ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಎಲ್) ವರದಿ ಅನ್ವಯ, 2020ರಲ್ಲಿ ಜಾಗತಿಕ ನಿರುದ್ಯೋಗಿಗಳ ಸಂಖ್ಯೆ 2.5 ಕೋಟಿಯಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಿದೆ.
ಈ ವರ್ಷದಲ್ಲಿ ಸುಮಾರು ಅರ್ಧ ಶತಕೋಟಿ ಜನರು ತಾವು ಬಯಸಿದಕ್ಕಿಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಅವರಿಗೆ ವಹಿಸಿರುವ ಕೆಲಸಕ್ಕೆ ಅನುಗುಣವಾಗಿ ಸಾಕಷ್ಟು ವೇತನ ಇರುವುದಿಲ್ಲ ಎಂದು ಐಎಎಲ್ ತನ್ನ ವರದಿಯಲ್ಲಿ ತಿಳಿಸಿದೆ.
ಸೋಮವಾರ ಬಿಡುಗಡೆಯಾದ 'ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಹೊರನೋಟ: ಟ್ರೆಂಡ್ಸ್ 2020 (ವೆಸೊ)' ವರದಿ ಪ್ರಕಾರ, ಕಳೆದ ಒಂಬತ್ತು ವರ್ಷಗಳಿಂದ ಜಾಗತಿಕ ನಿರುದ್ಯೋಗವು ಸರಿಸುಮಾರು ಸ್ಥಿರವಾಗಿದೆ. ಆದರೆ, ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತಿದೆ. ಜಾಗತಿಕ ಕಾರ್ಮಿಕ ಶಕ್ತಿ ಹೆಚ್ಚಾದಂತೆ ಸಾಕಷ್ಟು ಹೊಸ ಉದ್ಯೋಗಗಳು ಇಲ್ಲವಾಗಿವೆ. ಕಾರ್ಮಿಕ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸುವವರಿಗೆ ಉತ್ಪಾದನೆಯು ಹೀರಿಕೊಳ್ಳುತ್ತಿದೆ ಎಂದಿದೆ.
2020ರಲ್ಲಿ ನಿರುದ್ಯೋಗಿಗಳ ಸಂಖ್ಯೆ ಸುಮಾರು 2.5 ಕೋಟಿಯಷ್ಟು ಹೆಚ್ಚಾಗಲಿದೆ ಎಂದು ಐಎಎಲ್ ಮುನ್ಸೂಚನೆ ನೀಡಿದೆ. ಐಎಲ್ಒ ವಿಶ್ವಸಂಸ್ಥೆಯ ಏಜೆನ್ಸಿಯಾಗಿದ್ದು, ಸಾಮಾಜಿಕ ನ್ಯಾಯವನ್ನು ಮುನ್ನಡೆಸುವುದು ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಯೋಗ್ಯವಾದ ಕೆಲಸದ ವಾತಾವರಣ ಸೃಷ್ಟಿಸುವುದು ಅದರ ಧ್ಯೇಯವಾಗಿದೆ.
ಲಕ್ಷಾಂತರ ಸಾಮಾನ್ಯ ಜನರಿಗೆ ಕೆಲಸದ ಮೂಲಕ ಉತ್ತಮ ಜೀವನ ಕಂಡುಕೊಳ್ಳುವುದು ಹೆಚ್ಚು ಕಷ್ಟಕರವಾಗಿದೆ ಎಂದು ಐಎಲ್ಒ ಮಹಾನಿರ್ದೇಶಕ ಗೈ ರೈಡರ್ ಹೇಳಿದರು.
ನಿರಂತರ ಮತ್ತು ಗಣನೀಯವಾಗಿ ಏರಿಕೆಯಾಗುತ್ತಿರುವ ಕೆಲಸ ಸಂಬಂಧಿತ ಅಸಮಾನತೆಗಳು ಮತ್ತು ಕೆಲಸದಿಂದ ಹೊರಗಿಡುವಿಕೆ. ಯೋಗ್ಯವಾದ ಕೆಲಸ ಹಾಗೂ ಉತ್ತಮ ಭವಿಷ್ಯ ಕಂಡುಕೊಳ್ಳುವುದಕ್ಕೆ ಸವಾಲುಗಳು ಎದುರಾಗಿವೆ. ಸಾಮಾಜಿಕ ಒಗ್ಗಟ್ಟು ಚಿಂತಾಜನಕವಾಗಿದ್ದು, ಇಂದೊಂದು ಅತ್ಯಂತ ಗಂಭೀರವಾದ ಸಂಶೋಧನಾ ವರದಿಯಾಗಿದೆ ಎಂದು ರೈಡರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಪಂಚದಾದ್ಯಂತ ನಿರುದ್ಯೋಗಿಗಳ ಸಂಖ್ಯೆ ಸುಮಾರು 18.8 ಕೋಟಿ ಇದ್ದು, 16.5 ಕೋಟಿ ಜನರಿಗೆ ಸಾಕಾಗುವಷ್ಟು ಸಂಬಳದ ಕೆಲಸವಿಲ್ಲ. 12 ಕೋಟಿ ಜನರು ಸಕ್ರಿಯವಾಗಿ ಕೆಲಸ ಹುಡುಕುವುದನ್ನು ಬಿಟ್ಟುಬಿಟ್ಟಿದ್ದಾರೆ. ಇದು ಕಾರ್ಮಿಕ ಮಾರುಕಟ್ಟೆಯ ಪ್ರವೇಶದ ಕೊರತೆಯಾಗಿದೆ. ವಿಶ್ವಾದ್ಯಂತ ಒಟ್ಟಾರೆ 47 ಕೋಟಿಗೂ ಅಧಿಕ ಜನರು ನಿರುದ್ಯೋಗ ಸಂಬಂಧಿತ ಸಮಸ್ಯೆಗಳಿಂದ ಬಾಧಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.