ETV Bharat / business

ಪಬ್ಜಿ ಔಟ್​, ಫೌಜಿ ಇನ್​... ಹೊಸ ಗೇಮಿಂಗ್​ ಆ್ಯಪ್​ ಘೋಷಿಸಿದ ಅಕ್ಕಿ, ಶೇ.20 ಆದಾಯ ಸೈನಿಕರ ಟ್ರಸ್ಟ್​​ಗೆ - ಆತ್ಮನಿರ್ಭರ ಭಾರತ

ಪ್ರಧಾನಿ ನರೇಂದ್ರ ಮೋದಿ ಅವರ "ಆತ್ಮನಿರ್ಭಾರ ಭಾರತ್" ದ ದೂರದೃಷ್ಟಿಗೆ ಅನುಗುಣವಾಗಿ, ಆಕ್ಷನ್-ಗೇಮ್, ಫೌಜಿಅನ್ನು ಪ್ರಾರಂಭಿಸಲಾಗುವುದು. ಶೀಘ್ರದಲ್ಲೇ ಆರಂಭವಾಗಲಿರುವ ಭಾರತೀಯ ಮಲ್ಟಿಪ್ಲೇಯರ್ ಗೇಮಿಂಗ್​ ಇದಾಗಿದೆ ಎಂದು ಮಾಹಿತಿಯನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

FAU-G
ಎಫ್​ಎಯು
author img

By

Published : Sep 4, 2020, 7:50 PM IST

ನವದೆಹಲಿ: ಭದ್ರತಾ ನಿಯಮ ಉಲ್ಲಂಘಿಸಿದ ಆಪಾದನೆಯಡಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲದ ಜನಪ್ರಿಯ ವಿಡಿಯೋ ಗೇಮಿಂಗ್ ಆ್ಯಪ್​ ಪಬ್ಜಿಗೆ ಸೆಡ್ಡುಹೊಡೆಯಲು ಬಾಲಿವುಡ್​ ನಟ ಅಕ್ಷಯ್ ಕುಮಾರ್ ಅವರು ಮಲ್ಟಿ ಪ್ಲೇಯರ್​ ಆಕ್ಷನ್- ಗೇಮ್ FAU-G (ಫೌಜಿ) ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ "ಆತ್ಮನಿರ್ಭಾರ ಭಾರತ್" ದ ದೂರದೃಷ್ಟಿಗೆ ಅನುಗುಣವಾಗಿ, ಆಕ್ಷನ್-ಗೇಮ್, ಫೌಜಿಅನ್ನು ಪ್ರಾರಂಭಿಸಲಾಗುವುದು. ಶೀಘ್ರದಲ್ಲೇ ಆರಂಭವಾಗಲಿರುವ ಭಾರತೀಯ ಮಲ್ಟಿಪ್ಲೇಯರ್ ಗೇಮಿಂಗ್​ ಇದಾಗಿದೆ ಎಂದು ಮಾಹಿತಿಯನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಆಂದೋಲನವನ್ನು ಬೆಂಬಲಿಸಲು ಆಕ್ಷನ್ ಗೇಮಿಂಗ್​ ಪ್ರಸ್ತುತಪಡಿಸಲು ಹೆಮ್ಮೆಪಡುತ್ತೇನೆ. ನಿರ್ಭಯ ಮತ್ತು ಯುನೈಟೆಡ್​ ಗಾರ್ಡ್ಸ್​ನ FAU-G ಗೇಮಿಂಗ್​. ಮನರಂಜನೆಯ ಜೊತೆಗೆ ಆಟಗಾರರು ನಮ್ಮ ಸೈನಿಕರ ತ್ಯಾಗದ ಬಗ್ಗೆಯೂ ಕಲಿಯುತ್ತಾರೆ. ಗೇಮಿಂಗ್​ನಿಂದ ಗಳಿಸಿದ ನಿವ್ವಳ ಆದಾಯದ ಶೇ 20ರಷ್ಟು ಭಾರತ್​ ​ ಕೆವೀರ್ ಟ್ರಸ್ಟ್​ಗೆ ನೀಡಲಾಗುವುದು ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

  • Supporting PM @narendramodi’s AtmaNirbhar movement, proud to present an action game,Fearless And United-Guards FAU-G. Besides entertainment, players will also learn about the sacrifices of our soldiers. 20% of the net revenue generated will be donated to @BharatKeVeer Trust #FAUG pic.twitter.com/Q1HLFB5hPt

    — Akshay Kumar (@akshaykumar) September 4, 2020 " class="align-text-top noRightClick twitterSection" data=" ">

ಹೊಸ ಗೇಮಿಂಗ್​ ಬಗ್ಗೆ ಮಾತನಾಡಿದ, 'ರುಸ್ತುಮ್' ನಟ, ಭಾರತದಲ್ಲಿ ಯುವಕರಿಗೆ, ಗೇಮಿಂಗ್ ಮನರಂಜನೆಯ ಒಂದು ಪ್ರಮುಖ ರೂಪವಾಗುತ್ತಿದೆ. FAU-G ಗೇಮಿಂಗ್​ ಆಡುವಾಗ ಅವರು ಸೈನಿಕರ ತ್ಯಾಗದ ಬಗ್ಗೆ ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸೈನಿಕರು ಮತ್ತು ಹುತಾತ್ಮರ ಕುಟುಂಬಗಳಿಗೆ ಸಹ ಕೊಡುಗೆ ನೀಡುತ್ತಾರೆ. ಇದರೊಂದಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಲಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.