ನವದೆಹಲಿ: ಟೆರೇರಿಯಾ ವಿಡಿಯೋ ಗೇಮ್ ಮಾರ್ಚ್ 18ರಂದು ಸ್ಟೇಡಿಯಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಗೂಗಲ್ ಟ್ವಿಟರ್ ಮೂಲಕ ಪ್ರಕಟಿಸಿದೆ.
ನಿಮ್ಮ ಕಲ್ಪನೆಯನ್ನು ಸಡಿಲಿಸಲು ಸಿದ್ಧರಾಗಿ! ಟೆರೇರಿಯಾ ಮಾರ್ಚ್ 18ರಂದು ಸ್ಟೇಡಿಯಾಕ್ಕೆ ಬಂದಾಗ, ಜಗತ್ತು ನಿಮ್ಮ ಕ್ಯಾನ್ವಾಸ್ ಆಗಿರಲಿದೆ ಎಂದು ಕಂಪನಿಯು ಟ್ವೀಟ್ನಲ್ಲಿ ತಿಳಿಸಿದೆ.
-
Get ready to unleash your imagination! The world will be your canvas when Terraria arrives March 18 on #Stadia. pic.twitter.com/vDbJiANry8
— Stadia (@GoogleStadia) March 10, 2021 " class="align-text-top noRightClick twitterSection" data="
">Get ready to unleash your imagination! The world will be your canvas when Terraria arrives March 18 on #Stadia. pic.twitter.com/vDbJiANry8
— Stadia (@GoogleStadia) March 10, 2021Get ready to unleash your imagination! The world will be your canvas when Terraria arrives March 18 on #Stadia. pic.twitter.com/vDbJiANry8
— Stadia (@GoogleStadia) March 10, 2021
2011ರಲ್ಲಿ ಪ್ರಾರಂಭವಾದ ಟೆರೇರಿಯಾ ಸಾರ್ವಕಾಲಿಕ ಅತ್ಯುತ್ತಮ ಗೇಮ್ ಎಂದು ಜನಪ್ರಿಯವಾಗಿದೆ. ನಾನಾ ಬಗೆಯ ಲೂಟಿ, ಗಣಿಗಾರಿಕೆ, ಅನ್ವೇಷಣೆಯಂತೆ 2ಡಿ ಜತೆ ಜೋಡಣೆ ಹೊಂದಿದೆ.
ಟೆರೇರಿಯಾ ಸಾರ್ವಕಾಲಿಕ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಇಂಡೀ ಗೇಮಿಂಗ್ ಆಗಿದೆ. ಸ್ಟೀಮ್‌ನಲ್ಲಿ ಮಾತ್ರ ಅರ್ಧ ಮಿಲಿಯನ್ ಬಳಕೆದಾರರ ವಿಮರ್ಶೆಗಳನ್ನು ಹೊಂದಿದೆ. 2020ರ ಏಪ್ರಿಲ್ ವೇಳೆಗೆ ಅದರ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 30 ಮಿಲಿಯನ್ ಪ್ರತಿಗಳು ಮಾರಾಟವಾಗಿವೆ.
ಗೂಗಲ್ ಪಿಕ್ಸೆಲ್ ಜಂಕ್ ರೈಡರ್ಸ್, ಎವಿಐಸಿಐ ಇನ್ವೆಕ್ಟರ್ ಮತ್ತು ಪಿಎಸಿ - ಮ್ಯಾನ್ ಮೆಗಾ ಟನಲ್ ಬ್ಯಾಟಲ್ ನೇತೃತ್ವದ ಹೊಸ ಗೇಮ್ಗಳು ಸ್ಟೇಡಿಯಾ ಪ್ರೊ ಸಾಲಿಗೆ ಸೇರ್ಪಡೆಯಾಗಲಿವೆ.