ETV Bharat / business

ತ್ವರಿತ ಆಮ್ಲಜನಕ ಸಾಗಣೆಗೆ 'ಆಕ್ಸಿಜನ್ ಆನ್ ವೀಲ್ಸ್' ಸೇವೆ ಆರಂಭಿಸಿದ ಮಹೀಂದ್ರಾ ಗ್ರೂಪ್​!

author img

By

Published : May 1, 2021, 10:23 PM IST

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಈ ಬಗ್ಗೆ ಸರಣಿ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಆಮ್ಲಜನಕವು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಪ್ರಮುಖ ಕೀಲಿಯಾಗಿದೆ. ಮಹೀಂದ್ರಾ ಲಾಜಿಸ್ಟಿಕ್ಸ್ ಮೂಲಕ ಜಾರಿಗೆ ತರಲಾದ 'ಆಕ್ಸಿಜನ್ ಆನ್ ವೀಲ್ಸ್' ಯೋಜನೆಯೊಂದಿಗೆ ಈ ಅಂತರವನ್ನು ತುಂಬಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Anand Mahindra
Anand Mahindra

ನವದೆಹಲಿ: ಮಹೀಂದ್ರಾ ಗ್ರೂಪ್‌ನ ಲಾಜಿಸ್ಟಿಕ್ಸ್ ವಿಭಾಗ ಮಹೀಂದ್ರಾ ಲಾಜಿಸ್ಟಿಕ್ಸ್ ಕೋವಿಡ್​-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಡುವೆ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಆಮ್ಲಜನಕ ಉತ್ಪಾದನೆ ಮತ್ತು ಸಾರಿಗೆಯ ಅಂತರ ತಗ್ಗಿಸಲು 'ಆಕ್ಸಿಜನ್ ಆನ್ ವೀಲ್ಸ್' ಅಭಿಯಾನ ಆರಂಭಿಸಿದೆ.

ಉಪಕ್ರಮದಡಿಯಲ್ಲಿ ಮಹೀಂದ್ರಾ ಆಮ್ಲಜನಕ ಉತ್ಪಾದಕರನ್ನು ಆಸ್ಪತ್ರೆಗಳು ಮತ್ತು ಮನೆಗಳೊಂದಿಗೆ ಸಂಪರ್ಕಿಸಲು ಟ್ರಕ್‌ಗಳನ್ನು ಬಳಸಿಕೊಳ್ಳುತ್ತದೆ. ಹೆಚ್ಚು- ಹೆಚ್ಚು ಜನರಿಗೆ ಸಹಾಯ ಮಾಡಲು ಕಾರ್ಯಾಚರಣೆಗೆ ನಿಯಂತ್ರಣ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ಗ್ರಾಹಕರಿಗೆ ನೇರ ಮಾದರಿ ಕಲ್ಪಿಸಲಾಗುತ್ತಿದೆ.

  • We have started in Mahrashtra but will expand this through the country relying on the support of our trusted dealership network & the assistance of local administrations to succeed. (5/5) pic.twitter.com/yPHXcPGWXK

    — anand mahindra (@anandmahindra) May 1, 2021 " class="align-text-top noRightClick twitterSection" data="

We have started in Mahrashtra but will expand this through the country relying on the support of our trusted dealership network & the assistance of local administrations to succeed. (5/5) pic.twitter.com/yPHXcPGWXK

— anand mahindra (@anandmahindra) May 1, 2021 ">

ಮಹಾರಾಷ್ಟ್ರದಲ್ಲಿ (ಮುಂಬೈ, ಪುಣೆ, ಚಕನ್, ಥಾಣೆ, ನಾಸಿಕ್ ಮತ್ತು ನಾಗ್ಪುರ) ಈ ಉಪಕ್ರಮವು ಪ್ರಾರಂಭವಾಗಿದೆ. ಈ ತಂಡವನ್ನು ದೇಶಾದ್ಯಂತ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಎಸ್‌ಒಎಸ್ ಬಟನ್ ಒತ್ತಿದ 13 ಆಸ್ಪತ್ರೆಗಳಿಗೆ ಈಗಾಗಲೇ 61 ಜಂಬೋ ಸಿಲಿಂಡರ್‌ಗಳನ್ನು ತಲುಪಿಸಲಾಗಿದೆ.

ಕೋವಿಡ್​-19 ಪ್ರಕರಣಗಳ ಹೆಚ್ಚಳದ ಮಧ್ಯೆ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸುವ ಪ್ರಯತ್ನವನ್ನು ಖಾಸಗಿ ವಲಯವು ಹೆಚ್ಚಿಸಿದೆ. ಇದಕ್ಕೂ ಮುನ್ನ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್) ಒಂದೇ ಸ್ಥಳದಿಂದ ಭಾರತದ ಅತಿದೊಡ್ಡ ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕ ಉತ್ಪಾದಿಸುತ್ತಿದೆ ಎಂದು ಹೇಳಿದೆ.

ನವದೆಹಲಿ: ಮಹೀಂದ್ರಾ ಗ್ರೂಪ್‌ನ ಲಾಜಿಸ್ಟಿಕ್ಸ್ ವಿಭಾಗ ಮಹೀಂದ್ರಾ ಲಾಜಿಸ್ಟಿಕ್ಸ್ ಕೋವಿಡ್​-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಡುವೆ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಆಮ್ಲಜನಕ ಉತ್ಪಾದನೆ ಮತ್ತು ಸಾರಿಗೆಯ ಅಂತರ ತಗ್ಗಿಸಲು 'ಆಕ್ಸಿಜನ್ ಆನ್ ವೀಲ್ಸ್' ಅಭಿಯಾನ ಆರಂಭಿಸಿದೆ.

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಈ ಬಗ್ಗೆ ಸರಣಿ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಆಮ್ಲಜನಕವು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಪ್ರಮುಖ ಕೀಲಿಯಾಗಿದೆ. ಮಹೀಂದ್ರಾ ಲಾಜಿಸ್ಟಿಕ್ಸ್ ಮೂಲಕ ಜಾರಿಗೆ ತರಲಾದ 'ಆಕ್ಸಿಜನ್ ಆನ್ ವೀಲ್ಸ್' ಯೋಜನೆಯೊಂದಿಗೆ ಈ ಅಂತರವನ್ನು ತುಂಬಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಉಪಕ್ರಮದಡಿಯಲ್ಲಿ ಮಹೀಂದ್ರಾ ಆಮ್ಲಜನಕ ಉತ್ಪಾದಕರನ್ನು ಆಸ್ಪತ್ರೆಗಳು ಮತ್ತು ಮನೆಗಳೊಂದಿಗೆ ಸಂಪರ್ಕಿಸಲು ಟ್ರಕ್‌ಗಳನ್ನು ಬಳಸಿಕೊಳ್ಳುತ್ತದೆ. ಹೆಚ್ಚು- ಹೆಚ್ಚು ಜನರಿಗೆ ಸಹಾಯ ಮಾಡಲು ಕಾರ್ಯಾಚರಣೆಗೆ ನಿಯಂತ್ರಣ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ಗ್ರಾಹಕರಿಗೆ ನೇರ ಮಾದರಿ ಕಲ್ಪಿಸಲಾಗುತ್ತಿದೆ.

  • We have started in Mahrashtra but will expand this through the country relying on the support of our trusted dealership network & the assistance of local administrations to succeed. (5/5) pic.twitter.com/yPHXcPGWXK

    — anand mahindra (@anandmahindra) May 1, 2021 " class="align-text-top noRightClick twitterSection" data=" ">

ಮಹಾರಾಷ್ಟ್ರದಲ್ಲಿ (ಮುಂಬೈ, ಪುಣೆ, ಚಕನ್, ಥಾಣೆ, ನಾಸಿಕ್ ಮತ್ತು ನಾಗ್ಪುರ) ಈ ಉಪಕ್ರಮವು ಪ್ರಾರಂಭವಾಗಿದೆ. ಈ ತಂಡವನ್ನು ದೇಶಾದ್ಯಂತ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಎಸ್‌ಒಎಸ್ ಬಟನ್ ಒತ್ತಿದ 13 ಆಸ್ಪತ್ರೆಗಳಿಗೆ ಈಗಾಗಲೇ 61 ಜಂಬೋ ಸಿಲಿಂಡರ್‌ಗಳನ್ನು ತಲುಪಿಸಲಾಗಿದೆ.

ಕೋವಿಡ್​-19 ಪ್ರಕರಣಗಳ ಹೆಚ್ಚಳದ ಮಧ್ಯೆ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸುವ ಪ್ರಯತ್ನವನ್ನು ಖಾಸಗಿ ವಲಯವು ಹೆಚ್ಚಿಸಿದೆ. ಇದಕ್ಕೂ ಮುನ್ನ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್) ಒಂದೇ ಸ್ಥಳದಿಂದ ಭಾರತದ ಅತಿದೊಡ್ಡ ವೈದ್ಯಕೀಯ ದರ್ಜೆಯ ದ್ರವ ಆಮ್ಲಜನಕ ಉತ್ಪಾದಿಸುತ್ತಿದೆ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.