ಕೋಲ್ಕತಾ: ರಾಷ್ಟ್ರವ್ಯಾಪಿ ಲಾಕ್‌ಡೌನ್ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಮಧ್ಯಮ ಅಥವಾ ದೀರ್ಘಕಾಲೀನ ಪ್ರಭಾವ ನಿರ್ಣಯಿಸುವುದು ಪ್ರಸ್ತುತ ದಿನ ತುಂಬಾ ಕಷ್ಟಕರವಾಗಿದೆ ಎಂದು ದೇಶದ ಅತಿದೊಡ್ಡ ಸಾಲಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೇಳಿದೆ.
ಮುಂದಿನ ಎರಡು ಅಥವಾ ಮೂರು ತ್ರೈಮಾಸಿಕಗಳಲ್ಲಿ ಬ್ಯಾಂಕ್ ಅಲ್ಪಾವಧಿ ಬೆಳವಣಿಗೆ ಎದುರು ನೋಡಲಿದೆ. ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿನ ಲಾಕ್‌ಡೌನ್ ಪರಿಣಾಮವನ್ನು ಈ ಸಮಯದಲ್ಲಿ ನಿರ್ಣಯಿಸುವುದು ಕಷ್ಟಕರ ಎಂದು ಹೆಸರು ಹೇಳಲು ಇಚ್ಛಿಸದ ಎಸ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ನಾವು ಬಹಳ ಎಚ್ಚರಿಕೆಯಿಂದ ದಿಕ್ಸೂಚಿ ಹಾಕಿಕೊಳ್ಳಬೇಕಿದೆ. ಭಾರತವು ಯುವ ದೇಶ ಮತ್ತು ಬೆಳೆಯುತ್ತಿರುವ ಆರ್ಥಿಕತೆ ಆಗಿರುವುದರಿಂದ ಒಂದು ವಹಿವಾಟು ನಡೆಸುವುದು ಖಚಿತ ಎಂಬುದನ್ನು ಮನವರಿಕೆ ಮಾಡಬೇಕಿದೆ ಎಂದು ಸಾಲ ವಿಭಾಗದ ಹಿರಿಯ ಅಧಿಕಾರಿ ಹೇಳಿದ್ದಾರೆ
ತುರ್ತು ಕೋವಿಡ್ ಕ್ರೆಡಿಟ್ ಲೈನ್ಗೆ ಬ್ಯಾಂಕ್, ಪ್ರಥಮ ಬಾರಿಗೆ ಶೇ 10ರಷ್ಟು ಕಾರ್ಯನಿರತ ಬಂಡವಾಳ ಒದಗಿಸಿದೆ. ಇದನ್ನು ಸ್ಟ್ಯಾಂಡರ್ಡ್ ಆಸ್ತಿ ಹೊಂದಿರುವ ಎಲ್ಲ ಗ್ರಾಹಕರಿಗೆ ವಿಸ್ತರಿಸಲಾಯಿತು. ನಂತರ ಇದನ್ನು ಇತರ ಬ್ಯಾಂಕ್ಗಳು ಇದನ್ನೇ ಅನುಸರಿಸುತ್ತವೆ ಎಂದರು.
ವೈರಸ್ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಸಾಲ ಮರುಪಾವತಿ ಮೂರು ತಿಂಗಳ ವಿನಾಯತಿಯು ಎಸ್‌ಬಿಐನ ಸುಮಾರು ಶೇ 20-25ರಷ್ಟು ಕಾರ್ಪೊರೇಟ್ ಸಾಲಗಾರರು ಪ್ರಯೋಜನ ಪಡೆದಿದ್ದಾರೆ. ಆರ್‌ಬಿಐನ ಎಲ್‌ಟಿಆರ್‌ಒ (ದೀರ್ಘಕಾಲೀನ ರೆಪೊ ಕಾರ್ಯಾಚರಣೆ) ಬ್ಯಾಂಕ್ಗಳಿಗೆ ಸೌಲಭ್ಯವು ದ್ರವ್ಯತೆ ಪಡೆಯಲು ಸಹಕಾರಿಯಾಗಿದೆ. ಎಸ್‌ಬಿಐ ಈ ದ್ರವ್ಯತೆ ಸೌಲಭ್ಯದ ಶೇ 20-25ರಷ್ಟು ತೆಗೆದುಕೊಂಡಿದೆ ಎಂದರು.