ETV Bharat / business

ಇ-ಸಿಗರೇಟ್​ ಬೇಕು ಎಂದು ಬಿಎಸ್‌ವೈ ಸೇರಿ ಎಲ್ಲ ಸಿಎಂಗಳಿಗೆ ಪತ್ರ.. ಬರೆದವರು__

ಕೇಂದ್ರ ಸರ್ಕಾರವು ಇ-ಸಿಗರೇಟ್​​ ಮೇಲೆ ನಿಷೇಧ ಹೇರಿತು. ಇದನ್ನು ಖಂಡಿಸಿದ ಇ-ಸಿಗರೇಟ್​ ವ್ಯಾಪಾರಿಗಳ ಸಂಘವು, ನಿಷೇಧಕ್ಕೆ ಹಸ್ತಕ್ಷೇಪ ವ್ಯಕ್ತಪಡಿಸಬೇಕೆಂದು ಎಲ್ಲ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದಿದೆ.

ಸಾಂದರ್ಭಿಕ ಚಿತ್ರ
author img

By

Published : Oct 27, 2019, 8:16 PM IST

ನವದೆಹಲಿ: ದೇಶಾದ್ಯಂತ ಎಲೆಕ್ಟ್ರಾನಿಕ್​ ನಿಕೋಟಿನ್ ವಿತರಣಾ ವ್ಯವಸ್ಥೆಗೆ (ಇಎನ್​ಡಿಎಸ್​) ಕಡಿವಾಣ ಹಾಕಿದ ಕೇಂದ್ರ ಸರ್ಕಾರವು ಇ-ಸಿಗರೇಟ್​​ ಮೇಲೆ ನಿಷೇಧ ಹೇರಿತು. ಇದನ್ನು ಖಂಡಿಸಿದ ಇ- ಸಿಗರೇಟ್​ ವ್ಯಾಪಾರಿಗಳ ಸಂಘವು, ನಿಷೇಧಕ್ಕೆ ರಾಜ್ಯ ಸರ್ಕಾರಗಳು ಹಸ್ತಕ್ಷೇಪ ವ್ಯಕ್ತಪಡಿಸಬೇಕೆಂದು ಕೋರಿಕೊಂಡಿದೆ.

ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್​ನ (ಟ್ರೆಂಡ್ಸ್) ವ್ಯಾಪಾರ ಪ್ರತಿನಿಧಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಕನಿಷ್ಠ ಪಕ್ಷ ಬಿಜೆಪಿ ಆಡಳಿತ ಇರದ ರಾಜ್ಯಗಳಾದರೂ ಈ ಬಗ್ಗೆ ಬೆಂಬಲ ನೀಡಲಿವೆ ಎಂಬ ಭರವಸೆ ಇದೆ ಎಂದು ಸಂಘದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವ್ಯಾಪಾರಿಗಳು ಆಯಾ ರಾಜ್ಯಗಳು ಸ್ವತಂತ್ರ ಅಧ್ಯಯನ ನಡೆಸಿ ಇ-ಸಿಗರೇಟ್‌ಗಳ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಮತ್ತು ತರ್ಕಬದ್ಧವಾದ ನಿರ್ಧಾರಕ್ಕೆ ಬರಲು ಅದು ಒತ್ತಾಯಿಸಿದೆ.

ಜನತೆಯ ಆರೋಗ್ಯವು ಆಯಾ ರಾಜ್ಯಗಳ ವಿಷಯವಾಗಿದೆ. ರಾಜ್ಯಗಳ ಆರೋಗ್ಯ ಇಲಾಖೆಗಳು ಇ-ಸಿಗರೇಟ್​ ಬಗ್ಗೆ ಸ್ವತಂತ್ರವಾಗಿ ಅಧ್ಯಯನ ನಡೆಸಿ ಬಳಿಕ ಕೇಂದ್ರ ಅವರಿಂದ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಕನಿಷ್ಠ ಬಿಜೆಪಿ ಅಲ್ಲದ ರಾಜ್ಯಗಳಿಂದ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಟ್ರೆಂಡ್ಸ್ ಸಲಹೆಗಾರ ಪ್ರವೀಣ್ ರಿಖಿ ತಿಳಿಸಿದ್ದಾರೆ.

ಆರೋಗ್ಯ ಸಂಬಂಧಿತ ಅಪಾಯಗಳನ್ನು ಉಲ್ಲೇಖಿಸಿ ಸೆಪ್ಟೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇ-ಸಿಗರೇಟ್ ಹಾಗೂ ಅದಕ್ಕೆ ಸಂಬಂಧಿಸಿದ್ದ ಉತ್ಪನ್ನಗಳ ಉತ್ಪಾದನೆ, ಆಮದು, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿ ಶಿಕ್ಷಾರ್ಹ ಅಪರಾಧ ಎಂದು ಹೇಳಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.