ಬೆಂಗಳೂರು: ಭಾಷೆಯ ವಿಚಾರದಲ್ಲಿ ಕನ್ನಡ ನಾಡು ತಲ್ಲಣದ ಸ್ಥಿತಿಯಲ್ಲಿದೆ. ಬರೀ ಕನ್ನಡ ಮಾತ್ರವಲ್ಲಿ ಭಾರತದ ಎಲ್ಲಾ ಪ್ರದೇಶಿಕ ಭಾಷೆಗಳು ಈ ಸಮಸ್ಯೆಯ ಸುಳಿಗೆ ಸಿಲುಕಿವೆ. ಇದರ ನಡುವೆಯೂ ಕನ್ನಡ ಭಾಷೆಯ ಶಕ್ತಿ, ಸೌಂದರ್ಯ, ಘನತೆಯನ್ನು ತಲೆ ಮಾರುಗಳಿಂದ ಉಳಿಸಿ - ಬೆಳೆಸಿಕೊಂಡು ಬರಲಾಗುತ್ತಿದೆ. ಆದರೆ, ಗೂಗಲ್ ಸರ್ಚ್ ಎಂಜಿನ್ ಇಂತಹ ಘನತೆಯ ಭಾಷೆಗೆ ಕೊಳಕು ಎಂಬ ಬಣ್ಣ ಹಚ್ಚಿದೆ.
ಜಾಗತಿಕ ತಂತ್ರಜ್ಞಾನದಲ್ಲಿ ಗೂಗಲ್ ಸರ್ಚ್ ಎಂಜಿನ್ ಆನ್ಲೈನ್ ಹುಡುಕಾಟದಲ್ಲಿ ಸಿಂಹಪಾಲು ಪಡೆದಿದೆ. ತಾಂತ್ರಿಕವಾಗಿ ಅದು ಏನೇ ಸಾಧಿಸಿದ್ದರೂ ಭಾರತದಲ್ಲೇ, ಅತ್ಯಂಕ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ದೈತ್ಯ ಸರ್ಚ್ ಎಂಜಿನ್ನ ಈ ಅಪಮಾನ ಕನ್ನಡ ಭಾಷಾ ಪ್ರೇಮಿಗಳನ್ನು ಕೆರಳಿಸಿದೆ. ಗೂಗಲ್ ಇಂತಹ ಕೃತ್ಯಗಳ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ ಎಸಗುವ ಹುನ್ನಾರವೊಂದು ನಡೆಸಿದ್ದಾರೆ ಎಂದು ಸಾಮಾಜಿಕ ಜಾಲಾತಣದಲ್ಲಿ ಕಿಡಿ ಕಾರಿದರು.
-
ಯಾವ ಭಾಷೆ ನಮ್ಮ ಜೀವ ಅಂತಿವೋ ಅದೇ ಭಾಷೆ ಇವತ್ತು ಗೂಗಲ್ ಅಲ್ಲಿ ಅಷ್ಟೂ ಕಠೋರವಾಗಿ ಕನ್ನಡ ಒಂದು ಕೆಟ್ಟ ಭಾಷೆ ಅಂತ ಹಾಕಿದಾರೆ, ಇದರ ಮೇಲೆ ಕೂಡಲೇ ಕ್ರಮ ಕೈಗೊಳ್ದಿದರೆ ಎಲ್ಲಾ ಕನ್ನಡಿಗರಿಗೆ ಘೋರ ಅವಮಾನ ವಾಗುವುದು @OPratham @BJP4Karnataka @ShobhaBJP @Tejasvi_Surya @NamKarnataka @Karnataka_DIPR@astitvam @mepratap @ pic.twitter.com/xOIU5QkMsA
— ಆಶ್ವಿನ್ ಶ್ರೀನಿವಾಸ್ (@Ashwinsri668) June 3, 2021 " class="align-text-top noRightClick twitterSection" data="
">ಯಾವ ಭಾಷೆ ನಮ್ಮ ಜೀವ ಅಂತಿವೋ ಅದೇ ಭಾಷೆ ಇವತ್ತು ಗೂಗಲ್ ಅಲ್ಲಿ ಅಷ್ಟೂ ಕಠೋರವಾಗಿ ಕನ್ನಡ ಒಂದು ಕೆಟ್ಟ ಭಾಷೆ ಅಂತ ಹಾಕಿದಾರೆ, ಇದರ ಮೇಲೆ ಕೂಡಲೇ ಕ್ರಮ ಕೈಗೊಳ್ದಿದರೆ ಎಲ್ಲಾ ಕನ್ನಡಿಗರಿಗೆ ಘೋರ ಅವಮಾನ ವಾಗುವುದು @OPratham @BJP4Karnataka @ShobhaBJP @Tejasvi_Surya @NamKarnataka @Karnataka_DIPR@astitvam @mepratap @ pic.twitter.com/xOIU5QkMsA
— ಆಶ್ವಿನ್ ಶ್ರೀನಿವಾಸ್ (@Ashwinsri668) June 3, 2021ಯಾವ ಭಾಷೆ ನಮ್ಮ ಜೀವ ಅಂತಿವೋ ಅದೇ ಭಾಷೆ ಇವತ್ತು ಗೂಗಲ್ ಅಲ್ಲಿ ಅಷ್ಟೂ ಕಠೋರವಾಗಿ ಕನ್ನಡ ಒಂದು ಕೆಟ್ಟ ಭಾಷೆ ಅಂತ ಹಾಕಿದಾರೆ, ಇದರ ಮೇಲೆ ಕೂಡಲೇ ಕ್ರಮ ಕೈಗೊಳ್ದಿದರೆ ಎಲ್ಲಾ ಕನ್ನಡಿಗರಿಗೆ ಘೋರ ಅವಮಾನ ವಾಗುವುದು @OPratham @BJP4Karnataka @ShobhaBJP @Tejasvi_Surya @NamKarnataka @Karnataka_DIPR@astitvam @mepratap @ pic.twitter.com/xOIU5QkMsA
— ಆಶ್ವಿನ್ ಶ್ರೀನಿವಾಸ್ (@Ashwinsri668) June 3, 2021
ಗೂಗಲ್ನಂತಹ ಅತ್ಯಂತ ಜವಾಬ್ದಾರಿಯುತ ಜಾಗತಿಕ ಸಂಸ್ಥೆ ಪ್ರಾದೇಶಿಕ ಭಾಷೆಗಳ ವಿಚಾರ ಬಂದಾಗ ಗಂಭೀರವಾಗಿ ಹಾಗೂ ಪ್ರಬುದ್ಧವಾಗಿ ನಡೆದುಕೊಳ್ಳಬೇಕು. ಈ ಕೂಡಲೇ ಆದ ಪ್ರಮಾದವನ್ನು ಸರಿಪಡಿಸಬೇಕು ಎಂದು ದೊಡ್ಡಮಟ್ಟದ ಅಭಿಯಾನ ನಡೆಯಿತು.
-
Google says #Kannada is the Ugliest Language. Do help me to report this, see the video for steps pic.twitter.com/d2rYmbkCMF
— Sachith H M (@geekysachith) June 3, 2021 " class="align-text-top noRightClick twitterSection" data="
">Google says #Kannada is the Ugliest Language. Do help me to report this, see the video for steps pic.twitter.com/d2rYmbkCMF
— Sachith H M (@geekysachith) June 3, 2021Google says #Kannada is the Ugliest Language. Do help me to report this, see the video for steps pic.twitter.com/d2rYmbkCMF
— Sachith H M (@geekysachith) June 3, 2021
ಸಾವಿರಾರು ಕನ್ನಡಿಗರ ಗೂಗಲ್ ಪೇಜ್ನಲ್ಲಿ ಪ್ರದರ್ಶಿತವಾಗಿದ್ದ ತಪ್ಪು ಮಾಹಿತಿ ನೀಡುತ್ತಿದ್ದ debtconsolidationsquad.com ವೆಬ್ ಪುಟವನ್ನು ರಿಪೋರ್ಟ್ ಮಾಡಿದ್ದು, ಕೆಲವೇ ಸಮಯದಲ್ಲಿ ಗೂಗಲ್ ಆ ಪುಟವನ್ನು ತೆಗೆದು ಹಾಕಿದೆ. ಕಿರು ಚರ್ಚಾ ಪ್ಲಾಟ್ಫಾರ್ಮ್ ಕೋರಾ ಸಹಿತ ಹಲವು ತಾಣಗಳಲ್ಲಿ ಭಾಷಾ ಸಂಗತಿ ಚರ್ಚೆಯಾಗಿದ್ದು, ಜಗತ್ತಿನಲ್ಲಿ ಕೆಟ್ಟ ಮತ್ತು ಕೊಳಕು ಭಾಷೆ ಎಂಬುದು ಇಲ್ಲ ಎಂದು ನೆಟ್ಟಿಗರು ಅಭಿಮತ ವ್ಯಕ್ತಪಡಿಸಿದ್ದಾರೆ.