ನವದೆಹಲಿ: ಗಣಿತ ಕಲಿಕೆ ಎಂದರೆ ಬಹುತೇಕ ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎಂದು ಭಾವಿಸಿ ಕಲಿಕೆಯಿಂದ ಮಾರುದ್ದ ಸರಿಯುತ್ತಾರೆ. ಇದಕ್ಕೆ ಅಪವಾದ ಎಂಬಂತೆ ಯೂಟ್ಯೂಬ್ನಲ್ಲಿ ಗಣಿತ ಶಿಕ್ಷಕಿಯೊಬ್ಬರು ಅತ್ಯಂತ ಸರಳವಾಗಿ ಲೆಕ್ಕಚಾರದ ವಿಧಾನಗಳನ್ನು ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಶಿಕ್ಷಕಿಯ ಈ ಗುಣಕಾರ ಟ್ರಿಕ್ ಉದ್ಯಮಿ ಆನಂದ್ ಮಹೀಂದ್ರಾ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಆಕರ್ಷಿಸಿ ಮೆಚ್ಚುಗೆ ಗಳಿಸಿದೆ. ಜೊತೆಗೆ ಸಾವಿರಾರು ನೆಟ್ಟಿಗರು ಈ ವಿಡಿಯೋವನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
-
Whaaaat? I didn’t know about this clever shortcut. Wish she had been MY math teacher. I probably would have been a lot better at the subject! #whatsappwonderbox pic.twitter.com/MtS2QjhNy3
— anand mahindra (@anandmahindra) January 22, 2020 " class="align-text-top noRightClick twitterSection" data="
">Whaaaat? I didn’t know about this clever shortcut. Wish she had been MY math teacher. I probably would have been a lot better at the subject! #whatsappwonderbox pic.twitter.com/MtS2QjhNy3
— anand mahindra (@anandmahindra) January 22, 2020Whaaaat? I didn’t know about this clever shortcut. Wish she had been MY math teacher. I probably would have been a lot better at the subject! #whatsappwonderbox pic.twitter.com/MtS2QjhNy3
— anand mahindra (@anandmahindra) January 22, 2020
ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಈ ವಿಡಿಯೋ ಕ್ಲಿಪ್ನಲ್ಲಿ, ಶಿಕ್ಷಕಿಯೊಬ್ಬರು ತಮ್ಮ 9ರ ಗುಣಾಕಾರ ಕೋಷ್ಟಕವನ್ನು ವಿವರಿಸಲು ವಿದ್ಯಾರ್ಥಿಯ ಕೈ ಬೆರಳುಗಳ ಬಳಸಿಕೊಂಡು ಸರಳವಾಗಿ ಹೇಳಿದ್ದಾರೆ.
"ವ್ಹಾವ್?, ಈ ಬುದ್ಧಿವಂತಿಕೆಯ ಶಾರ್ಟ್‌ಕಟ್ ಬಗ್ಗೆ ನನಗೆ ತಿಳಿದಿರಲಿಲ್ಲ. ಅವರು ನನ್ನ ಗಣಿತ ಶಿಕ್ಷಕಿಯಾಗಿದ್ದಿದ್ದರೆ ನಾನೂ ಬಹುಶಃ ಈ ವಿಷಯದಲ್ಲಿ ಇನ್ನೂ ಸಾಕಷ್ಟು ಉತ್ತಮವಾಗಿ ಕಲೆಯುತ್ತಿದ್ದೆ'' ಎಂದು ಆನಂದ್ ಮಹೀಂದ್ರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
-
Can’t tell you how many of my life’s issues this one simple calculation has solved wow! Sending it to #byju to include it in their teaching methods. https://t.co/nC8qIojGVF
— Shah Rukh Khan (@iamsrk) January 22, 2020 " class="align-text-top noRightClick twitterSection" data="
">Can’t tell you how many of my life’s issues this one simple calculation has solved wow! Sending it to #byju to include it in their teaching methods. https://t.co/nC8qIojGVF
— Shah Rukh Khan (@iamsrk) January 22, 2020Can’t tell you how many of my life’s issues this one simple calculation has solved wow! Sending it to #byju to include it in their teaching methods. https://t.co/nC8qIojGVF
— Shah Rukh Khan (@iamsrk) January 22, 2020
ಈ ನವೀನ ಬೋಧನಾ ವಿಧಾನವು ಶಾರುಖ್ ಖಾನ್ ಅವರನ್ನೂ ಆಕರ್ಷಿಸಿದ್ದು, "ನನ್ನ ಜೀವನದ ಎಷ್ಟು ಸಮಸ್ಯೆಗಳನ್ನು ಈ ಒಂದು ಸರಳ ಲೆಕ್ಕಾಚಾರವು ಪರಿಹರಿಸಿದೆ. ಇದನ್ನು 'ಬೈಜು'ಗೆ ಕಳುಹಿಸಿದರೇ ಅದರ ಟೀಚಿಂಗ್ ವಿಧಾನದಲ್ಲಿ ಬಳಸಿಕೊಳ್ಳುತ್ತೇವೆ'' ಎಂದು ಆನಂದ್ ಮಹೀಂದ್ರಾ ಅವರಿಗೆ ಶಾರುಖ್ ಕೋರಿದ್ದಾರೆ.