ETV Bharat / business

ದೇಶದ ಆರ್ಥಿಕತೆ ಆಮೆಗತಿಯಲ್ಲಿ ಸಾಗುತ್ತಿದೆ: ಹಣಕಾಸು ಸಚಿವಾಲಯ - undefined

ಕೇಂದ್ರಿಯ ಸಾಂಖ್ಯಿಕ ಕಚೇರಿ (ಸಿಎಸ್ ಒ) 3ನೇ ತ್ರೈಮಾಸಿಕದ ರಾಷ್ಟ್ರೀಯ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳ ಪರಿಷ್ಕೃತ ದತ್ತಾಂಶದ ಪ್ರಕಾರ 2018-19ರ ಸಾಲಿನ ಆರ್ಥಿಕ ಬೆಳವಣಿಗೆ ಶೇ 7.2ರಿಂದ ಶೇ 7ರ ಪ್ರಮಾಣದಲ್ಲಿ ಸಾಗುತ್ತಿದೆ.

ಸಾಂದರ್ಭಿಕ ಚಿತ್ರ: ಚಿತ್ರ ಕೃಪೆ; ಗೆಟ್ಟಿ
author img

By

Published : May 3, 2019, 5:04 PM IST

ನವದೆಹಲಿ: ಜಾಗತಿಕ ಮಟ್ಟದಲ್ಲಿ ಎಮರ್ಜಿಂಗ್​ ಮಾರುಕಟ್ಟೆ ಎಂದು ಹೆಸರು ಪಡೆಯುತ್ತಿರುವ ಭಾರತದ ಆರ್ಥಿಕತೆ ಪ್ರಸ್ತುತ 'ನಿಧಾನಗತಿಯಲ್ಲಿ ಸಾಗುತ್ತಿದೆ' ಎಂಬುದನ್ನು ಸ್ವತಃ ಹಣಕಾಸು ಸಚಿವಾಲಯ ಒಪ್ಪಿಕೊಂಡಿದೆ.

ನಿಶ್ಚಿತ ಹೂಡಿಕೆಯಲ್ಲಿ ತೀವ್ರ ಏರಿಕೆ, ಕ್ಷೀಣಿಸುತ್ತಿರುವ ಖಾಸಗಿ ಗ್ರಾಹಕರ ಬಳಕೆಯ ಪ್ರಮಾಣ ಹಾಗೂ ರಫ್ತಿನ ಇಳಿಕೆ ಸೇರಿದಂತೆ ಇತರ ದೇಶಿ ಕಾರಣಗಳಿಂದ 2018-19ನೇ ಸಾಲಿನ ಆರ್ಥಿಕತೆ ಆಮೆ ವೇಗದಲ್ಲಿ ಸಾಗುತ್ತಿದೆ ಎಂದು ವರದಿ ತಿಳಿಸಿದೆ.

ಕೇಂದ್ರಿಯ ಸಾಂಖ್ಯಿಕ ಕಚೇರಿ (ಸಿಎಸ್ ಒ) 3ನೇ ತ್ರೈಮಾಸಿಕದ ರಾಷ್ಟ್ರೀಯ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳ ಪರಿಷ್ಕೃತ ದತ್ತಾಂಶದ ಪ್ರಕಾರ 2018-19ರ ಸಾಲಿನ ಆರ್ಥಿಕ ಬೆಳವಣಿಗೆ ಶೇ 7.2ರಿಂದ ಶೇ 7ರ ಪ್ರಮಾಣದಲ್ಲಿ ಸಾಗುತ್ತಿದೆ. ಶೇ 7ರಷ್ಟು ಬೆಳವಣಿಗೆ ಕಳೆದ ಐದು ವರ್ಷಗಳಲ್ಲೇ ಕೆಳಮಟ್ಟದ್ದಾಗಿದೆ ಎಂದು ಹೇಳಿದೆ.

ಮಾರ್ಚ್ ತಿಂಗಳ ಮಾಸಿಕ ಆರ್ಥಿಕ ವರದಿಯ ನಂತರ ಹಣಕಾಸಿನ ಸಚಿವಾಲಯ, ರೆಪೋ ದರದಲ್ಲಿ ಕಡಿತ ಮತ್ತು ಬ್ಯಾಂಕ್​ಗಳ ನಗದು ಹರಿವಿನ ಹೆಚ್ಚಳದ ಮೂಲಕ ಆರ್ಥಿಕ ಬೆಳವಣಿಗೆ ಉದ್ವಿಗ್ನತೆ ಸರಿದೂಗಿಸಲು ಪ್ರಯತ್ನಿಸಿದೆ ಎಂದು ತಿಳಿಸಿದೆ.

2018-19ರ ಜಿಡಿಪಿ ಬೆಳವಣಿಗೆ ಕಳೆದ ಐದು ವರ್ಷಗಳಲ್ಲಿ ಶೇ 7ಕ್ಕೆ ಬಂದು ನಿಂತಿದೆ. 2013-14ನೇ ಸಾಲಿನಲ್ಲಿ ಬೆಳವಣಿಗೆ ಶೇ 6.4, 2014-15ರಲ್ಲಿ ಶೇ 7.4ರಷ್ಟು, 2015-16ರಲ್ಲಿ ಶೇ 8.2ರಷ್ಟು ಹಾಗೂ 2016-17 ಹಾಗೂ 2017-18ರ ಸಾಲಿನಲ್ಲಿ ಶೇ 7.2ರಷ್ಟಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.