ನವದೆಹಲಿ: ಬ್ರಿಟಿಷ್ ಹಣಕಾಸು ಹೂಡಿಕೆಯ ಫೈನಾನ್ಸಿಂಗ್ ಸಂಸ್ಥೆಯಾದ ಎಚ್‌ಎಸ್‌ಬಿಸಿ ಹೋಲ್ಡಿಂಗ್, ಹತ್ತು ಸಾವಿರ ಉದ್ಯೋಗಗಳನ್ನು ಅಂದರೇ ಶೇ 4ರಷ್ಟು ನೌಕರರ ಕಡಿತದ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಪ್ರಸಕ್ತ ವರ್ಷದಲ್ಲಿ ವೆಚ್ಚ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡು ಸಾಲ ನೀಡಿಕಯ ಮಹತ್ವಾಕಾಂಕ್ಷೆ ಇರಿಸಿಕೊಂಡಿದೆ. ಈ ಕಡಿತವು ಮುಖ್ಯವಾಗಿ ಹೆಚ್ಚಿನ ಸಂಭಾವನೆ ಪಡೆಯುವ ನೌಕರರ ಮೇಲೆ ಕೇಂದ್ರೀಕೃತವಾಗಿರಲಿದೆ ಎನ್ನಲಾಗುತ್ತಿದೆ.
2019ರ ಮಧ್ಯಂತರ ವರದಿಯ ಅನ್ವಯ, ಜೂನ್ ಅಂತ್ಯದ ವೇಳೆಗೆ 2,37,685 ಪೂರ್ಣ ಪ್ರಮಾಣದ ಉದ್ಯೋಗಿಗಳನ್ನು ಹೊಂದಿದೆ. ಈ ತಿಂಗಳ ಕೊನೆಯ 3 ತ್ರೈಮಾಸಿಕ ಫಲಿತಾಂಶದ ವರದಿಯಲ್ಲಿ ಎಚ್‌ಎಸ್‌ಬಿಸಿ ಇತ್ತೀಚಿನ ವೆಚ್ಚ ಕಡಿತದ ಮುನ್ನಲೆ ಮತ್ತು ಉದ್ಯೋಗ ಕಡಿತದ ಆರಂಭವನ್ನು ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ.
ಜಾನ್ ಫ್ಲಿಂಟ್ ಅವರ ಅಚ್ಚರಿಯ ನಿರ್ಗಮನವನ್ನು ಬ್ಯಾಂಕ್ ಘೋಷಿಸಿದ ನಂತರ ಆಗಸ್ಟ್ನಲ್ಲಿ ಕ್ವಿನ್ ಮಧ್ಯಂತರ ಸಿಇಒ ಆದರು. 'ಸವಾಲಿನಿಂದ ಕೂಡಿದ ಜಾಗತಿಕ ವಾತಾವರಣವನ್ನು ಪರಿಹರಿಸಲು ಮೇಲ್ಭಾಗದ ಹಂತದಲ್ಲಿ ಬದಲಾವಣೆ ತರುವ ಅಗತ್ಯವಿದೆ' ಎಂದು ಹೇಳಿದ್ದರು.