ETV Bharat / business

ಅನಿಲ್ ಅಂಬಾನಿ ವಿರುದ್ಧ ದಿವಾಳಿ ಪ್ರಕ್ರಿಯೆಗೆ ತಡೆಯೊಡ್ಡಿದ ಕೋರ್ಟ್​: ಅ.6ರೊಳಗೆ ಭವಿಷ್ಯ ನಿರ್ಧಾರ - ರಿಲಯನ್ಸ್ ಗ್ರೂಪ್ ಮುಖ್ಯಸ್ಥ

ಅನಿಲ್​ ಅಂಬಾನಿ ಆಗಸ್ಟ್ 2016ರಲ್ಲಿ ಆರ್‌ಕಾಮ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಲಿಮಿಟೆಡ್​​ಗೆ (ಆರ್‌ಐಟಿಎಲ್) ಕ್ರಮವಾಗಿ 565 ಕೋಟಿ ರೂ. ಮತ್ತು 635 ಕೋಟಿ ರೂ. ಎಸ್‌ಬಿಐನಿಂದ ಪಡೆದ ಸಾಲಕ್ಕೆ ವೈಯಕ್ತಿಕ ಜಾಮೀನು ನೀಡಿದ್ದರು. ಒಟ್ಟಾರೆ ಬ್ಯಾಂಕ್ 1,200 ಕೋಟಿ ರೂ.ಯಷ್ಟು ಸಾಲ ನೀಡಿತ್ತು. ಈ ಸಾಲ ವಸೂಲಿಗೆ ಅನಿಲ್ ವಿರುದ್ಧ ದಿವಾಳಿ ಪ್ರಕ್ರಿಯೆ ಜಾರಿಗೊಳಿಸಲು ಎಸ್​ಬಿಐ ಮುಂದಾಗಿತ್ತು. ಹೈಕೋರ್ಟ್ ಇದಕ್ಕೆ ತಡೆಯೊಡ್ಡಿದೆ.

Anil Ambani
ಅನಿಲ್ ಅಂಬಾನಿ
author img

By

Published : Aug 27, 2020, 8:47 PM IST

ನವದೆಹಲಿ: ತನ್ನ ಎರಡು ಸಂಸ್ಥೆಗಳಿಗೆ ಎಸ್‌ಬಿಐ ನೀಡಿದ 1,200 ಕೋಟಿ ರೂ. ಸಾಲ ವಸೂಲಿ ಸಂಬಂಧ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧದ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು (ಐಆರ್‌ಪಿ) ದೆಹಲಿ ಹೈಕೋರ್ಟ್ ಗುರುವಾರ ತಡೆಹಿಡಿದಿದೆ.

ಅನಿಲ್​ ಅಂಬಾನಿ ಅವರು ಆಗಸ್ಟ್ 2016ರಲ್ಲಿ ಆರ್‌ಕಾಮ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಲಿಮಿಟೆಡ್​​ಗೆ (ಆರ್‌ಐಟಿಎಲ್) ಕ್ರಮವಾಗಿ 565 ಕೋಟಿ ರೂ. ಮತ್ತು 635 ಕೋಟಿ ರೂ. ಎಸ್‌ಬಿಐನಿಂದ ಪಡೆದ ಸಾಲಕ್ಕೆ ವೈಯಕ್ತಿಕ ಜಾಮೀನು ನೀಡಿದ್ದರು. ಒಟ್ಟಾರೆ ಬ್ಯಾಂಕ್ 1,200 ಕೋಟಿ ರೂ.ಯಷ್ಟು ಸಾಲ ನೀಡಿತ್ತು.

ಈ ಸಾಲ ವಸೂಲಿಗೆ ಅನಿಲ್ ವಿರುದ್ಧ ದಿವಾಳಿ ಪ್ರಕ್ರಿಯೆ ಜಾರಿಗೊಳಿಸಲು ಎಸ್​ಬಿಐ ಮುಂದಾಗಿತ್ತು. ಇದಕ್ಕೆ ತಡೆಯೊಡ್ಡಿರುವ ಹೈಕೋರ್ಟ್​, ಮುಂದಿನ ವಿಚಾರಣೆಯ ತನಕ ತಮ್ಮ ಸ್ವತ್ತುಗಳು ಅಥವಾ ಕಾನೂನು ಹಕ್ಕುಗಳನ್ನು ಇನ್ನೊಬ್ಬರಿಗೆ ವರ್ಗಾಯಿಸದಂತೆ, ಪರಭಾರೆ ಮಾಡದಂತೆ ಅಥವಾ ವಿಲೇವಾರಿ ಮಾಡದಂತೆ ಕೋರ್ಟ್​ ಸೂಚಿಸಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರಜನೀಶ್ ಭಟ್ನಾಗರ್ ಅವರಿದ್ದ ನ್ಯಾಯಪೀಠ, ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಅಡಿಯಲ್ಲಿ ಐಆರ್​ಪಿಯನ್ನು ತಡೆಹಿಡಿಯಿತು. ವಿಚಾರಣೆಯು ಅಕ್ಟೋಬರ್ 6ರ ಒಳಗೆ ನಡೆಯಲಿದ್ದು ಈ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ಕೇಂದ್ರ, ದಿವಾಳಿತನ ಮತ್ತು ದಿವಾಳಿತನ ಮಂಡಳಿ (ಐಬಿಬಿಐ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗಳಿಗೆ ನ್ಯಾಯಾಲಯ ನೋಟಿಸ್ ನೀಡಿದೆ.

ಕಾರ್ಪೊರೇಟ್ ಸಾಲಗಾರರಿಗೆ (ಕಂಪೆನಿಗಳು) ಸಂಬಂಧಿಸಿದಂತೆ ವಿಚಾರಣೆ ಮುಂದುವರಿಯುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆ ಪ್ರಕ್ರಿಯೆಗಳೊಂದಿಗೆ ವ್ಯವಹರಿಸುವಾಗ ಅರ್ಜಿದಾರ ವೈಯಕ್ತಿಕ ಖಾತರಿಗಾರ (ಅಂಬಾನಿ) ಅವರ ಹೊಣೆಗಾರಿಕೆಯನ್ನು ಸಹ ಐಆರ್​ಪಿ ಪರಿಶೀಲಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.