ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ತನ್ನ ಆನ್‌ಲೈನ್ ಹಣಕಾಸು ವೇದಿಕೆ 'ಸ್ಮಾರ್ಟ್ ಫೈನಾನ್ಸ್' ಅನ್ನು ಮಾರುತಿ ಸುಜುಕಿ ಅರೆನಾ ಗ್ರಾಹಕರಿಗೆ 30ಕ್ಕೂ ಹೆಚ್ಚು ನಗರಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಸ್ಮಾರ್ಟ್ ಫೈನಾನ್ಸ್ ಪ್ರಾರಂಭಿಸುವುದರೊಂದಿಗೆ ಗ್ರಾಹಕರ ವಾಹನ ಖರೀದಿಯ 26 ಹಂತಗಳಲ್ಲಿ 24 ಹಂತಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ಹೇಳಿದೆ.
ಸ್ಮಾರ್ಟ್ ಫೈನಾನ್ಸ್ ಗ್ರಾಹಕರಿಗೆ ವಾಹನ ಹಣಕಾಸು ಅಗತ್ಯಗಳಿಗಾಗಿ 'ಒನ್ - ಸ್ಟಾಪ್ - ಶಾಪ್' ಪರಿಹಾರ ನೀಡುತ್ತದೆ. ಗ್ರಾಹಕರ ಅಗತ್ಯಗಳನ್ನು ಆಧರಿಸಿ ವ್ಯಾಪಕ ಶ್ರೇಣಿಯ ಹಣಕಾಸು ಉತ್ಪನ್ನಗಳನ್ನು ಆಯ್ಕೆ ಮಾಡುವ ಆಯ್ಕೆಗಳಿವೆ. ಉತ್ತಮವಾದ ಸಾಲ ಉತ್ಪನ್ನವನ್ನು ಆಯ್ಕೆ ಮಾಡುವುದು, ಎಲ್ಲ ಹಣಕಾಸು ಸಂಬಂಧಿತ ಸೇವೆಗಳು ಇದರಲ್ಲಿವೆ. ಔಪಚಾರಿಕತೆ ಮತ್ತು ಸಾಲ ವಿತರಿಸುವುದು, ಕೆಲವೇ ಕ್ಲಿಕ್‌ಗಳೊಂದಿಗೆ ಪೂರ್ಣಗೊಳ್ಳಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಸ್ಥಿರವಾಗಿ ನಿಂತ ಪೆಟ್ರೋಲ್ ದರ: ಮುಂದೆ ಏನಾಗಬಹದು?
ಮಾರುತಿ ಸುಜುಕಿ ವೆಬ್‌ಸೈಟ್ ಗ್ರಾಹಕ ಮತ್ತು ಫೈನಾನ್ಶಿಯರ್ ನಡುವೆ ನೈಜ ಸಮಯದ ನವೀಕರಣಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಜಗಳ ಮುಕ್ತ ಮತ್ತು ಪಾರದರ್ಶಕ ಹಣಕಾಸು ಪರಿಹಾರ ಕಲ್ಪಿಸುತ್ತಿದೆ.
ಈ ಸೇವೆಗಾಗಿ ಮಾರುತಿ ಸುಜುಕಿ ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಚೋಳಮಂಡಲಂ ಫೈನಾನ್ಸ್, ಕೊಟಾಕ್ ಮಹೀಂದ್ರಾ ಪ್ರೈಮ್, ಆಕ್ಸಿಸ್ ಬ್ಯಾಂಕ್, ಎಯು ಸ್ಮಾಲ್ ಪೈನಾನ್ಸ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಎಚ್‌ಡಿಬಿ ಹಣಕಾಸು ಸೇವೆಗಳು ಜತ ಒಪ್ಪಂದ ಮಾಡಿಕೊಂಡಿದೆ.
ದೆಹಲಿ - ಎನ್‌ಸಿಆರ್, ಜೈಪುರ, ಅಹಮದಾಬಾದ್, ಪುಣೆ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಲಕ್ನೋ, ಇಂದೋರ್, ಕೋಲ್ಕತ್ತಾ, ಕೊಚ್ಚಿನ್, ಚಂಡೀಗಢ, ಗುವಾಹಟಿ ಸೇರಿ 30ಕ್ಕೂ ಅಧಿಕ ನಗರಗಳಲ್ಲಿ ಈಗ ಸ್ಮಾರ್ಟ್ ಹಣಕಾಸು ಸೇವೆ ಲಭ್ಯವಿದೆ.