ನವದೆಹಲಿ: ವಾಣಿಜ್ಯ ವಾಹನ ಖರೀದಿಸುವ ಗ್ರಾಹಕರಿಗೆ ಹಣಕಾಸಿನ ನೆರವು ನೀಡಲು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಖಾಸಗಿ ಬ್ಯಾಂಕ್ಗಳ ಜತೆಗೆ ಸಹಭಾಗಿತ್ವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಟಾಟಾ ಮೋಟರ್ಸ್ ತಿಳಿಸಿದೆ.
ಗ್ರಾಹಕರಿಗೆ ಹೊಸ ಮತ್ತು ಪೂರ್ವ ಸ್ವಾಮ್ಯದ ವಾಹನಗಳಿಗೆ ಹಣದ ನೆರವನ್ನು ಹೆಚ್ಚಿಸುವ ಉದ್ದೇಶದಿಂದ ಟೈ-ಅಪ್ ಮಾಡಿಕೊಳ್ಳಲಾಗಿದೆ. ವಾಹನ ಖರೀದಿಗೆ ಮುಂದೆ ಬರುವ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಟಾಟಾ ಮೋಟರ್ಸ್ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: ನೀವು ಸೇವಿಸುವ ತುಪ್ಪ ಎಷ್ಟು ಶುದ್ಧ? ಪರಿಶುದ್ಧತೆ ಪತ್ತೆ ಹಚ್ಚುವವರಾರು?
ಈ ಒಪ್ಪಂದಗಳ ಅಡಿಯಲ್ಲಿ ಇಂಧನ ಫೈನಾನ್ಸ್, ಕಾರ್ಯನಿರತ ಬಂಡವಾಳ ಹಣಕಾಸು, ಸೇವಾ ವೆಚ್ಚ ಹಣಕಾಸು ಸೇರಿದಂತೆ ಪೂರಕ ಹಣಕಾಸು ನಿಬಂಧನೆಗಳು ಒಳಪಟ್ಟಿರುತ್ತವೆ. ಎಲ್ಲಾ ಪಾಲುದಾರ ಹಣಕಾಸುದಾರರಿಂದ ಗ್ರಾಹಕರು ಕನಿಷ್ಠ ಔಪಚಾರಿಕತೆಗಳೊಂದಿಗೆ ಆಕರ್ಷಕ ಹಣಕಾಸು ಯೋಜನೆಗಳನ್ನು ಪಡೆಯಬಹುದು ಎಂದು ಹೇಳಿದೆ.
ಇತರ ಬ್ಯಾಂಕ್ಗಳಲ್ಲಿ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಅಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿವೆ. ಎನ್‌ಬಿಎಫ್‌ಸಿಗಳಾದ ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಕೋ ಲಿಮಿಟೆಡ್, ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಸುಂದರಂ ಫೈನಾನ್ಸ್ ಜತೆ ಒಡಂಬಡಿಕೆ ಏರ್ಪಟ್ಟಿದೆ.