ETV Bharat / business

TCS, Infosys ​ನಿಂದ ಸಾವಿರಾರು ಟೆಕ್ಕಿಗಳ ನೇಮಕ, ರೆಸ್ಯೂಮ್‌ ಹಿಡಿದು ರೆಡಿಯಾಗಿ!

ದೇಶದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಗಳಾದ ಟಿಸಿಎಸ್​ ಹಾಗೂ ಇನ್ಫೋಸಿಸ್​ 2018-19ರ ಅವಧಿಯಲ್ಲಿ 53,303 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರೇ, 2017-18ರಲ್ಲಿ ಕೇವಲ 11,500 ನೌಕರರ ನೇಮಕ ಮಾಡಿಕೊಂಡಿದ್ದವು. 2019-20ರ ಸಾಲಿನಲ್ಲಿ ಶೇ 350ರಷ್ಟು ಹೆಚ್ಚುವರಿ ಟೆಕ್ಕಿಗಳ ನೇಮಕಕ್ಕೆ ಎರಡೂ ಕಂಪನಿಗಳು ಮುಂದಾಗಲಿವೆ.

ಸಾಂದರ್ಭಿಕ ಚಿತ್ರ
author img

By

Published : Apr 24, 2019, 6:54 PM IST

ಬೆಂಗಳೂರು: ಕಳೆದ ಹಣಕಾಸು ವರ್ಷದಲ್ಲಿ ದೇಶದ ವಿವಿಧ ವಲಯಗಳ ನಿಧಾನಗತಿಯ ಬೆಳವಣಿಗೆಯಿಂದ ಉದ್ಯೋಗ ನೇಮಕಾತಿಯ ಪ್ರಮಾಣ ಇಳಿಕೆಯಾಗಿತ್ತು. ಲಕ್ಷಾಂತರ ಎಂಜಿನಿಯರಿಂಗ್ ಪದವೀಧರರು ಟಾಪ್​ ಕಂಪನಿಗಳ ಕದ ತಟ್ಟಲು ತುದಿಗಾಲಲ್ಲಿ ಕಾಯುತ್ತಿದ್ದರು. ಈಗ ಟಿಸಿಎಸ್​ ಹಾಗೂ ಇನ್ಫೋಸಿಸ್​ ಆ ಹಾದಿಯನ್ನು ಸುಗಮಗೊಳಿಸುತ್ತಿವೆ.

ಕಳೆದ ಆರ್ಥಿಕ ವರ್ಷಾಂತ್ಯದ ಮಾರ್ಚ್​ 31ರಲ್ಲಿ ಟಿಸಿಎಸ್​ನ ಮುಂಬೈ ಕೇಂದ್ರ ಕಚೇರಿಯು 29,287 ಉದ್ಯೋಗಿಗಳ ನೇಮಕಕ್ಕೆ ಆದೇಶ ಹೊರಡಿಸಿದ್ದರೇ, ಬೆಂಗಳೂರು ಮೂಲದ ಇನ್ಫೋಸಿಸ್​ 24,016 ಎಂಜಿನಿಯರ್​ಗಳ ನೇಮಕಕ್ಕೆ ಮುಂದಾಗಿದೆ.

2018ರ ಹಣಕಾಸು ವರ್ಷದಲ್ಲಿ ಉಭಯ ಸಂಸ್ಥೆಗಳು 53,303 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರೇ, 2017-18ರ ಸಾಲಿನಲ್ಲಿ ಕೇವಲ 11,500 ನೌಕರರಿಗೆ ಕೆಲಸ ನೀಡಿದ್ದವು. 2018ರ ಆರ್ಥಿಕ ವರ್ಷದಲ್ಲಿ ಟಿಸಿಎಸ್​ 7,775 ಹಾಗೂ ಇನ್ಫೋಸಿಸ್ 3,746 ಉದ್ಯೋಗಿಗಳನ್ನು ಹೈರ್ ಮಾಡಿಕೊಂಡಿತ್ತು ಎಂದು ಫಾರ್ಚ್ಯುನ್ ವರದಿ ತಿಳಿಸಿದೆ.

ದೇಶದ 167 ಬಿಲಿಯನ್ ಡಾಲರ್​ ಮೌಲ್ಯದ ಐಟಿ ಸೇವಾ ಉದ್ಯಮ, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದ್ದು ಉತ್ತಮ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ನಿರುದ್ಯೋಗ ನಿರ್ಮೂಲನೆಯಲ್ಲೂ ಇದು ಮಹತ್ವದ ಪಾತ್ರವಹಿಸಲಿದೆ.

ಭಾರತೀಯ ಐಟಿ ಇಂಡಸ್ಟ್ರಿ ಈ ವರ್ಷ ಹೊಸದಾಗಿ 2.5 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಮುಖ್ಯವಾಗಿ ಡಾಟಾ ಸೈನ್ಸ್, ಡಾಟಾ ಅನಾಲಿಸಿಸ್, ಸಲ್ಯೂಷನ್ ಆರ್ಕಿಟೆಕ್ಸ್​, ಉತ್ಪನ್ನ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್, ಮಷಿನ್ ಲರ್ನಿಂಗ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ), ಬ್ಲಾಕ್​ಚೈನ್ ಮತ್ತು ಸೈಬರ್ ಭದ್ರತೆಯಲ್ಲಿ ಜನರು ಕೆಲಸ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.