ನವದೆಹಲಿ: 2 ಬಿಲಿಯನ್ ಬಳಕೆದಾರರಿಗಾಗಿ ಮುಂಬರುವ ಜಾಗತಿಕ ರೋಲ್ಔಟ್ ಭಾಗವಾಗಿ ಲಕ್ಷಾಂತರ ಭಾರತೀಯ ಬಳಕೆದಾರರು ವಾಟ್ಸ್ಆ್ಯಪ್ನಿಂದ ಪರಿಷ್ಕೃತ ನೀತಿಗಳಿಗೆ ಬದ್ಧರಾಗಬೇಕಿದೆ.
ಫೆಬ್ರವರಿ 8ರ ಒಳಗೆ ವಾಟ್ಸ್ಆ್ಯಪ್ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳನ್ನು ಒಪ್ಪಿಕೊಳ್ಳುವಂತೆ ಕೋರಿದೆ. ಒಂದು ವೇಳೆ ಒಪ್ಪಿಗೆ ಸೂಚಿಸದಿದ್ದರೇ ಖಾತೆಗಳು ಅಳಿಸಲಾಗುತ್ತದೆ ಎಂದಿದೆ.
ನಮ್ಮ ಸೇವೆಗಳನ್ನು ಬಳಸಿಕೊಂಡು ಸಂವಹನ ನಡೆಸುವ ವ್ಯವಹಾರಗಳು ನಿಮ್ಮೊಂದಿಗಿನ ಅವರ ಸಂವಹನಗಳ ಬಗ್ಗೆ ಮಾಹಿತಿ ನಮಗೆ ಒದಗಿಸಬಹುದು. ಪ್ರತಿ ವ್ಯವಹಾರದ ಮಾಹಿತಿ ನಮಗೆ ಒದಗಿಸುವಾಗ ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ ಎಂದಿದೆ.
ಇದನ್ನೂ ಓದಿ: ಆರಂಭಿಕ ವಹಿವಾಟಿನಲ್ಲಿ ಜಿಗಿದು ಬಿದ್ದ ಗೂಳಿ: ಈಗ ಕರಡಿ ಮೇಲುಗೈ!
ಕಂಪನಿಗಳು ಕೆಲವು ಸಂದರ್ಭಗಳಲ್ಲಿ ನಿಮ್ಮ ಬಗ್ಗೆ ಮಾಹಿತಿಯನ್ನು ನಮಗೆ ಒದಗಿಸಬಹುದು. ಉದಾ: ಸೇವೆಯನ್ನು ಪತ್ತೆಹಚ್ಚಲು ಮತ್ತು ತಪ್ಪುಗಳನ್ನು ಸರಿಪಡಿಸಲು ನೆರವಾಗುವ ಅಪ್ಲಿಕೇಷನ್ ಸ್ಟೋರ್‌ಗಳ ವರದಿಗಳನ್ನು ಒದಗಿಸಬಹುದು.
ಸೈಬರ್ ಸೆಕ್ಯುರಿಟಿ ಅಸೋಸಿಯೇಷನ್ ಆಫ್ ಇಂಡಿಯಾ ಮಹಾನಿರ್ದೇಶಕ ಕರ್ನಲ್ ಇಂದರ್ಜೀತ್ ಸಿಂಗ್ ಮಾತನಾಡಿ, ವಾಟ್ಸ್ಆ್ಯಪ್ನ ಈ ಹೊಸ ಗೌಪ್ಯತೆ ನೀತಿಯು ನಿಮ್ಮನ್ನು ಉಚಿತ ಬಳಕೆದಾರರಿಗಿಂತ ಹೆಚ್ಚಾಗಿ ಆ್ಯಪ್‌ನಲ್ಲಿ ಉತ್ಪನ್ನವಾಗಿಸುತ್ತದೆ. ನಿಮ್ಮ ಎಲ್ಲ ಸಂಭಾಷಣೆ, ಕರೆ, ಗ್ರೂಪ್ ಚಾಟ್, ಸಂಪರ್ಕ ಡಿಪಿ, ಪಾವತಿ ಸೇರಿ ಇತರ ಮಾಹಿತಿಗಳನ್ನು ಹಂಚಿಕೊಳ್ಳುವ ಯಾವುದೇ ವಿಷಯಗಳು ಗೌಪ್ಯವಾಗಿ ಇರುವುದಿಲ್ಲ. ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ವಾಟ್ಸ್ಆ್ಯಪ್ ಹೇಳಿದ್ದರೂ ಸಹ ನಿಮ್ಮ ಡೇಟಾ ಸುರಕ್ಷಿತವಾಗಿರುವುದಿಲ್ಲ ಎಂದರು.
ವಾಟ್ಸ್ಆ್ಯಪ್ ಹೊಸ ನೀತಿಯ ಪ್ರಮುಖ ನವೀಕರಣಗಳು:
- ವಾಟ್ಸ್ಆ್ಯಪ್ ಸೇವೆ ಮತ್ತು ಡೇಟಾ ಹೇಗೆ ಪ್ರಕ್ರಿಯೆ
- ವಾಟ್ಸ್ಆ್ಯಪ್ ಚಾಟ್ ಸಂಗ್ರಹಿಸಲು ಮತ್ತು ನಿರ್ವಹಿಸಲು ಫೇಸ್‌ಬುಕ್ ಹೋಸ್ಟ್ ಮಾಡಿದ ಸೇವೆಗಳನ್ನು ಹೇಗೆ ಬಳಸಬಹುದು
- ಫೇಸ್‌ಬುಕ್ ಕಂಪನಿ ಉತ್ಪನ್ನಗಳಾದ್ಯಂತ ಏಕೀಕೃತ ಸೇವೆ ನೀಡಲು ವಾಟ್ಸ್ಆ್ಯಪ್ ಫೇಸ್‌ಬುಕ್‌ನೊಂದಿಗೆ ಪಾಲುದಾರಿಕೆ ಹೇಗೆ ಕೈಗೊಳ್ಳುತ್ತದೆ
- ಬಳಕೆದಾರರು ಒಪ್ಪಿದ ನಂತರ ಹೊಸ ನವೀಕರಣಗಳನ್ನು ಕಾಣಿಸುತ್ತವೆ. ಆದರೆ, ಅದು ಫೆಬ್ರವರಿ 8ರ ನಂತರ ಮಾತ್ರ. ಈ ದಿನಾಂಕ ಪೋಸ್ಟ್ ಮಾಡಿ, ಬಳಕೆದಾರರು ವಾಟ್ಸ್ಆ್ಯಪ್ ಬಳಕೆಯನ್ನು ಮುಂದುವರಿಸಲು ನವೀಕರಣಗಳನ್ನು ಸ್ವೀಕರಿಸಬೇಕು