ETV Bharat / business

ಬ್ಯಾಂಕ್​ಗಳಿಗೆ 1.86 ಲಕ್ಷ ಕೋಟಿ ರೂ. ವಂಚನೆ: RBI ವರದಿಯಲ್ಲಿ ಬಹಿರಂಗ - ಬ್ಯಾಂಕಿಂಗ್ ವಲಯ

ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 2019-20ರ ಅವಧಿಯಲ್ಲಿ 8,707 ವಂಚನೆ ಪ್ರಕರಣಗಳಿಂದ 1.86 ಲಕ್ಷ ಕೋಟಿ ರೂ. ಹಾಗೂ 2018-19ರಲ್ಲಿ 6,799 ಪ್ರಕರಣಗಳಿಂದ 71,543 ಕೋಟಿ ರೂ.ಯಷ್ಟು ದಾಖಲಾಗಿವೆ.

Bank frauds
ಬ್ಯಾಂಕ್ ವಂಚನೆ
author img

By

Published : Aug 27, 2020, 10:49 PM IST

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವಾರ್ಷಿಕ ವರದಿಯ ಪ್ರಕಾರ, ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಭಾರತದಲ್ಲಿ ಬ್ಯಾಂಕಿಂಗ್ ವಂಚನೆಗಳ ಮೌಲ್ಯವು 2019-20ರಲ್ಲಿ ದ್ವಿಗುಣಗೊಂಡಿದೆ.

ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 2019-20ರ ಅವಧಿಯಲ್ಲಿ 8,707 ವಂಚನೆ ಪ್ರಕರಣಗಳಿಂದ 1.86 ಲಕ್ಷ ಕೋಟಿ ರೂ. ಹಾಗೂ 2018-19ರಲ್ಲಿ 6,799 ಪ್ರಕರಣಗಳಿಂದ 71,543 ಕೋಟಿ ರೂ.ಯಷ್ಟು ದಾಖಲಾಗಿವೆ.

ಬ್ಯಾಂಕ್​/ ಎಫ್‌ಐಐಗಳು (ಹಣಕಾಸು ಸಂಸ್ಥೆಗಳು) ವರದಿ ಮಾಡಿದ ವಂಚನೆಗಳ ಒಟ್ಟು ಪ್ರಕರಣಗಳ 2019-20ರ ಅವಧಿಯಲ್ಲಿ ಪ್ರಮಾಣದಲ್ಲಿ ಶೇ 28ರಷ್ಟು ಮತ್ತು ಮೌಲ್ಯದಲ್ಲಿ ಶೇ 159ರಷ್ಟು ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಆರ್​ಬಿಐನ ಬ್ಯಾಂಕಿಂಗ್ ವಂಚನೆ ದತ್ತಾಂಶವು 1 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಸಣ್ಣ ಮೊತ್ತವನ್ನು ಒಳಗೊಂಡ ಪ್ರಕರಣಗಳನ್ನುಮ ಇದರಲ್ಲಿ ಸೇರಿಸಲಾಗಿಲ್ಲ.

ಈ ವಂಚನೆ ಪ್ರಕರಣಗಳಲ್ಲಿ ಭಾಗಿ ಆಗಿರುವ ಮೊತ್ತವು ನಷ್ಟದ ಪ್ರಮಾಣವನ್ನು ಪ್ರತಿಬಿಂಬಿಸುವುದಿಲ್ಲ. ವಸೂಲಿಗಳನ್ನು ಅವಲಂಬಿಸಿ ಆಗುವ ನಷ್ಟವು ಕಡಿಮೆಯಾಗುತ್ತದೆ. ಈ ಮೊತ್ತವನ್ನು ಬೇರೆಡೆಗೆ ತಿರುಗಿಸಬೇಕಾಗಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳು ಹೆಚ್ಚು ಬಾಧಿತ

ಸಾರ್ವಜನಿಕ ವಲಯದ ಬ್ಯಾಂಕ್​ಗಳು (ಪಿಎಸ್‌ಬಿ) ವಂಚನೆಯಲ್ಲಿ ಭಾಗಿ ಆಗಿರುವ ಹಣದ ಮೌಲ್ಯವು 2019-20ರಲ್ಲಿ ಶೇ 80ರಷ್ಟಿದ್ದು, 1.48 ಲಕ್ಷ ಕೋಟಿ ರೂ.ಯಷ್ಟಿದೆ. ಒಂದು ವರ್ಷದ ಹಿಂದೆ 63,283 ಕೋಟಿ ರೂ. ಇದ್ದ ವಂಚನೆ ಪ್ರಕರಣಗಳ ಸಂಖ್ಯೆ 4,413ಯಷ್ಟಾಗಿದೆ. ವರ್ಷದ ಹಿಂದೆ 3,568 ಪ್ರಕರಣಗಳು ದಾಖಲಾಗಿದ್ದವು.

ಖಾಸಗಿ ವಲಯದ ಬ್ಯಾಂಕ್​ಗಳು 2020ರ ಹಣಕಾಸು ವರ್ಷದಲ್ಲಿ 34,211 ಕೋಟಿ ರೂ. ಒಳಗೊಂಡ 3,066 ವಂಚನೆ ಪ್ರಕರಣಗಳಿಗೆ ಹೋಲಿಸಿದರೆ, 2019ರಲ್ಲಿ 2,286 ಪ್ರಕರಣಗಳಿಂದ 6,742 ಕೋಟಿ ರೂ. ವಂಚನೆ ನಡೆದಿತ್ತು.

ವಿದೇಶಿ ಬ್ಯಾಂಕ್​ಗಳಲ್ಲಿ ಸಹ ವಂಚನೆ ಪ್ರಕರಣಗಳು ಏರಿಕೆ ಕಂಡಿದೆ. ಆದರೆ ವಂಚನೆಯ ಮೊತ್ತವು ಸ್ವಲ್ಪಮಟ್ಟಿಗೆ ಕುಸಿದಿದೆ. 2020ರ ವಿತ್ತೀಯ ವರ್ಷದಲ್ಲಿ 972 ಕೋಟಿ ರೂ. ಒಳಗೊಂಡ 1,026 ಪ್ರಕರಣಗಳನ್ನು ವರದಿ ಆಗಿದ್ದರೆ, 2019ರಲ್ಲಿ 762 ಪ್ರಕರಣಗಳಿಂದ 955 ಕೋಟಿ ರೂ.ಯಷ್ಟಿತ್ತು.

ಹಣಕಾಸು ಸಂಸ್ಥೆಗಳು 2019ರ ಹಣಕಾಸು ವರ್ಷದಲ್ಲಿ 28 ಪ್ರಕರಣಗಳಿಂದ 2020ರಲ್ಲಿ 15ಕ್ಕೆ ಇಳಿದವು. ಆದರೆ ಹಣದ ಮೌಲ್ಯವು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿ 553 ಕೋಟಿ ರೂ.ಯಿಂದ 2048 ಕೋಟಿ ರೂ.ಗೆ ಏರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.