ನವದೆಹಲಿ: ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಅಡಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಿಭಾಗದಲ್ಲಿ 2,214 ಸ್ವಯಂ ಸೇವಾ ಸಂಸ್ಥೆಗಳು (ಎನ್ಜಿಒ) ನೋಂದಣಿ ಮಾಡಿಕೊಂಡಿವೆ.
ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.
ಎಫ್ಸಿಆರ್ಯ ಅಡಿ 2017ನೇ ಸಾಲಿನಲ್ಲಿ 1,011, 2018ರಲ್ಲಿ 520 ಹಾಗೂ 20109ರಲ್ಲಿ 683 ಎನ್ಜಿಒಗಳು ನೋಂದಾಯಿಸಲ್ಪಟ್ಟಿವೆ. ಒಟ್ಟಾರೆ ಮೂರು ವರ್ಷದಲ್ಲಿ 2,214 ಸ್ವಯಂ ಸೇವಾ ಸಂಸ್ಥೆಗಳು ಸೇರ್ಪಡೆಯಾಗಿವೆ ಎಂದರು.
ನೋದಣಿಯನ್ನು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ವ್ಯಾಪ್ತಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕದಂತಹ ಮೂರು ವಿಭಾಗದಲ್ಲಿವೆ ಎಂದು ರೈ ಅವರು ಲಿಖಿತ ಉತ್ತರದ ಮುಖೇನ ತಿಳಿಸಿದ್ದಾರೆ.