ನವದೆಹಲಿ: ಬಾಂಗ್ಲಾದೇಶದಲ್ಲಿ ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ ನಿರ್ಮಾಣ ಕಾಮಗಾರಿ ಗುತ್ತಿಗೆ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್ & ಟಿ) ಕಂಪನಿಯ ಪಾಲಾಗಿದೆ.
ಲಾರ್ಸನ್ & ಟೂಬ್ರೊದ ವಿದ್ಯುತ್ ಪ್ರಸರಣ ಮತ್ತು ವಿತರಣಾ ವ್ಯವಹಾರವು ಬಾಂಗ್ಲಾದೇಶದಲ್ಲಿ ಪ್ರಸರಣ ಮಾರ್ಗದ ಗುತ್ತಿಗೆ ಪಡೆದುಕೊಂಡಿದೆ ಎಂದು ಕಂಪನಿಯು ನಿಯಂತ್ರಕ ದಾಖಲಾತಿಯಲ್ಲಿ ತಿಳಿಸಿದೆ.
ಇಂಜಿನಿಯರಿಂಗ್ ಮತ್ತು ನಿರ್ಮಾಣ ಕಂಪನಿಯು ಒಪ್ಪಂದದ ನಿಖರವಾದ ಮೌಲ್ಯ ಒದಗಿಸಲಿಲ್ಲ. ಆದರೆ, ಅದರ ಯೋಜನೆಯ ವರ್ಗೀಕರಣದ ಪ್ರಕಾರ, ದೊಡ್ಡ ಗುತ್ತಿಗೆ ಆರ್ಡರ್ 2,500 ಕೋಟಿ ರೂ. ಮತ್ತು 5,000 ಕೋಟಿ ರೂ.ನಷ್ಟಿದೆ.
ಇದನ್ನೂ ಓದಿ: ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆ
ಈ ಕಾಮಗಾರಿ ವ್ಯಾಪ್ತಿಯು ಹೈ ವೋಲ್ಟೇಜ್ ಪ್ರಸರಣ ಮಾರ್ಗಗಳ ವಿನ್ಯಾಸ, ಪೂರೈಕೆ, ಸ್ಥಾಪನೆ, ಪರೀಕ್ಷೆ ಮತ್ತು ನಿಯೋಜನೆ ಒಳಗೊಂಡಿರುತ್ತದೆ ಎಂದು ಕಂಪನಿ ತಿಳಿಸಿದೆ.
ಬಾಂಗ್ಲಾದೇಶವು ಈ ವರ್ಷ ಸಾರ್ವತ್ರಿಕ ವಿದ್ಯುತ್ ಸಂಪರ್ಕ ಸಾಧಿಸುವ ಗುರಿ ಹೊಂದಿರುವುದರಿಂದ, ವಿದ್ಯುತ್ ವರ್ಗಾವಣೆ ಸಾಮರ್ಥ್ಯದ ವರ್ಧನೆಯು ದೇಶದ ಗ್ರಿಡ್‌ನ ವಿಶ್ವಾಸಾರ್ಹತೆ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ. ಅದರ ಬಂಡವಾಳ ಮತ್ತು ಆರ್ಥಿಕ ಬೆಳವಣಿಗೆ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈ ಯೋಜನೆ ಸಹ ಅಂತಹುದ್ದೇ ಒಂದು ಉತ್ತೇಜನ ಹೊಂದಿದೆ ಎಂದು ಎಲ್&ಟಿಯ ನಿರ್ದೇಶಕ ಮತ್ತು ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟಿ ಮಾಧವ ದಾಸ್ ಹೇಳಿದರು.