ETV Bharat / business

ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ಕೇಂದ್ರದಿಂದ ಅಂತಿಮ ಕೋವಿಡ್ ಪ್ಯಾಕೇಜ್ ಸಾಧ್ಯತೆ!

ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅನ್ನು ಮಧ್ಯಂತರ ಕ್ರಮ ಎಂದು ವಿವರಿಸಬಹುದು. ಅಂತಿಮ ಉತ್ತೇಜಕ ಪ್ಯಾಕೇಜ್ ಕೋವಿಡ್​ ನಂತರದ ದಿನಗಳಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಆರ್‌ಬಿಐ ನಿರ್ದೇಶಕ ಎಸ್ ಗುರುಮೂರ್ತಿ ಹೇಳಿದರು.

RBI Director S Gurumurthy
ಆರ್‌ಬಿಐ ನಿರ್ದೇಶಕ ಎಸ್ ಗುರುಮೂರ್ತಿ
author img

By

Published : Jun 17, 2020, 12:04 AM IST

ಕೋಲ್ಕತ್ತಾ: ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ವೇಳೆ ಕೋವಿಡ್ ಬಳಿಕದ ಅಂತಿಮ ಉತ್ತೇಜಕ ಆರ್ಥಿಕ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಆರ್‌ಬಿಐ ನಿರ್ದೇಶಕ ಎಸ್ ಗುರುಮೂರ್ತಿ ಹೇಳಿದ್ದಾರೆ.

ಭಾರತ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಅವರಿ, ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅನ್ನು ಮಧ್ಯಂತರ ಕ್ರಮ ಎಂದು ವಿವರಿಸಬಹುದು. ಅಂತಿಮ ಉತ್ತೇಜಕ ಪ್ಯಾಕೇಜ್ ಕೋವಿಡ್​ ನಂತರದ ದಿನಗಳಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ ಎಂದರು.

ಚಾರ್ಟರ್ಡ್ ಅಕೌಂಟೆಂಟ್ ಭಾರತವು ಆರ್ಥಿಕತೆಯಿಂದ ಉತ್ಪತ್ತಿಯಾಗುವ ಹಣವನ್ನು ಬಳಸಿಕೊಂಡು ಪ್ಯಾಕೇಜ್​ನೊಂದಿಗೆ ಬಂದಿದೆ. ಕೊರತೆಯನ್ನು ವಿತ್ತೀಯಗೊಳಿಸುವ ಮೂಲಕ ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕ ಹಣವನ್ನು ಮುದ್ರಿಸುತ್ತಿವೆ. ಇಂತಹ ಕ್ರಮ ಕೈಗೊಳ್ಳಲು ಭಾರತಕ್ಕೆ ಕಡಿಮೆ ಅವಕಾಶವಿದೆ ಎಂದು ಹೇಳಿದರು.

ಹಣದ ಕೊರತೆಯ ಬಗ್ಗೆ ಕೇಂದ್ರೀಉ ಬ್ಯಾಂಕ್ ಇದುವರೆಗೂ ಯಾವುದೇ ಅಭಿಪ್ರಾಯ ತೆಗೆದುಕೊಂಡಿಲ್ಲ. ಭಾರತ ಈಗ ವೈವಿಧ್ಯಮಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಪ್ರಿಲ್ 1ರಿಂದ ಮೇ 15ರವರೆಗೆ ಸರ್ಕಾರ 16,000 ಕೋಟಿ ರೂ. ಜನ ಧನ್ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದೆ ಎಂದು ಗುರುಮೂರ್ತಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.