆಂಬರ್ 28ರಂದು ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ.
ಈ ವಾರ ಬಿಡುಗಡೆಯಾದ ಮೊತ್ತವು ರಾಜ್ಯಗಳಿಗೆ ಒದಗಿಸಿದ 9ನೇ ಕಂತಾಗಿದೆ. ಈ ವಾರ ಶೇ. 5.15 ಬಡ್ಡಿ ದರದಲ್ಲಿ ಎರವಲು ಪಡೆದಿದೆ. ಇಲ್ಲಿಯವರೆಗೆ ಕೇಂದ್ರವು ವಿಶೇಷ ಸಾಲ ಪಡೆಯುವ ವಿಂಡೋ ಮೂಲಕ ಸರಾಸರಿ ಶೇ. 4.74ರಷ್ಟು ಬಡ್ಡಿ ದರದಲ್ಲಿ 4,9033 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 7019.23 ಕೋಟಿ ರೂ. ನಷ್ಟ ಪರಿಹಾರ ಲಭ್ಯವಾಗಿದೆ.