ETV Bharat / business

ಸಾಲ ನಿಷೇಧ ಗಡುವು ವಿಸ್ತರಣೆ ಆದೇಶಕ್ಕೆ ಸುಪ್ರೀಂ ನಕಾರ : ಕೋರ್ಟ್ ತೀರ್ಪು ಸ್ವಾಗತಿಸಿದ ಉದಯ್ ಕೊಟಾಕ್​ - Uday Kotak on loan moratorium

ಎಲ್ಲಾ ಸಾಲದಾತರಲ್ಲಿ ಆರು ತಿಂಗಳ ನಿಷೇಧ ಒಟ್ಟುಗೂಡಿಸುವ ಬಡ್ಡಿ 13,500-14,000 ಕೋಟಿ ರೂ.ಯಷ್ಟಾಗುತ್ತದೆ. 2 ಕೋಟಿ ರೂ.ವರೆಗೆ ಸಾಲ ಹೊಂದಿರುವ ಸಾಲಗಾರರಿಗೆ ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿತ್ತು ..

Uday Kotak
Uday Kotak
author img

By

Published : Mar 23, 2021, 4:08 PM IST

ನವದೆಹಲಿ : ಹಿರಿಯ ಬ್ಯಾಂಕರ್ ಉದಯ್ ಕೊಟಾಕ್ ಅವರು ಸಾಲ ನಿಷೇಧದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿದೆ. 'ಇದು ಬ್ಯಾಂಕ್​ಗಳು ತೆಗೆದುಕೊಳ್ಳಬೇಕಾದ ವಾಣಿಜ್ಯ ನಿರ್ಧಾರ' ಎಂದು ಹೇಳಿದ್ದಾರೆ.

ಕೊನೆಯದಾಗಿ ಪ್ರಜ್ಞೆ ಮೇಲುಗೈ ಸಾಧಿಸಿದೆ. ಇದೊಂದು ವಾಣಿಜ್ಯಾತ್ಮಕ ನಿರ್ಧಾರವಾಗಿದೆ. ಅದನ್ನು ಬ್ಯಾಂಕ್​ಗಳಿಗೆ ಬಿಡಬೇಕು ಎಂದು ಕೊಟಾಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಟಿವಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

2020ರ ಆಗಸ್ಟ್ 31ರ ನಂತರ ಸಾಲದ ನಿಷೇಧ ವಿಸ್ತರಿಸದಿರುವ ಕೇಂದ್ರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್​ ತನ್ನ ತೀರ್ಪಿನಲ್ಲಿ ನಿರಾಕರಿಸಿದೆ. ಇದು ಪಾಲಿಸಿ ನಿರ್ಧಾರ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಹಾದಿಯಲ್ಲಿ ಸಾಗಿದ ನಿಸ್ಸಾನ್​ ಇಂಡಿಯಾ!

ಆರು ತಿಂಗಳ ಸಾಲ ನಿಷೇಧದ ಅವಧಿಗೆ ಸಾಲಗಾರರಿಂದ ಯಾವುದೇ ಚಕ್ರ ಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಬಾರದು ಎಂದು ನಿರ್ದೇಶಿಸಿದೆ, ಕಳೆದ ವರ್ಷ ಕೋವಿಡ್​-19 ಸಾಂಕ್ರಾಮಿಕದ ನಡುವೆ ಇಎಂಐ ಪಾವತಿ ಗಡುವು ವಿಸ್ತರಿಸಲಾಗಿತ್ತು.

ಐಸಿಆರ್​ಎ ಉಪಾಧ್ಯಕ್ಷ (ಹಣಕಾಸು ವಲಯದ ರೇಟಿಂಗ್ಸ್) ಅನಿಲ್ ಗುಪ್ತಾ ಮಾತನಾಡಿ, ಎಲ್ಲಾ ಸಾಲದಾತರಲ್ಲಿ ಆರು ತಿಂಗಳ ನಿಷೇಧ ಒಟ್ಟುಗೂಡಿಸುವ ಬಡ್ಡಿ 13,500-14,000 ಕೋಟಿ ರೂ.ಯಷ್ಟಾಗುತ್ತದೆ. 2 ಕೋಟಿ ರೂ.ವರೆಗೆ ಸಾಲ ಹೊಂದಿರುವ ಸಾಲಗಾರರಿಗೆ ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿತ್ತು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.