ETV Bharat / business

ಹಣದ ಅಭಾವ ನೀಗಿಸಲು ಸರ್ಕಾರ ಆರ್‌ಬಿಐನಿಂದ ಸಾಲ ಪಡೆಯಲಿ: ವಿತ್ತ ತಜ್ಞ ಡಾ.ಸಿಂಗ್ - ಸರ್ಕಾರದ ಸಾಲ

ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಹಿರಿಯ ಅರ್ಥಶಾಸ್ತ್ರಜ್ಞರಾಗಿ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ನೀತಿ ಮತ್ತು ಸಾಲ ನಿರ್ವಹಣಾ ವಿಭಾಗದಲ್ಲಿ ಸಂಶೋಧನಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ಡಾ.ಚರಣ್ ಸಿಂಗ್, ಸರ್ಕಾರವು ನೇರವಾಗಿ ಆರ್‌ಬಿಐನಿಂದ ಸಾಲ ಪಡೆಯುವುದರಿಂದ ಹಿಂದಕ್ಕೆ ಸರಿಯಬಾರದು. ಇದನ್ನು ಹಣಗಳಿಕೆಯ ಕೊರತೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಲಹೆ ಕೊಟ್ಟಿದ್ದಾರೆ.

RBI
ಆರ್​ಬಿಐ
author img

By

Published : Jan 6, 2021, 6:38 PM IST

Updated : Jan 6, 2021, 7:13 PM IST

ನವದೆಹಲಿ : ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಸ್ಥಿತಿಯಿಂದಾಗಿ ಈ ವರ್ಷ ದೇಶದ ಬಲೂನಿಂಗ್ ಕೊರತೆ* (ಅತ್ಯಧಿಕ ಖರ್ಚು) ಪ್ರಮಾಣ ಜಿಡಿಪಿಯ ಶೇ 6-7ರಷ್ಟು ಮುಟ್ಟುವ ನಿರೀಕ್ಷೆಯಿದ್ದು, ಈ ಅಭಾವ ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ಸಾಲ ಪಡೆಯಬೇಕಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಅಂದಾಜಿನ ಪ್ರಕಾರ ಹಣಕಾಸಿನ ಕೊರತೆ 7.96 ಲಕ್ಷ ಕೋಟಿ ರೂ. ಎಂದಿದ್ದಾರೆ. ಇದು 2020-21ರ ಹಣಕಾಸು ವರ್ಷದ ಜಿಡಿಪಿಯ ಶೇ.3.5ರಷ್ಟಿದೆ.

ಕೋವಿಡ್ ಸಾಂಕ್ರಾಮಿಕವು ದೇಶದಲ್ಲಿ 1,50,000 ಅಧಿಕ ಜನರನ್ನು ಮತ್ತು ವಿಶ್ವದಾದ್ಯಂತ 1.8 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಖರ್ಚು ಹೆಚ್ಚಾಗಿದೆ. ವಿನಾಯತಿ ನೀಡಬೇಕಾದ ತುರ್ತು ಪರಿಸ್ಥಿತಿಯಲ್ಲಿ ಆದಾಯ ಸಂಗ್ರಹಣೆ ತೀವ್ರವಾಗಿ ಕುಂಠಿತಗೊಂಡಿದೆ.

ಆರ್ಥಿಕ ಪುನರುಜ್ಜೀವನಕ್ಕಾಗಿ ಉದ್ಯಮ ಎದುರು ನೋಡುತ್ತಿದೆ. ಬಿಕ್ಕಟ್ಟಿನ ಪರಿಸ್ಥಿತಿಯು ಸರ್ಕಾರದ ಹಣಕಾಸಿನ ಸಾಲ ಶೇ.50ರಷ್ಟು ಹೆಚ್ಚಿಸುವಂತೆ ಮಾಡಲಿದೆ. ಬಜೆಟ್ ಅಂದಾಜು ಸುಮಾರು 8 ಲಕ್ಷ ಕೋಟಿ ರೂ.ಗಳಿಂದ 12 ಲಕ್ಷ ಕೋಟಿ ರೂ. ಏರಿಕೆಯಾಗಿದೆ.

ಅಗ್ರೋ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಡಾ.ಚರಣ್ ಸಿಂಗ್ ಅವರು 'ಈಟಿವಿ ಭಾರತ' ಜತೆ ಮಾತನಾಡಿ, ಸರ್ಕಾರವು ತನ್ನ ಕಲ್ಯಾಣ ಕಾರ್ಯಕ್ರಮ ಮತ್ತು ಇತರ ಖರ್ಚುಗಳಿಗೆ ಸಾಲ ಪಡೆಯುವ ಅಗತ್ಯವಿದೆ. ಇದು ಈ ಮೊದಲಿನಿಂದಲೂ ಎರವಲು ಪಡೆಯುತ್ತಿತ್ತು. ಆದರೆ, ಈ ಬಾರಿ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸಾಲ ಪಡೆಯಬೇಕಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದರು.

ಈ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಹಿರಿಯ ಅರ್ಥಶಾಸ್ತ್ರಜ್ಞರಾಗಿ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ನೀತಿ ಮತ್ತು ಸಾಲ ನಿರ್ವಹಣಾ ವಿಭಾಗದಲ್ಲಿ ಸಂಶೋಧನಾ ನಿರ್ದೇಶಕರಾಗಿ ಕೆಲಸ ಮಾಡಿದ ಡಾ.ಚರಣ್ ಸಿಂಗ್, ಸರ್ಕಾರವು ನೇರವಾಗಿ ಆರ್‌ಬಿಐನಿಂದ ಸಾಲ ಪಡೆಯುವುದರಿಂದ ಹಿಂದಕ್ಕೆ ಸರಿಯಬಾರದು. ಇದನ್ನು ಹಣಗಳಿಕೆಯ ಕೊರತೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಇದನ್ನೂ ಓದಿ: ಹೊಸ ಸ್ವರೂಪದಲ್ಲಿ ರಸ್ತೆಗಿಳಿಯಲಿದೆ ಟಾಟಾ ಸಫಾರಿ ಎಸ್​ಯುವಿ

ಹಣಕಾಸು ಅಂತರವನ್ನು ತುಂಬಲು ಸರ್ಕಾರವು ಹಣದ ಕೊರತೆ ಆಶ್ರಯಿಸಬೇಕಾಗಿದ್ದು, ಇದಕ್ಕಾಗಿ ನಾಚಿಕೆಪಡಬಾರದು. ವರ್ಷ ಕಳೆಯುತ್ತಿದ್ದಂತೆ ಅವರು ಹೋಗಬೇಕಾಗಿರುವುದು ಇಲ್ಲಿಯೇ ಎಂದು ನಾನು ಭಾವಿಸುತ್ತೇನೆ ಎಂದು ಡಾ.ಸಿಂಗ್ ಹೇಳಿದರು.

ಹಣಗಳಿಕೆಯ ಕೊರತೆಯು ಹಣದುಬ್ಬರಕ್ಕೆ ಕಾರಣವಾಗುವುದಿಲ್ಲ

ಕೇಂದ್ರದ ಯಾವುದೇ ನಿರ್ಧಾರವು ಆರ್ಥಿಕತೆಯಲ್ಲಿ ಹಣದುಬ್ಬರ ಒತ್ತಡಕ್ಕೆ ಕಾರಣವಾಗಬಹುದು ಎಂಬ ಭಯವನ್ನು ಅರ್ಥಶಾಸ್ತ್ರಜ್ಞ ತಳ್ಳಿ ಹಾಕಿದ್ದಾರೆ. ಸಿಪಿಐ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ.7.3ಕ್ಕೆ ಮತ್ತು 2020ರ ಅಕ್ಟೋಬರ್‌ನಲ್ಲಿ ಶೇ.7.6ಕ್ಕೆ ಏರಿಕೆ ಆಗಿರುವುದರಿಂದ ಬೆಲೆಯ ಒತ್ತಡಗಳು ಕಾಣಿಸಿಕೊಳ್ಳುತ್ತಿವೆ ಎಂದು ಡಿಸೆಂಬರ್‌ನಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು.

ನೀವು ದೇಶದ ಸೆಂಟ್ರಲ್ ಬ್ಯಾಂಕ್‌ನಿಂದ ಸಾಲ ಪಡೆದರೆ ಅದು ಹಣದುಬ್ಬರ ಎಂದು ಸಾಮಾನ್ಯ ಕಾಲದಲ್ಲಿ ಸಾಕಷ್ಟು ರಂಗು ಮತ್ತು ಕೂಗುಗಳು ಕೇಳಿ ಬರುತ್ತವೆ. ಇದು ಯಾವ ದೇಶದಲ್ಲಿನ ಹಣದುಬ್ಬರ ಎಂದು ನಾನು ಯಾವಾಗಲೂ ಕೇಳಿದ್ದೇನೆ.

ನೀವು 2008ರ ಬಿಕ್ಕಟ್ಟನ್ನು ನೋಡಿದರೆ ಅಮೆರಿಕ, ಇಂಗ್ಲೆಂಡ್, ಯುರೋಪ್​ನ ಕೇಂದ್ರ ಬ್ಯಾಂಕ್​ಗಳ ಬ್ಯಾಲೆನ್ಸ್ ಶೀಟ್​ಗಳು ಮೂರರಿಂದ ನಾಲ್ಕು ಬಾರಿ ವಿಸ್ತರಿಸಲ್ಪಟ್ಟವು. ಆದರೆ, ಹಣದುಬ್ಬರ ಘಟಿಸಲಿಲ್ಲ ಎಂದು ಹೇಳಿದರು.

ಹಿಂದೆಂದೂ ಕಂಡಿಲ್ಲದಂತ ಕೇಂದ್ರ ಬಜೆಟ್

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗವು ಸಾರ್ವಜನಿಕ ಹಣಕಾಸಿನ ದೃಷ್ಟಿಕೋನದಿಂದ ಬಹಳ ಕಷ್ಟಕರವಾದ ಸವಾಲು ಒಡ್ಡುತ್ತಿರುವುದರಿಂದ, ಮುಂಬರುವ ಕೇಂದ್ರ ಬಜೆಟ್ ಹಲವು ವಿಧಗಳಲ್ಲಿ ಹಿಂದೆಂದೂ ಕಂಡಿಲ್ಲದಂತೆ ಇರಲಿದೆ ಎಂದು ಡಾ.ಚರಣ್ ಸಿಂಗ್ ಅಭಿಪ್ರಾಯಪಟ್ಟರು.

1918ರ ಸ್ಪ್ಯಾನಿಷ್ ಫ್ಲೂ ಕೂಡ 18 ತಿಂಗಳ ಕಾಲ ಜಗತ್ತನ್ನು ಇನ್ನಿಲ್ಲದಂತೆ ಕಾಡಿತ್ತು. ಯಾವುದೇ ತೆರಿಗೆ ಸಂಗ್ರಹವಿಲ್ಲದ ಸಮಯದಲ್ಲಿ ಜನರಿಗೆ ಸಬ್ಸಿಡಿ, ಔಷಧಿ, ಆರೋಗ್ಯ, ಆಹಾರ ಇತ್ಯಾದಿಗಳ ಮೂಲಕ ಬೆಂಬಲ ನೀಡಬೇಕಾಗಿದೆ.

ಆರ್ಥಿಕ ಬೆಳವಣಿಗೆ ಕುಸಿತ, ಆದಾಯ ಸ್ವೀಕೃತಿ ಇಳಿಕೆಯಾಗಿದ್ದರೆ ಖರ್ಚು ಮಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಜೆಟ್ ಮಂಡಿಸುವುದು ಸುಲಭವಲ್ಲ. ಸಾಮಾನ್ಯ ಸ್ಥಿತಿ ಯಾವಾಗ ಮರಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲವಾದ್ದರಿಂದ ಆರ್ಥಿಕತೆಯನ್ನು ಹೇಗೆ ಪುನರುಜ್ಜೀವನಗೊಳಿಸುವುದು ಎಂದು ಹಣಕಾಸು ಸಚಿವರಿಗೆ ದೊಡ್ಡ ಸವಾಲಾಗಿದೆ ಎಂದು ಚರಣ್ ಸಿಂಗ್ ಹೇಳಿದರು.

ಭಾರತದಲ್ಲಿನ ಅನಿಶ್ಚಿತತೆಯನ್ನು ಗಮನದಲ್ಲಿ ಇಟ್ಟುಕೊಂಡು ಇದು ಒಂದು ಅನನ್ಯ ಬಜೆಟ್ ಆಗಲಿದೆ. ಇದರಲ್ಲಿ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹಣಕಾಸು ಸಚಿವರು ತಮ್ಮ ಎಲ್ಲ ಶಕ್ತಿಯನ್ನು ಹಾಕಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಬಲೂನಿಂಗ್ ಕೊರತೆ ಎಂದರೇನು?

ಬಲೂನಿಂಗ್ ಕೊರತೆ ಎಂದರೆ ದಾಖಲೆ ಅಥವಾ ಹೆಚ್ಚಿನ ಮಿಲಿಟರಿ ಖರ್ಚು ಸೇರಿ ತನ್ನ ಆರ್ಥಿಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಸರ್ಕಾರವು ಹೆಚ್ಚಿನ ಸಾಲ ಪಡೆಯುವ ವಿತ್ತೀಯ ಸ್ಥಿತಿ.

Last Updated : Jan 6, 2021, 7:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.