ಮುಂಬೈ: ಯೆಸ್ ಬ್ಯಾಂಕ್‌ನ 2,203 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಕರಣದಲ್ಲಿ ಇತರ 11 ಆರೋಪಿಗಳನ್ನು ಹೆಸರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಹಿಂದಿನ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ 8 ಮಂದಿ ಸೇರಿದಂತೆ 19 ವ್ಯಕ್ತಿಗಳು/ ವಿವಿಧ ಘಟಕಗಳ ವಿರುದ್ಧ 100ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ: ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಪ್ರವರ್ತಕ ಕಪಿಲ್ ವಾಧ್ವಾನ್, ಡಿಎಚ್‌ಎಫ್‌ಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಧೀರಜ್ ವಾಧ್ವಾನ್, ಯೆಸ್ ಬ್ಯಾಂಕ್‌ನ ಮಾಜಿ ಎಂಡಿ & ಸಿಇಒ ರಾಣಾ ಕಪೂರ್, ಅವರ ಪತ್ನಿ ಬಿಂದು, ಅವರ ಪುತ್ರಿಯರಾದ ರಾಧಾ, ರೇಖಾ ಮತ್ತು ರೋಶ್ನಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಧುಲ್ರೆಶ್ ಜೈನ್.
ಇದಲ್ಲದೆ ಕಪೂರ್ ಕುಟುಂಬ ಸಂಬಂಧಿಕರು, ಡಿಎಚ್ಎಫ್ಎಲ್, ಯೆಸ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್, ಡೋಯಿಟ್ ಅರ್ಬನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್, ರಾಬ್ ವೆಂಚರ್ಸ್, ಕೈಟಾ ಅಡ್ವೈಸರ್ಸ್ ಲಿಮಿಟೆಡ್, ಆರ್ಕೆಡಬ್ಲ್ಯೂ ಡೆವಲಪರ್ಸ್, ಮೋರ್ಗನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್, ಬಿಲೀಫ್ ರಿಯಾಲ್ಟಿ, ಗೋಲ್ಡನ್ ವೆಸ್ಟರ್ನ್ ಲಿಮಿಟೆಡ್, ಸಂಪಪ್ತಿ ಟ್ರೇಡ್ ಪ್ರೈ. ಲಿಮಿಟೆಡ್ ಹಾಗೂ ವೇಲೆನ್ಸಿಯಾ ಡೆವಲಪರ್‌ಗಳು ಸೇರಿದ್ದಾರೆ.
ಕಪೂರ್ಸ್ ಮತ್ತು ವಾಧ್ವಾನ್ಗಳಿಗೆ ಸೇರಿದ ಭಾರತ, ನ್ಯೂಯಾರ್ಕ್ ಮತ್ತು ಆಸ್ಟ್ರೇಲಿಯಾದಲ್ಲಿ ಸುಮಾರು 344 ಬ್ಯಾಂಕ್ ಖಾತೆಗಳು, ಹೂಡಿಕೆಗಳು ಮತ್ತು ದುಬಾರಿ ಬೆಲೆಯ ವಾಹನಗಳನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ. ಈ ಸೊತ್ತುಗಳ ಒಟ್ಟಾರೆ ಮೊತ್ತ 2,203 ಕೋಟಿ ರೂ.ಯಷ್ಟಿದೆ.