ETV Bharat / business

ಅಮೆರಿಕ ವಿರುದ್ಧದ ವಾಣಿಜ್ಯ ಸಮರದಲ್ಲಿ ಭಾರತದ ನೆರವು ಕೋರಿದ ಚೀನಾ -

ಏಕಪಕ್ಷೀಯತೆ ಮತ್ತು ರಕ್ಷಣಾತ್ಮಕತೆಯ ವಿರುದ್ಧದ ಹೋರಾಟದಲ್ಲಿ ಚೀನಾವನ್ನು ಸೇರಲು ಭಾರತಕ್ಕೆ ಆಹ್ವಾನಿಸಿದ ಚೀನಾದ ನೂತನ ರಾಯಭಾರಿ ಸನ್ ವೀಡಾಂಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಅಮೆರಿಕ ಮೊದಲು' ನೀತಿಯನ್ನು ಪ್ರತಿಪಾದಿಸುತ್ತ ಸುಂಕದ ಆಯುಧ ನೀತಿ ಬಳಸುತ್ತಿದ್ದಾರೆ ಎಂದು ದೂರಿದರು.

ಸಾಂದರ್ಭಿಕ ಚಿತ್ರ
author img

By

Published : Jul 20, 2019, 4:35 PM IST

ಬೀಜಿಂಗ್: ದ್ವಿಪಕ್ಷೀಯ ವ್ಯಾಪಾರ ಅಸಮತೋಲನದ ಬಗ್ಗೆ ಭಾರತದ ಕಳವಳವನ್ನು ತಾನು ಗೌರವಿಸುವುದಾಗಿ ಹೇಳಿದ ಚೀನಾ, ನೂತನ ವಿಧಾನಗಳ ಮುಖೇನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಿದ್ಧರಿದ್ದೇವೆ. ಅಮೆರಿಕದೊಂದಿಗಿನ ವ್ಯಾಪಾರ ಸಮರದ 'ಏಕಪಕ್ಷೀಯತೆ ಮತ್ತು ರಕ್ಷಣಾತ್ಮಕತೆ'ಯ ವಿರುದ್ಧದ ಹೋರಾಟದಲ್ಲಿ ಬೀಜಿಂಗ್‌ ಜೊತೆ ಸೇರುವಂತೆ ಭಾರತಕ್ಕೆ ಆಹ್ವಾನಿಸಿದೆ.

ಭಾರತಕ್ಕೆ ನಿಯೋಜನೆಗೊಂಡ ಚೀನಾದ ನೂತನ ರಾಯಭಾರಿ ಸನ್ ವೀಡಾಂಗ್, 'ವ್ಯಾಪಾರ ಅಸಮತೋಲನದ ಬಗ್ಗೆ ಭಾರತದ ಕಾಳಜಿಯನ್ನು ಚೀನಾ ಹೆಚ್ಚು ಗೌರವಿಸುತ್ತದೆ. ಆದರೆ, ನಾವು ಎಂದಿಗೂ ಭಾರತದ ವಿರುದ್ಧ ವ್ಯಾಪಾರ ಸುಂಕವನ್ನು ಉದ್ದೇಶಪೂರ್ವಕವಾಗಿ ಹೆಚ್ಚುವರಿ ಮಾಡಿಲ್ಲ. ಈ ಬಗ್ಗೆ ಭಾರತ ಅರ್ಥಮಾಡಿಕೊಳ್ಳಬೇಕು' ಎಂದರು.

ಅಕ್ಕಿ ಮತ್ತು ಸಕ್ಕರೆಯ ಆಮದನ್ನು ಹೆಚ್ಚಿಸಲು ಚೀನಾ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತೀಯ ಔಷಧಗಳ ಮತ್ತು ಕೃಷಿ ಸರಕುಗಳ ಆಮದು ಮೇಲಿನ ವ್ಯಾಜ್ಯಗಳ ಪರಿಶೀಲನೆ ಮತ್ತು ಅನುಮೋದನೆಯ ಪ್ರಕ್ರಿಯೆಯನ್ನು ವೇಗಗೊಳಿಸಿದ್ದೇವೆ ಎಂದು ಸನ್ ಹೇಳಿದರು.

ಇತ್ತೀಚಿನ ಅಂಕಿ ಅಂಶಗಳು ಚೀನಾದ ಭಾರತೀಯ ಸರಕುಗಳ ಆಮದು ಪ್ರಮಾಣ ಶೇ15ರಷ್ಟು ಹೆಚ್ಚಾಗಿದೆ ಎಂಬುದನ್ನು ಸಾದರ ಪಡಿಸುತ್ತಿವೆ. ಹೆಚ್ಚಿನ ಭಾರತೀಯ ಸರಕುಗಳು ಚೀನಾದ ಮಾರುಕಟ್ಟೆಯ ಹಾದಿಯನ್ನು ಕಂಡುಕೊಂಡಿವೆ ಎಂದು ಅವರು ತಿಳಿಸಿದರು.

ಈ ವರ್ಷದ ಮೊದಲಾರ್ಧದಲ್ಲಿನ ಅಂಕಿ ಅಂಶಗಳ ಪ್ರಕಾರ, ಚೀನಾ ವಿರುದ್ಧ ಭಾರತದ ವ್ಯಾಪಾರ ಕೊರತೆಯು ಶೇ 5ರಷ್ಟು ಕಡಿಮೆಯಾಗಿದೆ. ಏಕೀಕೃತ ಪ್ರಯತ್ನಗಳಿಂದ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಅಸಮತೋಲನದ ಸಮಸ್ಯೆ ಕ್ರಮೇಣ ಪರಿಹಾರ ಆಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಕಪಕ್ಷೀಯತೆ ಮತ್ತು ರಕ್ಷಣಾತ್ಮಕತೆಯ ವಿರುದ್ಧದ ಹೋರಾಟದಲ್ಲಿ ಚೀನಾವನ್ನು ಸೇರಲು ಭಾರತಕ್ಕೆ ಆಹ್ವಾನಿಸಿದ ಸನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಅಮೆರಿಕ ಮೊದಲು' ನೀತಿ ಪ್ರತಿಪಾದಿಸುತ್ತ ಸುಂಕದ ಆಯುಧ ನೀತಿ ಬಳಸುತ್ತಿದ್ದಾರೆ ಎಂದು ದೂರಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.