ETV Bharat / business

ಸ್ವಾತಂತ್ರ್ಯದ ಬಳಿಕ ಭಾರತಕ್ಕೆ ಎದುರಾದ ಬಹುದೊಡ್ಡ ಸವಾಲು ಕೊರೊನಾ​: RBI ಮಾಜಿ ಗವರ್ನರ್​ - ಕೋವಿಡ್ ಸಾಂಕ್ರಾಮಿಕ

ಸಾಂಕ್ರಾಮಿಕ ರೋಗವು ಪ್ರಥಮ ಬಾರಿಗೆ ಅಪ್ಪಳಿಸಿದಾಗ ಲಾಕ್‌ಡೌನ್‌ಗಳ ಪರಿಣಾಮವಾಗಿ ಸವಾಲುಗಳು ಹೆಚ್ಚಾಗಿ ಆರ್ಥಿಕತೆಯ ಮೇಲಿತ್ತು. ಈಗ ಸವಾಲುಗಳು ಆರ್ಥಿಕ ಮತ್ತು ವೈಯಕ್ತಿಕವಾಗಿವೆ. ನಾವು ಮುಂದೆ ಚಲಿಸಿದಂತೆ ಅದರಲ್ಲಿ ಸಾಮಾಜಿಕ ಅಂಶ ಸೇರಿರಲಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದರು.

Raghuram Rajan
Raghuram Rajan
author img

By

Published : May 16, 2021, 3:14 AM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕವು ಸ್ವಾತಂತ್ರ್ಯದ ನಂತರ ಭಾರತ ಎದುರಿಸಿದ ಬಹುದೊಡ್ಡ ಸವಾಲು. ನಾನಾ ಕಾರಣಗಳಿಂದಾಗಿ ಜನರಿಗೆ ನೆರವಾಗಲು ಅನೇಕ ಕ್ಷೇತ್ರಗಳಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಯೂನಿವರ್ಸಿಟಿ ಆಫ್ ಚಿಕಾಗೊ ಸೆಂಟರ್ ಆಯೋಜಿಸಿದ ವರ್ಚುವಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜನ್, ಭಾರತದ ಎಂಎಸ್‌ಎಂಇ ವಲಯಕ್ಕೆ ತ್ವರಿತ ದಿವಾಳಿತನ ಪ್ರಕ್ರಿಯೆಯ ಅಗತ್ಯವಿದೆ. ಈ ಸಾಂಕ್ರಾಮಿಕ ರೋಗವು ಭಾರತಕ್ಕೆ ಒಂದು ದುರಂತ ಸಮಯ ತಂದೊಡ್ಡಿದೆ. ಕೋವಿಡ್​-19 ಸಾಂಕ್ರಾಮಿಕವು ಸ್ವಾತಂತ್ರ್ಯದ ನಂತರ ಭಾರತದ ಬಹು ದೊಡ್ಡ ಸವಾಲಾಗಿದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗವು ಪ್ರಥಮ ಬಾರಿಗೆ ಅಪ್ಪಳಿಸಿದಾಗ ಲಾಕ್‌ಡೌನ್‌ಗಳ ಪರಿಣಾಮವಾಗಿ ಸವಾಲುಗಳು ಹೆಚ್ಚಾಗಿ ಆರ್ಥಿಕತೆಯ ಮೇಲಿತ್ತು. ಈಗ ಸವಾಲುಗಳು ಆರ್ಥಿಕ ಮತ್ತು ವೈಯಕ್ತಿಕವಾಗಿವೆ. ನಾವು ಮುಂದೆ ಚಲಿಸಿದಂತೆ ಅದರಲ್ಲಿ ಸಾಮಾಜಿಕ ಅಂಶ ಸೇರಿರಲಿದೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚಿನ ವಾರಗಳಲ್ಲಿ ಭಾರತದಲ್ಲಿ ನಿತ್ಯ 3 ಲಕ್ಷಕ್ಕೂ ಅಧಿಕ ಹೊಸ ಕೋವಿಡ್​ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚುತ್ತಿದೆ.

ಸಾಂಕ್ರಾಮಿಕದ ಪರಿಣಾಮಗಳಲ್ಲಿ ನಾವು ವಿವಿಧ ಕಾರಣಗಳಿಗಾಗಿ ಸರ್ಕಾರದ ಉಪಸ್ಥಿತಿ ಕಾಣುತ್ತಿಲ್ಲ. ಕೋವಿಡ್​-19 ರೋಗಿಗಳಿಗೆ ಮಹಾರಾಷ್ಟ್ರ ಸರ್ಕಾರವು ಆಮ್ಲಜನಕ ಹೊಂದಿರುವ ಹಾಸಿಗೆಗಳನ್ನು ಒದಗಿಸಲು ಸಮರ್ಥವಾಗಿದೆ. ಅನೇಕ ಕ್ಷೇತ್ರಗಳಲ್ಲಿ ಸರ್ಕಾರದ ಪಾತ್ರವು ಕಾರ್ಯನಿರ್ವಹಿಸುವಿಕೆ ಕಾಣಿಸುತ್ತಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.