ನವದೆಹಲಿ: ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಗೀತಾ ಗೋಪಿನಾಥ್ ಅವರು 2019ರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಐಎಂಎಫ್‌ನ ಸಂಶೋಧನಾ ವಿಭಾಗದ ನಿರ್ದೇಶಕರು ಮತ್ತು ನಿಧಿಯ ಆರ್ಥಿಕ ಸಲಹೆಗಾರರನ್ನು ಉಲ್ಲೇಖಿಸಿದ ಸಂಭಾಷಣೆಗೆ ಸ್ವತಃ ಗೀತಾ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
-
thank you Gita Gopinath ji .. I meant every word i said about you on the show .. said in utmost earnestness .. 🙏 https://t.co/VuyJCjfyCI
— Amitabh Bachchan (@SrBachchan) January 22, 2021 " class="align-text-top noRightClick twitterSection" data="
">thank you Gita Gopinath ji .. I meant every word i said about you on the show .. said in utmost earnestness .. 🙏 https://t.co/VuyJCjfyCI
— Amitabh Bachchan (@SrBachchan) January 22, 2021thank you Gita Gopinath ji .. I meant every word i said about you on the show .. said in utmost earnestness .. 🙏 https://t.co/VuyJCjfyCI
— Amitabh Bachchan (@SrBachchan) January 22, 2021
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಬಚ್ಚನ್ ನಡೆಸಿಕೊಂಡು ಬರುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಟಿವಿ ಶೋನಲ್ಲಿ, ಇತ್ತೀಚೆಗೆ ಸ್ಪರ್ಧಿಯೊಬ್ಬರಿಗೆ, 2019ರಿಂದ ಗೀತಾ ಗೋಪಿನಾಥ್ ಅವರು ಯಾವ ಸಂಸ್ಥೆಯ ಮುಖ್ಯ ಹಣಕಾಸು ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಬಚ್ಚನ್ ಅವರು ಹಿಂದಿಯಲ್ಲಿ, ಅವಳ (ಗೀತಾ ಗೋಪಿನಾಥ್) ಮುಖವು ತುಂಬಾ ಸುಂದರವಾಗಿದೆ, ಯಾರೂ ಅವಳನ್ನು ಆರ್ಥಿಕತೆಯೊಂದಿಗೆ ಸಂಬಂಧಿಸಿದವಳು ಎನ್ನುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 100ರ ಗಡಿಯತ್ತ ಡೀಸೆಲ್, ಪೆಟ್ರೋಲ್ ದರ ಕೇಳುವಂತಿಲ್ಲ!
ಈ ವಿಡಿಯೋವನ್ನು ಗೋಪಿನಾಥ್ ಅವರು ಸ್ವತಃ ಹಂಚಿಕೊಂಡು, ಕಾರ್ಯಕ್ರಮದಲ್ಲಿ ತಮ್ಮನ್ನು ಪ್ರಸ್ತಾಪಿಸಿದ್ದಕ್ಕಾಗಿ ಧನ್ಯವಾದ ಹೇಳಿದರು. ಸಾರ್ವಕಾಲಿಕ ಶ್ರೇಷ್ಠ ಬಿಗ್ ಬಿ ಅವರ ದೊಡ್ಡ ಅಭಿಮಾನಿಯಾಗಿ, ಇದನ್ನು ಅವರಿಂದ ಎಂದೂ ನಿರೀಕ್ಷಿಸಿರಲಿಲ್ಲ ಎಂದು ಐಎಂಎಫ್ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.
ಧನ್ಯವಾದಗಳು ಗೀತಾ ಗೋಪಿನಾಥ್ ಜಿ, ಟಿವಿ ಶೋನಲ್ಲಿ ನಾನು ನಿಮ್ಮ ಬಗ್ಗೆ ಅತ್ಯಂತ ಶ್ರದ್ಧೆಯಿಂದ ಅರ್ಥೈಸಿದ್ದೇನೆ ಎಂದು ಅಮಿತಾಬ್ ಪ್ರತಿಕ್ರಿಯೆ ನೀಡಿದ್ದಾರೆ.
-
Ok, I don't think I will ever get over this. As a HUGE fan of Big B @SrBachchan, the Greatest of All Time, this is special! pic.twitter.com/bXAeijceHE
— Gita Gopinath (@GitaGopinath) January 22, 2021 " class="align-text-top noRightClick twitterSection" data="
">Ok, I don't think I will ever get over this. As a HUGE fan of Big B @SrBachchan, the Greatest of All Time, this is special! pic.twitter.com/bXAeijceHE
— Gita Gopinath (@GitaGopinath) January 22, 2021Ok, I don't think I will ever get over this. As a HUGE fan of Big B @SrBachchan, the Greatest of All Time, this is special! pic.twitter.com/bXAeijceHE
— Gita Gopinath (@GitaGopinath) January 22, 2021
ಅಮಿತಾಬ್ ಅವರ ಈ ಹೇಳಿಕೆಗೆ ಟ್ವಿಟರ್ನಲ್ಲಿ ಪರ-ವಿರೋಧ ಅಭಿಪ್ರಾಯ ಹಾಗೂ ಕಾಮೆಂಟ್ಗಳು ವ್ಯಕ್ತವಾಗುತ್ತಿವೆ. ಕೆಲವರು ಅವರು ಹೇಳಿದ್ದು ತಪ್ಪೆಂದರೆ ಮತ್ತೆ ಕೆಲವರು ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.