ETV Bharat / business

Helo, Tiktok ಬಳಕೆದಾರರಿಗೆ ಕೇಂದ್ರದಿಂದ ಮತ್ತೊಂದು ಬಿಗ್ ಶಾಕ್​..!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್ (ಎಸ್​ಜೆಎಂ), ಈ ಎರಡೂ ಅಪ್ಲಿಕೇಷನ್​ಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ ಎಂದು ಆರೋಪಿಸಿ ಪ್ರಧಾನಿಗೆ ದೂರು ಸಲ್ಲಿಸಿದ್ದರು. ಈ ದೂರು ಪ್ರಧಾನಿ ಕಚೇರಿ ತಲುಪಿದ್ದರಿಂದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಇದನ್ನು ಗಂಭೀರವಾಗಿ ತೆಗೆದುಕೊಂಡು 21 ಪ್ರಶ್ನೆಗಳಿಗೆ ಉತ್ತರ ಬಯಸಿ ನೋಟಿಸ್ ನೀಡಿದೆ.

ಸಾಂದರ್ಭಿಕ ಚಿತ್ರ
author img

By

Published : Jul 18, 2019, 5:32 PM IST

ನವದೆಹಲಿ: ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ 'ಟಿಕ್​ಟಾಕ್​' ಮತ್ತು 'ಹೆಲೋ' ಆಡಳಿತ ಮಂಡಳಿಗಳಿಗೆ ಕೇಂದ್ರ ಸರ್ಕಾರವು 21 ಪ್ರಶ್ನೆಗಳಿಗೆ ಉತ್ತರ ಕೇಳಿ ನೋಟಿಸ್ ನೀಡಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಇವುಗಳನ್ನು ನಿಷೇಧಿಸುವುದಾಗಿ ಎಚ್ಚರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ್ (ಎಸ್​ಜೆಎಂ), ಈ ಎರಡೂ ಅಪ್ಲಿಕೇಷನ್​ಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ ಎಂದು ಆರೋಪಿಸಿ ಪ್ರಧಾನಿಗೆ ದೂರು ಸಲ್ಲಿಸಿದ್ದರು. ಈ ದೂರು ಪ್ರಧಾನಿ ಕಚೇರಿ ತಲುಪಿದ್ದರಿಂದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಇದನ್ನು ಗಂಭೀರವಾಗಿ ಪರಿಗಣಿಸಿ 21 ಪ್ರಶ್ನೆಗಳಿಗೆ ಉತ್ತರ ಬಯಸಿ ನೋಟಿಸ್ ನೀಡಿದೆ.

ರಾಷ್ಟ್ರ ವಿರೋಧಿ ಚಟುವಟಿಕೆ ಮತ್ತು ಭಾರತೀಯ ಬಳಕೆದಾರರ ಡೇಟಾ ಗೌಪ್ಯತೆಯ ವರ್ಗಾವಣೆ ಅಥವಾ ಮೂರನೇ ವ್ಯಕ್ತಿಗೆ ಹಸ್ತಾಂತರ ಕುರಿತು ಸ್ಪಷ್ಟ ಉತ್ತರ ನೀಡುವಂತೆ 'ಮೈಟಿ' ನೋಟಿಸ್​ನಲ್ಲಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಸೋಷಿಯಲ್ ಮೀಡಿಯಾ ಸೈಟ್‌ಗಳಲ್ಲಿ 11,000ಕ್ಕೂ ಅಧಿಕ ಮಾರ್ಫ್ಡ್​​ ರಾಜಕೀಯ ಜಾಹೀರಾತು ಪ್ರಸಾರದಿಂದ ಭಾರಿ ಮೊತ್ತದ ಹಣ ಪಾವತಿಯಾಗಿದೆ ಎಂಬ ಆರೋಪದ ಮೇಲೆ ಐಟಿ ಸಚಿವಾಲಯ ಹೆಲೋನಿಂದ ವಿವರಣೆಯನ್ನು ಕೇಳಿದೆ.

ಭಾರತದ ಕಾನೂನಿನ ಅನ್ವಯ 18 ವರ್ಷಕ್ಕಿಂತ ಕಡಿಮೆ ವಯೋಮಾನದವರನ್ನು ಮಕ್ಕಳೆಂದು ಪರಿಗಣಿಸಲಾಗುತ್ತದೆ. ಆದರೆ, ಈ ಎರಡು ಅಪ್ಲಿಕೇಷನ್​ಗಳಲ್ಲಿ 13 ವರ್ಷಕ್ಕಿಂತ ಕಡಿಮ ವಯೋಮಾನದ ಮಕ್ಕಳು ಬಳಸುತ್ತಿದ್ದಾರೆ ಎಂದು ಆರೋಪದ ಬಗ್ಗೆಯೂ 'ಮೈಟಿ' ಪ್ರಶ್ನಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.