ETV Bharat / business

ವಿಶ್ವ ಬ್ಯಾಂಕ್​ನ 'ಉದ್ಯಮಿ ಸ್ನೇಹಿ ವ್ಯಾಪಾರ' ಸಾಲಿಗೆ ಬೆಂಗಳೂರು ಸೇರ್ಪಡೆ: ನಿರ್ಮಲಾ ಸೀತಾರಾಮನ್ - World Bank

ವಿಶ್ವಬ್ಯಾಂಕ್​ನ ಮುಂದಿನ ಶ್ರೇಯಾಂಕದಲ್ಲಿ ಕೋಲ್ಕತ್ತಾ ಮತ್ತು ಬೆಂಗಳೂರು ಕೂಡ ಉತ್ತಮ ವ್ಯಾಪಾರ ಸ್ನೇಹಿ ವಾತಾವರಣದಲ್ಲಿ ಸ್ಥಾನ ಪಡೆಯಲಿವೆ. ಇದು ದೆಹಲಿ ಮತ್ತು ಮುಂಬೈಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 24, 2019, 6:33 PM IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪಾವತಿಯನ್ನು ಇನ್ನಷ್ಟು ಸರಳಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಬ್ಯಾಂಕ್​ನ ಸುಲಲತಿ ವ್ಯವಹಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವನ್ನು ಇನ್ನಷ್ಟು ಸುಧಾರಿಸಲು ಸರಳೀಕೃತ ಜಿಎಸ್​ಟಿ ಸಹಾಯ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವ ಬ್ಯಾಂಕ್​ನ ವ್ಯವಹಾರ ಶ್ರೇಯಾಂಕ ಸೂಚ್ಯಂಕದಲ್ಲಿ ಭಾರತ 14 ಸ್ಥಾನಗಳ ಏರಿಕೆ ಕಂಡಿದೆ. ಮುಂದಿನ ಕೆಲವು ವರ್ಷಗಳಲ್ಲಿ ದೇಶವು ಅಗ್ರ 50ರ ಒಳಗೆ ಇರಬೇಕೆಂಬ ಗುರಿ ಹೊಂದಲಾಗಿದೆ. ರಾಜ್ಯಗಳು ಸಹ ಸುಧಾರಣೆಗೆ ತಮ್ಮ ಪ್ರಯತ್ನಗಳನ್ನು ನಡೆಸಬೇಕಾಗುತ್ತದೆ ಎಂದು ಹೇಳಿದರು.

ಭಾರತದಲ್ಲಿ ವಿಶೇಷವಾಗಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ವ್ಯಾಪಾರ ಸ್ನೇಹಿ ವಾತಾವರಣವಿದೆ. ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅನುಷ್ಠಾನವು ಭಾರತದ ವ್ಯವಹಾರ ಶ್ರೇಣಿಯನ್ನು ಸುಧಾರಿಸಲು ಸಹಾಯ ಮಾಡಿದೆ ಎಂದು ಸಚಿವರು ಹೇಳಿದರು.

ವಿಶ್ವಬ್ಯಾಂಕ್​ನ ಮುಂದಿನ ಶ್ರೇಯಾಂಕದಲ್ಲಿ ಕೋಲ್ಕತ್ತಾ ಮತ್ತು ಬೆಂಗಳೂರು ಕೂಡ ಉತ್ತಮ ವ್ಯಾಪಾರ ಸ್ನೇಹಿ ವಾತಾವರಣದಲ್ಲಿ ಸ್ಥಾನ ಪಡೆಯಲಿವೆ. ಇದು ದೆಹಲಿ ಮತ್ತು ಮುಂಬೈಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ ಎಂದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.