ETV Bharat / business

ಚೀನಾ ವಸ್ತುಗಳನ್ನು ನಿಷೇಧಿಸಬಾರದು, ಇದರಿಂದ ಅವರ ಆರ್ಥಿಕತೆಗೆ ಯಾವುದೇ ನಷ್ಟ ಇಲ್ಲ: ಚಿದಂಬರಂ

ಚೀನಾದ ಸರಕುಗಳನ್ನು ಬಹಿಷ್ಕರಿಸುವುದರಿಂದ ಚೀನಾದ ಆರ್ಥಿಕತೆಗೆ ತೊಂದರೆ ಆಗುವುದಿಲ್ಲ. ಭಾರತದ ರಕ್ಷಣೆಯಂತಹ ಗಂಭೀರ ವಿಷಯಗಳ ಬಗ್ಗೆ ನಾವು ಚರ್ಚಿಸುತ್ತಿರುವಾಗ ಬಹಿಷ್ಕಾರದಂತಹ ಸಮಸ್ಯೆಗಳನ್ನು ನಾವು ತರಬಾರದು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

P chidambaram
ಪಿ. ಚಿದಂಬರಂ
author img

By

Published : Jun 20, 2020, 7:37 PM IST

ನವದೆಹಲಿ: ಭಾರತವು ಸಾಧ್ಯವಾದಷ್ಟು ಸ್ವಾವಲಂಬಿ ರಾಷ್ಟ್ರ ಆಗಬೇಕು. ಆದರೆ ಅದು ವಿಶ್ವದ ಇತರ ರಾಷ್ಟ್ರಗಳಿಂದ ಪ್ರತ್ಯೇಕವಾಗಿಸಲು ಸಾಧ್ಯವಿಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

"ನಾವು ಸಾಧ್ಯವಾದಷ್ಟು ಸ್ವಾವಲಂಬಿಗಳಾಗಬೇಕು. ಆದರೆ ಪ್ರಪಂಚದ ಉಳಿದ ಭಾಗಗಳಿಂದ ನಾವು ಬೇರ್ಪಡಲು ಸಾಧ್ಯವಿಲ್ಲ. ಭಾರತವು ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿ ಮುಂದುವರೆಯಬೇಕು ಮತ್ತು ಚೀನಾದ ಸರಕುಗಳನ್ನು ಬಹಿಷ್ಕರಿಸಬಾರದು. ಭಾರತದೊಂದಿಗಿನ ಚೀನಾದ ವ್ಯಾಪಾರದ ಯಾವ ಭಾಗ ಚೀನಾದ ವಿಶ್ವ ವ್ಯಾಪಾರವಾಗಿದೆ? ಚೀನಾ ಕೂಡ ಒಂದು ಭಾಗವಷ್ಟೇ'' ಎಂದಿದ್ದಾರೆ.

ಚೀನಾದ ಸರಕುಗಳನ್ನು ಬಹಿಷ್ಕರಿಸುವುದರಿಂದ ಚೀನಾದ ಆರ್ಥಿಕತೆಗೆ ತೊಂದರೆ ಆಗುವುದಿಲ್ಲ. ಭಾರತದ ರಕ್ಷಣೆಯಂತಹ ಗಂಭೀರ ವಿಷಯಗಳ ಬಗ್ಗೆ ನಾವು ಚರ್ಚಿಸುತ್ತಿರುವಾಗ ಬಹಿಷ್ಕಾರದಂತಹ ಸಮಸ್ಯೆಗಳನ್ನು ನಾವು ತರಬಾರದು ಎಂದು ಅವರು ಹೇಳಿದ್ದಾರೆ.

ಅಲ್ಲದೆ ಲಡಾಖ್‌ನಲ್ಲಿನ ಭಾರತದ ಭೂ ಪ್ರದೇಶದೊಳಗೆ ಯಾರೂ ಹೊರಗಿನವರು ಇಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಪ್ರಾಯೋಗಿಕವಾಗಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ ಎಂದಿದ್ದಾರೆ.

ಈ ಹಕ್ಕಿಗೆ ಸರ್ಕಾರದ ಉತ್ತರವೇನು? ಈಗ ಚೀನಾ ಇಡೀ ಗಾಲ್ವಾನ್ ಕಣಿವೆಯನ್ನು ಪ್ರತಿಪಾದಿಸುತ್ತಿದೆ. ಭಾರತ ಸರ್ಕಾರವು ಈ ಹಕ್ಕನ್ನು ತಿರಸ್ಕರಿಸುತ್ತದೆಯೇ ಎಂದು ಕೇಳಿದರು. ಇಂದು ಚೀನಿಯರ ಹಕ್ಕನ್ನು ಭಾರತ ಸರ್ಕಾರ ತಿರಸ್ಕರಿಸದಿದ್ದರೆ ಅದು ಭಯಾನಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.