ಸ್ಯಾನ್ಪ್ರಾನ್ಸಿಸ್ಕೋ: ಫೇಸ್ಬುಕ್ ಮಾಲೀಕತ್ವದ ಜನಪ್ರಿಯ ವಾಟ್ಸ್ಆ್ಯಪ್ 2020ರ ಜನವರಿ 1ರಿಂದ ಕೋಟ್ಯಂತರ ಹಳೆಯ ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ಬ್ಲಾಕ್ಬೆರಿ ಒಎಸ್, ಬ್ಲಾಕ್ಬೆರಿ 10 ಹಾಗೂ ಹಳೆಯ ಆ್ಯಂಡ್ರಾಯ್ಡ್ ಪ್ಲಾಟ್ಫಾರ್ಮ್ ಸಪೋರ್ಟ್ ಮಾಡುವ ಫೋನ್ಗಳಲ್ಲಿ ವಾಟ್ಸ್ಆ್ಯಪ್ ತನ್ನ ಕಾರ್ಯವನ್ನು ಕೊನೆಗೊಳಿಸುತ್ತಿದೆ. ಡಿಸೆಂಬರ್ 31ರಿಂದ ವಿಂಡೋಸ್ ಫೋನ್ಗಳಿಗೆ ನೀಡುತ್ತಿರುವ ತನ್ನ ಸೇವೆಯನ್ನ ಹಿಂದಕ್ಕೆ ಪಡೆಯುತ್ತಿದೆ.
ಕಳೆದ ಮೇ ತಿಂಗಳಲ್ಲಿ ಫೇಸ್ಬುಕ್ ಇಂಕಾ ತನ್ನ ಬ್ಲಾಗ್ನಲ್ಲಿ ಈ ಬಗ್ಗೆ ಬರೆದುಕೊಂಡಿದೆ. ವಿಂಡೋಸ್ ಮತ್ತು ಹಳೆಯ ಆ್ಯಂಡ್ರಾಯ್ಡ್ ಫ್ಲಾಟ್ಫಾರ್ಮ್ ಫೋನ್ಗಳಲ್ಲಿ ವಾಟ್ಸ್ಆ್ಯಪ್ ನೂತನ ಫೀಚರ್ಸ್ಗಳು ಸಹಕರಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ತಿಳಿಸಿತು.
ಬ್ಲಾಕ್ಬೆರಿ ಒಎಸ್, ಬ್ಲಾಕ್ಬೆರಿ 10, ವಿಂಡೋಸ್ ಫೋನ್ ಇವುಗಳನ್ನು ಬಳಸುವವರು ತಮ್ಮ ಡಿವೈಸ್ ಅಪ್ಗ್ರೇಡ್ ಮಾಡುವ ಅಗತ್ಯವಿದೆ. 2020ರ ಫೆಬ್ರವರಿ 1ರ ಬಳಿಕ ಆ್ಯಂಡ್ರಾಯ್ಡ್ ಒಎಸ್ 2.3.7 ಅಥವಾ ಇದಕ್ಕೂ ಹಳೆಯ ವರ್ಷನ್ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿದೆ.