ETV Bharat / business

ರತನ್​ ಟಾಟಾ ಪಾದಕ್ಕೆರಿಗಿದ ಇನ್ಫಿ ಫೌಂಡರ್​ ನಾರಾಯಣ ಮೂರ್ತಿ... ದಿಗ್ಗಜರ ಸರಳತೆಗೆ ಟ್ವಿಟ್ಟರ್​ ಶೇಕ್

ಈ ಇಬ್ಬರೂ ಉದ್ಯಮಿ ದಿಗ್ಗಜರು ಮುಂಬೈನಲ್ಲಿ ನಡೆದ ವಾರ್ಷಿಕ ಟೈಕೋನ್​ (TiEcon) ಕಾರ್ಯಕ್ರಮದಲ್ಲಿ ಜಂಟಿಯಾಗಿ ವೇದಿಕೆ ಹಂಚಿಕೊಂಡಿದ್ದರು. ಇನ್ಫೋಸಿಸ್​ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಟಾಟಾ ಸಂಸ್ಥೆ ಮುಖ್ಯಸ್ಥ ರತನ್ ಟಾಟಾ ಅವರಿಗೆ ಪ್ರಶಸ್ತಿ ನೀಡುವ ಮೊದಲು ಅವರ ಪಾದಕ್ಕೆ ನಮಸ್ಕರಿಸಿ ಬಳಿಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಉದ್ಯಮಿಗಳ ಈ ಸಾಂಪ್ರದಾಯಿಕ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Narayana Murthy Touches Ratan Tata's Feet
ರತನ್​ ಟಾಟಾ ಪಾದಕ್ಕೆ ನಮಸ್ಕರಿಸಿದ ಇನ್ಫಿ ಫೌಂಡರ್​ ನಾರಾಯಣ ಮೂರ್ತಿ
author img

By

Published : Jan 29, 2020, 4:32 PM IST

ಮುಂಬೈ: ಇನ್ಫೋಸಿಸ್​​ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಉದ್ಯಮಿ ದಿಗ್ಗಜ ರತನ್ ಟಾಟಾ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಫೋಟೋಗಳು ಟ್ವಿಟ್ಟರ್​ನಲ್ಲಿ ಸದ್ದು ಮಾಡುತ್ತಿವೆ.

ಈ ಇಬ್ಬರೂ ಉದ್ಯಮಿ ದಿಗ್ಗಜರು ಮುಂಬೈನಲ್ಲಿ ನಡೆದ ವಾರ್ಷಿಕ ಟೈಕೋನ್​ (TiEcon) ಕಾರ್ಯಕ್ರಮದಲ್ಲಿ ಜಂಟಿಯಾಗಿ ವೇದಿಕೆ ಹಂಚಿಕೊಂಡಿದ್ದರು. ನಾರಾಯಣ ಮೂರ್ತಿ ಅವರು ರತನ್ ಟಾಟಾ ಅವರಿಗೆ ಪ್ರಶಸ್ತಿ ನೀಡುವ ಮೊದಲು ಅವರ ಪಾದಕ್ಕೆ ನಮಸ್ಕರಿಸಿ ಬಳಿಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಉದ್ಯಮಿಗಳ ಈ ಸಾಂಪ್ರದಾಯಿಕ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ನಮ್ರತೆಯ ಸ್ಪರ್ಶದ ಸೂಚಕದ"ನ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಕಾರ್ಯಕ್ರಮ ಸಂಘಟಕರು ಹಂಚಿಕೊಂಡಿದ್ದಾರೆ. 'ಇನ್ಫೋಸಿಸ್​ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಟಾಟಾ ಸನ್ಸ್​ ಮುಖ್ಯಸ್ಥ ರತನ್​ ಟಾಟಾ ಅವರಿಂದ ಟೈಕೋನ್​ ಮುಂಬೈ ಕಾರ್ಯಕ್ರಮದಲ್ಲಿ ಆಶೀರ್ವಾದ ಪಡೆಯುತ್ತಿದ್ದಾರೆ. ಇದು ನಮ್ರತೆಯ ಸ್ಪರ್ಶದ ಸೂಚಕ ಮತ್ತು ಅತ್ಯಮೂಲ್ಯವಾದ ಐತಿಹಾಸಿಕ ಕ್ಷಣಗಳು' ಎಂದು ಆಯೋಜಕರು ಬರೆದುಕೊಂಡಿದ್ದಾರೆ.

ಐತಿಹಾಸಿಕ ಕ್ಷಣ.! ಆರಾಧ್ಯ ಮೌಲ್ಯಗಳು ಮತ್ತು ಗೌರವವನ್ನು ದಂತಕಥೆಗಳಿಂದ ಪ್ರದರ್ಶಿಸಲಾಗುತ್ತದೆ. ಇದು ನಿಜವಾದ ಭಾರತೀಯ ಸಂಸ್ಕೃತಿ. ನಾರಾಯಣ ಮೂರ್ತಿ ಅವರು ರತನ್ ಟಾಟಾ ಅವರ ಪಾದಗಳನ್ನು ಮುಟ್ಟುತ್ತಿದ್ದಾರೆ ಎಂದು ಪಂಕಜ್ ಪ್ರಶಾಂತ್ ಎಂಬುವರು ಪ್ರಶಂಸಿಸಿದ್ದಾರೆ.

ಕಾರ್ಪೊರೇಟ್​​ ಇತಿಹಾಸದಲ್ಲಿ ಅತಿದೊಡ್ಡ ಐತಿಹಾಸಿಕ ಕ್ಷಣಕ್ಕೆ ನಾನೂ ಕೂಡ ಸಾಕ್ಷಿಯಾಗಿದ್ದೆ. ವಿನಮ್ರತೆಯ ನಾರಾಯಣ ಮೂರ್ತಿ ರತನ್​ ಟಾಟಾ ಅವರ ಪಾದ ಸ್ಪರ್ಶಿಸಿದ್ದಾರೆ ಎಂದು ಗೌರವ್ ಕುಮಾರ್ ಬರೆದುಕೊಂಡಿದ್ದಾರೆ.

ಸುದ್ದಿ ಸಂಸ್ಥೆಯ ವರದಿ ಪ್ರಕಾರ, ರತನ್ ಟಾಟಾ ಅವರಿಗೆ ಟೈಕೋನ್​ ಮುಂಬೈನ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ನಾರಾಯಣ ಮೂರ್ತಿ ಅವರು ನೀಡಿದ್ದಾರೆ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.