ನವದೆಹಲಿ: ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಅಸ್ತಿತ್ವದಲ್ಲಿರುವ ಚಿಲ್ಲರೆ ಮಾರಾಟ ಜಾಲಕ್ಕೆ ಹೆಚ್ಚುವರಿಯಾಗಿ ಆನ್‌ಲೈನ್ ಮಾರಾಟ ವೇದಿಕೆಯನ್ನು ಆರಂಭಿಸಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ತನ್ನ 'ಕ್ಲಿಕ್ ಟು ಬೈ' ಸರಳ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ಹೊಂದಿರುವ ಮೊದಲ ಆನ್‌ಲೈನ್ ಮಾರಾಟ ವೇದಿಕೆಯಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಡಿದೆ.
ಹೊಸ ಹ್ಯುಂಡೈ ಕಾರುಗಳ ಖರೀದಿಗೆ ನವಪೀಳಿಗೆಯ ಡಿಜಿಟಲ್ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಭಾರತದ ಮೊದಲ ಆನ್‌ಲೈನ್ ಮಾರಾಟ ವೇದಿಕೆಯನ್ನು ಕಂಪನಿ ಒದಗಿಸುತ್ತಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಎಂಡಿ ಮತ್ತು ಸಿಇಒ ಎಸ್.ಎಸ್. ಕಿಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ದಶಕದಿಂದ ಚಿಲ್ಲರೆ ಮಾರಾಟವು ಗಮನಾರ್ಹ ಬದಲಾವಣೆಯನ್ನು ಯುವ ಸಮುದಾಯದಲ್ಲಿ ಕಂಡುಬಂದಿದೆ. ಆನ್‌ಲೈನ್ ಮೂಲಕ ತಕ್ಷಣ ಪ್ರಕ್ರಿಯೆಗೆ ಮುಂದಾಗಿತ್ತಿದ್ದಾರೆ. ಹ್ಯುಂಡೈ ಪ್ರಸ್ತುತ ದೆಹಲಿ-ಎನ್ಸಿಆರ್ನ ಕೆಲ ಆಯ್ದ ವಿತರಕರ ಮೂಲಕ ಆನ್‌ಲೈನ್ ಮಾರಾಟಕ್ಕೆ ತೆರೆದುಕೊಳ್ಳುತ್ತಿದೆ. ಕಂಪನಿಯ ಎಲ್ಲ ಶ್ರೇಣಿಯ ಕಾರುಗಳನ್ನು 'ಕ್ಲಿಕ್ ಟು ಬೈ' ವೆಬ್ಸೈಟ್ಗೆ ಭೇಟಿ ನೀಡಿ ಖರೀದಿಸಬಹುದು ಎಂದು ತಿಳಿಸಿದೆ.
ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರಸ್ತುತ 560 ಮಿಲಿಯನ್ ಇಂಟರ್ನೆಟ್ ಬಳಕೆದಾರರು ಇದ್ದಾರೆ. 2020ರಲ್ಲಿ ಶೇ 70ಕ್ಕೂ ಅಧಿಕ ಇಂಟರ್ನೆಟ್ ಬಳಕೆದಾರರು ಆನ್‌ಲೈನ್ ಮೂಲಕ ವಸ್ತು ಮತ್ತು ಸೇವೆಗಳನ್ನು ಪಡೆಯಲಿದ್ದಾರೆ ಎಂದು ಹೇಳಿದೆ.