ನವದೆಹಲಿ: ದೇಶದ ಪ್ರಸಕ್ತ ಆರ್ಥಿಕ ವಿದ್ಯಮಾನಗಳ ಕುರಿತು ಎರಡನೇ ಸುದ್ದಿಗೋಷ್ಠಿ ನಡೆಸುತ್ತಿರುವ ಸೀತಾರಾಮನ್ ಅವರು ಮತ್ತೊಂದು ಸುತ್ತಿನ ಬ್ಯಾಂಕ್ಗಳ ವಿಲೀನದ ಸುಳಿವು ಬಿಚ್ಚಿಟ್ಟಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ಗಳ ವಹಿವಾಟು ಒಗ್ಗೂಡಿಸಿದರೇ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿ ಹೊರ ಹೊಮ್ಮಲಿದೆ. ಇದರ ವಹಿವಾಟಿನ ಮೊತ್ತ 17.95 ಲಕ್ಷ ಕೋಟಿಯಷ್ಟು ಆಗಲಿದೆ ಎಂದು ಸೀತಾರಾಮನ್ ಹೇಳಿದರು.
-
#WATCH live from Delhi: Finance Minister Nirmala Sitharaman addresses the media https://t.co/aoZpd0Cd05
— ANI (@ANI) August 30, 2019 " class="align-text-top noRightClick twitterSection" data="
">#WATCH live from Delhi: Finance Minister Nirmala Sitharaman addresses the media https://t.co/aoZpd0Cd05
— ANI (@ANI) August 30, 2019#WATCH live from Delhi: Finance Minister Nirmala Sitharaman addresses the media https://t.co/aoZpd0Cd05
— ANI (@ANI) August 30, 2019
ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದಾಗಿ ಬ್ಯಾಂಕ್ಗಳ ಅನುತ್ಪಾದಕ ಆಸ್ತಿಯ ಮೊತ್ತವು ಕ್ಷೀಣಿಸುತ್ತಿದೆ. ಈ ಹಿಂದೆ 8.65 ಲಕ್ಷ ಕೋಟಿ ರೂ. ಇದ್ದ ಎನ್ಪಿಎ ₹ 7.90 ಲಕ್ಷಕ್ಕೆ ತಲುಪಿದೆ ಎಂದರು.
ಕೆನರಾ ಬ್ಯಾಂಕ್ ಜೊತೆಗೆ ಸಿಂಡಿಕೆಟ್ ಬ್ಯಾಂಕ್ನ ವಹಿವಾಟು ಸೇರಿದರೇ 4ನೇ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಲಿದೆ. ಇದರ ವಾಣಿಜ್ಯ ಮೊತ್ತ 15.20 ಲಕ್ಷ ಕೋಟಿ ರೂ.ಗೆ ತಲುಪಲಿದೆ. ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ಗಳನ್ನು ಜೊತೆಗೂಡಿಸಿದರೇ ಇವುಗಳು ಐದನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.