ETV Bharat / business

ಪ್ರತಿ 10 ರೋಗಿಗಳಲ್ಲಿ ಒಬ್ಬರಿಗೆ ರಿಲಯನ್ಸ್​ ಆಕ್ಸಿಜನ್: 'ಪ್ರತಿಯೊಬ್ಬರ ಜೀವ ರಕ್ಷಣೆ ಮುಖ್ಯ ಬೇರೇನಿಲ್ಲ'- ಅಂಬಾನಿ - Mukesh Ambani oxygen production

ಜಾಮ್​ನಗರದಲ್ಲಿನ ತನ್ನ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್​ನಲ್ಲಿ ಆರ್​ಐಎಲ್ ಈಗ ನಿತ್ಯ 1,000 ಮೆಟ್ರಿಕ್ ಟನ್ ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕ ಉತ್ಪಾದಿಸುತ್ತದೆ. ಭಾರತದ ಒಟ್ಟು ಉತ್ಪಾದನೆಯ ಶೇ 11ಕ್ಕಿಂತ ಹೆಚ್ಚಾಗಿದ್ದು, ಪ್ರತಿ ಹತ್ತು ರೋಗಿಗಳಲ್ಲಿ ಒಬ್ಬರಿಗೆ ಆಕ್ಸಿಜನ್​ ಅಗತ್ಯತೆಗಳನ್ನು ಪೂರೈಸುತ್ತದೆ. ಮೂಲತಃ ರಿಲಯನ್ಸ್ ವೈದ್ಯಕೀಯ ದರ್ಜೆಯ ಆಮ್ಲಜನಕದ ತಯಾರಕರಲ್ಲ.

reliance
reliance
author img

By

Published : May 1, 2021, 4:05 PM IST

Updated : May 1, 2021, 4:51 PM IST

ಮುಂಬೈ: ಭಾರತವು ಬಹುದೊಡ್ಡ ಕೋವಿಡ್ ಸಾಂಕ್ರಾಮಿಕ ರೋಗ ಸೆಣಸಾಡುತ್ತಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್) ಪ್ರಸ್ತುತ ಒಂದೇ ಸ್ಥಳದಿಂದ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುವ ದೇಶದ ಅತಿದೊಡ್ಡ ಉತ್ಪಾದಕ ಘಟಕವಾಗಿದೆ.

ಜಾಮ್​ನಗರದಲ್ಲಿನ ತನ್ನ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್​ನಲ್ಲಿ ಆರ್​ಐಎಲ್ ಈಗ ನಿತ್ಯ 1,000 ಮೆಟ್ರಿಕ್ ಟನ್ ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕ ಉತ್ಪಾದಿಸುತ್ತದೆ. ಭಾರತದ ಒಟ್ಟು ಉತ್ಪಾದನೆಯ ಶೇ 11ಕ್ಕಿಂತ ಹೆಚ್ಚಾಗಿದ್ದು, ಪ್ರತಿ ಹತ್ತು ರೋಗಿಗಳಲ್ಲಿ ಒಬ್ಬರಿಗೆ ಆಕ್ಸಿಜನ್​ ಅಗತ್ಯತೆಗಳನ್ನು ಪೂರೈಸುತ್ತದೆ. ಮೂಲತಃ ರಿಲಯನ್ಸ್ ವೈದ್ಯಕೀಯ ದರ್ಜೆಯ ಆಮ್ಲಜನಕದ ತಯಾರಕರಲ್ಲ.

ಕೋವಿಡ್ -19 ಸಾಂಕ್ರಾಮಿಕದ ಹೊಸ ಅಲೆಯ ವಿರುದ್ಧ ಭಾರತ ಹೋರಾಡುತ್ತಿರುವಾಗ ನನಗೆ ಮತ್ತು ರಿಲಯನ್ಸ್‌ನಲ್ಲಿರುವ ನಮ್ಮೆಲ್ಲರಿಗೂ ಪ್ರತಿಯೊಬ್ಬರ ಜೀವ ರಕ್ಷಣೆಯೇ ಮುಖ್ಯವಾಗಿದೆ ಬೇರೆ ಏನೂ ಇಲ್ಲ ಎಂದು ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.

ವೈದ್ಯಕೀಯ ದರ್ಜೆಯ ಆಮ್ಲಜನಕಕ್ಕಾಗಿ ಭಾರತದ ಉತ್ಪಾದನೆ ಮತ್ತು ಸಾರಿಗೆ ಸಾಮರ್ಥ್ಯವನ್ನು ಗರಿಷ್ಠಗೊಳಿಸುವ ಅವಶ್ಯಕತೆಯಿದೆ. ಈ ಹೊಸ ಸವಾಲನ್ನು ಎದುರಿಸಲು ದೇಶಭಕ್ತಿಯ ತುರ್ತುಸ್ಥಿತಿಯೊಂದಿಗೆ ದಣಿವರಿಯದೇ ಕೆಲಸ ಮಾಡಿದ ಜಾಮ್​ನಗರದಲ್ಲಿ ಇರುವ ನಮ್ಮ ಇಂಜಿನಿಯರ್‌ಗಳ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ಸೀತಾರಾಮನ್ ಗತ್ತು, ತೆರಿಗೆದಾರರ ತಾಕತ್ತು: GST ಇತಿಹಾಸದಲ್ಲೇ ದಾಖಲೆ ಟ್ಯಾಕ್ಸ್​ ಸಂಗ್ರಹ!

ರಿಲಯನ್ಸ್ ಕುಟುಂಬದ ಯುವ ಸದಸ್ಯರು ತೋರಿಸಿದ ದೃಢ ನಿಶ್ಚಯ ಮತ್ತು ಉದ್ದೇಶದಿಂದ ನಾನು ನಿಜವಾಗಿಯೂ ವಿನಮ್ರನಾಗಿದ್ದೇನೆ. ಅವರು ಮತ್ತೊಮ್ಮೆ ಈ ಸಂದರ್ಭದಲ್ಲಿ ಭಾರತಕ್ಕೆ ಹೆಚ್ಚು ಅಗತ್ಯವಿರುವ ಮಟ್ಟಕ್ಕೆ ತಲುಪಿದ್ದಾರೆ.

ಮುಖೇಶ್ ಅಂಬಾನಿಯವರ ವೈಯಕ್ತಿಕ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆ ಬಲಪಡಿಸಲು ರಿಲಯನ್ಸ್ ದ್ವಿಮುಖ ವಿಧಾನ ಅಳವಡಿಸಿಕೊಂಡಿದೆ.

1: ರಿಲಯನ್ಸ್‌ನ ಜಾಮ್‌ನಗರದಲ್ಲಿ ಹವು ಕೈಗಾರಿಕಾ ಪ್ರಕ್ರಿಯೆಗಳನ್ನು ಕೇಂದ್ರೀಕರಿಸುವುದು ಮತ್ತು ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕದ ಉತ್ಪಾದನೆಯಲ್ಲಿ ಶೀಘ್ರವಾಗಿ ಹೆಚ್ಚಿಸುವುದು.

2: ಭಾರತದಾದ್ಯಂತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತ್ವರಿತ ಮತ್ತು ಸುರಕ್ಷಿತ ಪೂರೈಕೆ ಖಚಿತಪಡಿಸಿಕೊಳ್ಳಲು ಲೋಡಿಂಗ್ ಮತ್ತು ಸಾರಿಗೆ ಸಾಮರ್ಥ್ಯಗಳನ್ನು ವೃದ್ಧಿಸುವುದು.

ನಮ್ಮ ದೇಶ ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಿಲಯನ್ಸ್ ಫೌಂಡೇಷನ್‌ನಲ್ಲಿ ನಾವು ಸಹಾಯ ಮಾಡಲು ನಾವು ಎಲ್ಲವನ್ನೂ ಮುಂದುವರಿಸುತ್ತೇವೆ. ಪ್ರತಿಯೊಂದು ಜೀವನವೂ ಅಮೂಲ್ಯವಾದುದು. ನಮ್ಮ ಜಾಮ್​ನಗರ ಸಂಸ್ಕರಣಾಗಾರದಲ್ಲಿನ ಪ್ಲಾಂಟ್​ಗಳು ರಾತ್ರಿಯಿಡೀ ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕವನ್ನು ಉತ್ಪಾದಿಸಿ ಭಾರತದಾದ್ಯಂತ ವಿತರಿಸಲಾಗುತ್ತಿದೆ ಎಂದು ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕ-ಅಧ್ಯಕ್ಷೆ ನೀತಾ ಅಂಬಾನಿ ಹೇಳಿದ್ದಾರೆ.

Last Updated : May 1, 2021, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.