ಅಹಮದಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿಯ ಹಿರಿಯ ಸಹೋದರ ರಾಮ್ನಿಕ್ಭಾಯಿ ಅಂಬಾನಿ ಅಹಮದಾಬಾದ್ನಲ್ಲಿ ನಿಧನರಾದರು.
95 ವರ್ಷದ ರಾಮ್ನಿಕ್ಭಾಯಿ ವಯೋಸಹಜ ವೃದ್ಧಾಪ್ಯದಿಂದ ಮೃತಪಟ್ಟಿದ್ದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ರಾಮ್ನಿಕ್ಭಾಯಿ ತನ್ನ ಸಹೋದರ ಧೀರೂಭಾಯಿ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿದ್ದರು. ರಿಲಯನ್ಸ್‌ನ ಆರಂಭದಲ್ಲೂ ಅವರ ಹಿಂದೆ ನಿಂತು ಉದ್ಯಮ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಹ-ಸಂಸ್ಥಾಪಕ ರಾಮ್ನಿಕ್ಭಾಯಿ ಅವರ ಮಗ ವಿಮಲ್ ಅವರ ಹೆಸರಿನಲ್ಲಿ ಧೀರೂಭಾಯಿ ಅಂಬಾನಿ ಜವಳಿ ಬ್ರ್ಯಾಂಡ್ ವಿಮಲ್ ಅನ್ನು ಪ್ರಾರಂಭಿಸಿದ್ದರು.
ಗುಜರಾತ್‌ನ ಇಂಧನ ಸಚಿವ ಸೌರಭ್ ಪಟೇಲ್ ಅವರು ರಾಮ್ನಿಕ್ಭಾಯಿ ಅವರ ಪುತ್ರಿ ಇಲಾ ಅವರನ್ನು ವಿವಾಹವಾಗಿದ್ದಾರೆ.
1924ರಲ್ಲಿ ಹಿರಾಚಂದ್ ಮತ್ತು ಜಮುನಾಬೆನ್ ಅಂಬಾನಿಯವರ ಮನೆಯಲ್ಲಿ ರಾಮ್ನಿಕ್ಭಾಯಿ ಜನಿಸಿದ್ದರು. ಮೂವರು ಸಹೋದರರಲ್ಲಿ ಇವರೇ ಹಿರಿಯರು. ಅವರಿಗೆ ಧೀರೂಭಾಯಿ ಅಂಬಾನಿ ಮತ್ತು ನತುಭಾಯಿ ಅಂಬಾನಿ ಸಹೋದರಿಯರು ಮತ್ತು ತ್ರಿಲೋಚಾನಬೆನ್ ಮತ್ತು ಜಸುಮಾತಿಬೆನ್ ಸಹೋದರಿಯರು ಇದ್ದರು.