ನವದೆಹಲಿ: ಕೋವಿಡ್ -19 ಪರಿಸ್ಥಿತಿಯಿಂದಾಗಿ ದ್ವಿಚಕ್ರ ವಾಹನ ಉದ್ಯಮವು ಅಲ್ಪಾವಧಿಯ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೀರೋ ಮೊಟೊಕಾರ್ಪ್ 2019-20ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಕಂಪನಿಯ ಷೇರುದಾರರೊಂದಿಗೆ ಮಾಹಿತಿ ಹಂಚಿಕೊಂಡ ಹೀರೋ ಮೊಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಅವರು, ದೇಶಿಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಪನಿಗೆ ಸಾಕಷ್ಟು ಬೆಳವಣಿಗೆಯ ಅವಕಾಶಗಳಿವೆ. ಆದರೆ, ದೀರ್ಘಾವಧಿಯಲ್ಲಿ ಭಾರತದ ದ್ವಿಚಕ್ರ ಉದ್ದಿಮೆಯ ಒಟ್ಟಾರೆ ಬೆಳವಣಿಗೆಯು ಸ್ಥಿರ ಮತ್ತು ಸಕಾರಾತ್ಮಕವಾಗಿ ಇರಲಿದೆ ಎಂದರು.
ಕಂಪನಿಯ ವ್ಯವಹಾರವನ್ನು ಹೊಸ ಎತ್ತರಕ್ಕೆ ಬೆಳೆಸಲು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ಬೆಳವಣಿಗೆಯ ಅವಕಾಶಗಳಿವೆ. ಕಳೆದ ಐದು ವರ್ಷಗಳಲ್ಲಿ 40ಕ್ಕೂ ಹೆಚ್ಚು ದೇಶಗಳಿಗೆ ನಮ್ಮ ಮಾರುಕಟ್ಟೆ ವಿಸ್ತರಿಸಿದೆ. ಈಗ ಭಾರತವನ್ನು ಮೀರಿ ಪ್ರಮಾಣ ನಿರ್ಮಿಸುವ ವೇದಿಕೆ ಸೃಷ್ಟಿಸುತ್ತದೆ ಎಂದು ಮುಂಜಾಲ್ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಆರ್ ಆ್ಯಂಡ್ ಡಿಯಲ್ಲಿ ಕಂಪನಿಯ ಹೂಡಿಕೆ, ಇತರ ಉದ್ಯಮಿಗಳಿಂದ ಎರಡು ಪಟ್ಟು ಹೆಚ್ಚಾಗಿದೆ 2020- 21ನೇ ಹಣಕಾಸು ವರ್ಷದಲ್ಲಿ 10 ಕೋಟಿ ಮೋಟರ್‌ಸೈಕಲ್ಸ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡುವ ಐತಿಹಾಸಿಕ ದಾಖಲೆ ಸೃಷ್ಟಿಸುವ ಹಾದಿಯಲ್ಲಿದ್ದೇವೆ. ಕಂಪನಿಯ ನಗದು ಸಂಗ್ರಹ ₹ 14,096 ಕೋಟಿಗೆ ತಲುಪಿದೆ ಎಂದರು.