ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ತಂದಿಟ್ಟಿರುವ ಆರ್ಥಿಕ ಕುಸಿತದ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಸಂಗ್ರಹಿಸಲು 2020-21ರ ಹಣಕಾಸು ವರ್ಷದ ಏಪ್ರಿಲ್ 1 ರಿಂದ ಮೊದಲಾರ್ಧದಲ್ಲಿ ಕೇಂದ್ರ ಸರ್ಕಾರ 4.88 ಲಕ್ಷ ಕೋಟಿ ರೂ. ಎರವಲು ಪಡೆಯಲಿದೆ ಎಂದು ಹಣಕಾಸು ಕಾರ್ಯದರ್ಶಿ ಅತಾನು ಚಕ್ರವರ್ತಿ ತಿಳಿಸಿದ್ದಾರೆ.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2020-21ರ ಬಜೆಟ್‌ನಲ್ಲಿ ನೂತನ ಹಣಕಾಸು ವರ್ಷದಲ್ಲಿ ಒಟ್ಟು ಸಾಲವನ್ನು 7.8 ಲಕ್ಷ ಕೋಟಿ ರೂ. ಹೊಂದಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ 7.1 ಲಕ್ಷ ಕೋಟಿ ರೂ. ಅಂದಾಜಿಸಲಾಗಿದೆ. ಒಟ್ಟು ಸಾಲವು ಹಿಂದಿನ ಸಾಲಗಳ ಮರುಪಾವತಿ ಸಹ ಒಳಗೊಂಡಿದೆ.
2020-21ರ ಬಜೆಟ್ ಮಂಡಿಸಿದ ಸೀತಾರಾಮನ್ ಅವರು, 2019-20ನೇ ಸಾಲಿನ ನಿವ್ವಳ ಮಾರುಕಟ್ಟೆ ಸಾಲ 4.99 ಲಕ್ಷ ಕೋಟಿ ರೂ. ಮತ್ತು 2020-21ನೇ ಸಾಲಿಗೆ ಇದು 5.36 ಲಕ್ಷ ಕೋಟಿ ರೂ. ಇರಲಿದೆ ಎಂದಿದ್ದರು.
2020-21ರ ಆರ್ಥಿಕ ವರ್ಷದ ಸಾಲದ ಪ್ರಮಾಣವು ಸರ್ಕಾರದ ಬಂಡವಾಳ ವೆಚ್ಚದ ಕಡೆಗೆ ಸಾಗುತ್ತಿದ್ದು, ಅದು ಶೇ 21ಕ್ಕಿಂತ ಹೆಚ್ಚಾಗಿದೆ.
ನಾನು ಮೊದಲೇ ಹೇಳಿದಂತೆ ಕೆಲವು ನಿರ್ದಿಷ್ಟ ಮೂಲಸೌಕರ್ಯ ಹಣಕಾಸು ಕಂಪನಿಗಳಿಗೆ ಧನಸಹಾಯಕ್ಕಾಗಿ ಸುಮಾರು 22,000 ಕೋಟಿ ರೂ. ಇಕ್ವಿಟಿಗೆ ಹಂಚಿಕೆ ಮಾಡಲಾಗುವುದು. ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚು ಅಗತ್ಯವಿರುವ ದೀರ್ಘಕಾಲೀನ ಹಣಕಾಸು ಒದಗಿಸಲಾಗುತ್ತದೆ. ಅದು ಬೆಳವಣಿಗೆಯ ಪ್ರಚೋದನೆಗಳನ್ನು ಉತ್ತೇಜಿಸುತ್ತದೆ ಎಂದು ಫೆಬ್ರವರಿ 1ರಂದು ಹೇಳಿದ್ದರು.
ಸರ್ಕಾರವು ತನ್ನ ಹಣಕಾಸಿನ ಕೊರತೆಯನ್ನು ಸರಿದೂಗಿಸಲು ವಾಯ್ದೆ ಭದ್ರತೆಗಳು ಮತ್ತು ಖಜಾನೆ ಸೆಕ್ಯುರಿಟಿಸ್ ಮೂಲಕ ಮಾರುಕಟ್ಟೆಯಿಂದ ಹಣವನ್ನು ಸಂಗ್ರಹಿಸುತ್ತದೆ. ಬಜೆಟ್ ಮುಂದಿನ ಹಣಕಾಸು ವರ್ಷದಲ್ಲಿ ಹಣಕಾಸಿನ ಕೊರತೆಯನ್ನು ಶೇ 3.5ಕ್ಕೆ ನಿಗದಿಪಡಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 3.8ರಷ್ಟರಿಂದ ಕಡಿಮೆ ಆಗಿದೆ.