ನವದೆಹಲಿ: ಕಳೆದ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೇ ಲಾಕ್‌ಡೌನ್ ಅವಧಿಯಲ್ಲಿ ರೈಲ್ವೆ ಸರಕು ಸಾಗಣೆ ವಿಭಾಗದಡಿ 8,283 ಕೋಟಿ ರೂ.ಯಷ್ಟು ಆದಾಯ ಕುಸಿದಿದೆ ಎಂಬುದು ಅಂಕಿ- ಅಂಶಗಳ ಮೂಲಕ ತಿಳಿದುಬಂದಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ರಾಷ್ಟ್ರೀಯ ಸಾರಿಗೆ ವಾಹಕವು ನಿಧಾನಗತಿಯ ವರ್ಷವನ್ನು ಇದು ಸೂಚಿಸುತ್ತದೆ.
2019 ರಲ್ಲಿ ಕಲ್ಲಿದ್ದಲು ಲೋಡಿಂಗ್‌ನಿಂದ ಗಳಿಸಿದ 11,033 ಕೋಟಿ ರೂ. ಆದಾಯ 2020ರಲ್ಲಿ 5,720 ಕೋಟಿ ರೂ.ಗೆ ಇಳಿದಿದೆ. ಖನಿಜ ತೈಲ ಸಾಗಿಸುವುದರಿಂದ ಬರುವ ಆದಾಯವು ಕಳೆದ ವರ್ಷದ 979 ಕೋಟಿ ರೂ.ನಷ್ಟು ಇದದ್ದು, ಈ ವರ್ಷ 761 ಕೋಟಿ ರೂ. ಇಳಿಕೆ ಆಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಕಬ್ಬಿಣದ ಅದಿರಿನ ಸಾಗಣೆಯಲ್ಲಿ ಕುಸಿತವನ್ನು ಅನುಭವಿಸಿದ್ದು, ಈ ವರ್ಷದ ಏಪ್ರಿಲ್ 1 ಮತ್ತು ಮೇ 31 ನಡುವೆ 484 ಕೋಟಿ ರೂ. ಆದಾಯ ಬಂದಿದೆ. ರಸಗೊಬ್ಬರ ಲೋಡ್ ಮಾಡುವಲ್ಲಿ ಸ್ವಲ್ಪ ಕುಸಿತ ಕಂಡರೂ, 2019ರಲ್ಲಿ 7.3 ಮಿಲಿಯನ್ ಟನ್ನಿಂದ ಈ ವರ್ಷ 6.56 ಮಿ.ಟನ್ ಮೂಲಕ 709 ಕೋಟಿ ರೂ.ಯಿಂದ 289 ಕೋಟಿ ರೂ.ಗೆ ಆದಾಯ ಇಳಿಕೆಯಾಗಿದೆ.
ಒಟ್ಟಾರೆ ಈ ಎರಡೂ ತಿಂಗಳಲ್ಲಿ ರೈಲ್ವೆ 147.69 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಆಗಿದ್ದು, 13,412.09 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 21,695.61 ಕೋಟಿ ರೂ. ಆದಾಯ ಗಳಿಸಿತ್ತು. ಆಗಿನ ಸರಕು ಲೋಡ್ ಪ್ರಮಾಣ 205.81 ಮಿಲಿಯನ್ ಟನ್ನಷ್ಟಿತ್ತು.