ETV Bharat / business

CRISIL Ranking: ಇಎಸ್‌ಜಿ ಕಾರ್ಯಕ್ಷಮತೆಯಲ್ಲಿ ಇನ್ಫೋಸಿಸ್‌ಗೆ ದೇಶದಲ್ಲಿ ಅಗ್ರಸ್ಥಾನ - ಸಾಮಾಜಿಕ

ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ 18 ವಲಯಗಳ ದೇಶದ 225 ಕಂಪನಿಗಳಲ್ಲಿ ಇನ್ಫೋಸಿಸ್‌ ಅಗ್ರಸ್ಥಾನ ಪಡೆದಿದೆ. ಈ ಬಗ್ಗೆ ಇನ್ಫೋಸಿಸ್‌ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

infosys bags CRISIL Ranking as the most ESG focused Company in Inida
CRISIL's Ranking: ಇಎಸ್‌ಜಿ ಕಾರ್ಯಕ್ಷಮತೆಯಲ್ಲಿ ಇನ್ಫೋಸಿಸ್‌ಗೆ ದೇಶದಲ್ಲಿ ಅಗ್ರ ಸ್ಥಾನ
author img

By

Published : Jul 9, 2021, 9:23 PM IST

ಬೆಂಗಳೂರು: ದೇಶದ ವಿಶ್ಲೇಷಣಾ ಸಂಸ್ಥೆ ಕ್ರಿಸಿಲ್‌ ಬಿಡುಗಡೆ ಮಾಡಿರುವ ಇಎಸ್‌ಜಿ ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಇನ್ಫೋಸಿಸ್‌ ಅಗ್ರಸ್ಥಾನ ಪಡೆದಿದೆ ಎಂದು ಇನ್ಫೋಸಿಸ್‌ ಸಂಸ್ಥೆ ತಿಳಿಸಿದೆ. ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಇತರೆ ಎಲ್ಲಾ ಕಂಪನಿಗಳನ್ನು ಹಿಂದಿಕ್ಕಿ ಇನ್ಫೋಸಿಸ್‌ ಈ ಸ್ಥಾನಮಾನ ಗಳಿಸಿದೆ.

ದೇಶದ 18 ವಲಯಗಳ 225 ಕಂಪನಿಗಳ ಇಎಸ್‌ಜಿ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಲಾಗಿದೆ. ಇನ್ಫೋಸಿಸ್‌ 100ಕ್ಕೆ 79 ಅಂಕಗಳನ್ನು ಪಡೆದಿದೆ. ಇಎಸ್‌ಜಿ ಅನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ.

ಪರಿಸರದ ಮೌಲ್ಯಮಾಪನದಲ್ಲಿ 86, ಸಾಮಾಜಿಕ ಮತ್ತು ಆಡಳಿತದ ಪ್ಯಾರಾಮೀಟರ್‌ನಲ್ಲಿ ಕ್ರಮವಾಗಿ 68 ಮತ್ತು 81 ಅಂಕಗಳನ್ನು ಇನ್ಫೋಸಿಸ್‌ಗಳಿಸಿದೆ. 2020ರ ಹಣಕಾಸು ವರ್ಷ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿನ ಇಎಸ್‌ಜಿಯನ ಗುಣಾತ್ಮಕ ಮತ್ತು ಪರಿಣಾತ್ಮಕ ಅಂಶಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದೆ.

ಕಂಪನಿಗಳನ್ನು ಮೌಲ್ಯಮಾಪನದ ಮಾನದಂಡ

ಪರಿಸರ: ಜಿಎಚ್‌ಜಿ (ಹಸಿರುಮನೆ ಅನಿಲ) ಹೊರಸೂಸುವಿಕೆ, ಇಂಧನ ಬಳಕೆ, ತ್ಯಾಜ್ಯ ಮತ್ತು ಮಾಲಿನ್ಯ, ನೀರಿನ ಬಳಕೆ ಮತ್ತು ಭೂ ಬಳಕೆ

ಸಾಮಾಜಿಕ: ಕಾರ್ಯಪಡೆ ಮತ್ತು ವೈವಿಧ್ಯತೆ, ಉದ್ಯೋಗ /ಉತ್ಪನ್ನ ಸುರಕ್ಷತೆ, ಗ್ರಾಹಕ ಮತ್ತು ಮಾರಾಟಗಾರರೊಂದಿಗೆ ಸಂಬಂಧ, ಸಮುದಾಯಗಳು ಮತ್ತು ಸಮಾಜ

ಆಡಳಿತ: ಮಂಡಳಿಯ ಕಾರ್ಯಕ್ಷಮತೆ ಮತ್ತು ಸ್ವತಂತ್ರ, ಮಾಲೀಕತ್ವದ ಏಕಾಗ್ರತೆ, ನಿರ್ವಹಣೆಯ ಟ್ರ್ಯಾಕ್‌ ರೆಕಾರ್ಡ್‌, ಷೇರುದಾರರ ಸಂಬಂಧಗಳು

ಇಎಸ್‌ಜಿ ಕಾರ್ಯಕ್ಷಮತೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಇನ್ಫೋಸೀಸ್‌ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್‌ ರಾಯ್‌, CRISILನ ESGಯಲ್ಲಿ ಕೇಂದ್ರೀಕೃತ ಕಂಪನಿಗಳಲ್ಲಿ ಅಗ್ರ ಸ್ಥಾನ ಪಡೆದಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇವೆ ಎಂದಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಇಎಸ್‌ಜಿ ಮುಖ್ಯವಾಗಿದೆ. ಇನ್ಫೋಸಿಸ್‌ನಲ್ಲಿ ಪರಿಸರ ಮತ್ತು ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವಿಕೆ ಮತ್ತು ಆಡಳಿತದ ಮೇಲೆ ಹೆಚ್ಚು ಗಮನ ಹರಿಸುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.