ETV Bharat / business

ಜಗತ್ತಿನ ಅಗ್ರ ಶ್ರೀಮಂತ ಜೆಫ್ ಬೆಜೋಸ್, ಎಲೋನ್​ ಮಸ್ಕ್ ಹಿಂದಿಕ್ಕಿದ ಅದಾನಿ - ಎಲೋನ್ ಮಸ್ಕ್ ಸಂಪತ್ತು

ಬ್ಲೂಂ‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಉದ್ಯಮಿ ಗೌತಮ್​ ಅದಾನಿ ಅವರ ಸಂಪತ್ತಿನ ನಿವ್ವಳ ಮೌಲ್ಯವು 2021ರಲ್ಲಿ 16.2 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿ 50 ಬಿಲಿಯನ್‌ ಡಾಲರ್​ಗೆ ಏರಿದೆ. ಇದು ಅವರನ್ನು ವರ್ಷದ ಅತಿಹೆಚ್ಚು ಸಂಪತ್ತು ಗಳಿಸಿದವರಲ್ಲಿ ಮೊದಲಿಗರನ್ನಾಗಿ ಮಾಡಿದೆ.

Gautam Adani
Gautam Adani
author img

By

Published : Mar 12, 2021, 3:52 PM IST

ನವದೆಹಲಿ: ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರು ಬಂದರು ಉದ್ಯಮದಿಂದ, ವಿದ್ಯುತ್ ಸ್ಥಾವರದ ತನಕ ಹೂಡಿಕೆ ವ್ಯಾಪ್ತಿ ವಿಸ್ತರಿಸಿಕೊಂಡಿದ್ದು, ಈ ವರ್ಷ ವಿಶ್ವದ ಎಲ್ಲರಿಗಿಂತ ಹೆಚ್ಚು ಶತಕೋಟಿ ಸಂಪತ್ತು ಗಳಿಸಿದವರ ಸಾಲಿನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

ಬ್ಲೂಂಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಉದ್ಯಮಿ ಗೌತಮ್​ ಅದಾನಿ ಅವರ ನಿವ್ವಳ ಮೌಲ್ಯವು 2021ರಲ್ಲಿ 16.2 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿ 50 ಬಿಲಿಯನ್‌ ಡಾಲರ್​ಗೆ ಏರಿದೆ. ಇದು ಅವರನ್ನು ವರ್ಷದ ಅತಿಹೆಚ್ಚು ಸಂಪತ್ತು ಗಳಿಸಿದವರಲ್ಲಿ ಮೊದಲಿಗರನ್ನಾಗಿ ಮಾಡಿದೆ.

ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರು ಜಗತ್ತಿನ ನಂಬರ್​ 1 ಕುಬೇರ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಮಧ್ಯೆಯೂ ಮೇಲ್ಪಂಕ್ತಿ ಕಾಯ್ದುಕೊಂಡಿದ್ದಾರೆ. ಎಲ್ಲಾ ಅದಾನಿ ಗ್ರೂಪ್ ಷೇರುಗಳ ಈ ವರ್ಷ ಕನಿಷ್ಠ ಶೇ 50ರಷ್ಟು ಒಗ್ಗೂಡಿವೆ.

ಅದಾನಿ ಸಂಪತ್ತಿನ ಜಿಗಿತವು ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಸೇರಿದ 8.1 ಬಿಲಿಯನ್ ಡಾಲರ್​​ ಅನ್ನು ಕುಬ್ಜಗೊಳಿಸುತ್ತದೆ. ಅದಾನಿಯೂ ತಮ್ಮ ಬಂಡವಾಳ ವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದ್ದಾರೆ. ಭಾರತದಲ್ಲಿ ಬಂದರು, ವಿಮಾನ ನಿಲ್ದಾಣ, ದತ್ತಾಂಶ ಕೇಂದ್ರ ಮತ್ತು ಕಲ್ಲಿದ್ದಲು ಗಣಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ತಮ್ಮ ವಿವಾದಾತ್ಮಕ ಕಾರ್ಮೈಕಲ್ ಕಲ್ಲಿದ್ದಲು ಯೋಜನೆ ಈಗಲೂ ಮುಂದುವರಿದಿದೆ.

ಇದನ್ನೂ ಓದಿ: 12 ಕೋಟಿ ರೂ.. 12 ವರ್ಷ.. 2,000 ಕೋಟಿಗೆ ಮಾರಾಟ: ಯಾವ ಕಂಪನಿ, ಏನಿದರ ಯಶೋಗಾಥೆ?

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಭಾರತದಲ್ಲಿ 1 ಗಿಗಾವಾಟ್ ಡೇಟಾ ಸೆಂಟರ್ ಸಾಮರ್ಥ್ಯ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿತು. ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಈ ವರ್ಷ ಶೇ 96ರಷ್ಟು ಜಿಗಿದಿದ್ದರೆ, ಅದಾನಿ ಎಂಟರ್‌ಪ್ರೈಸಸ್ ಶೇ 90ರಷ್ಟು ಮುನ್ನಡೆ ಸಾಧಿಸಿದೆ. ಅದಾನಿ ಟ್ರಾನ್ಸ್​ಮಿಷನ್ ಲಿಮಿಟೆಡ್ ಶೇ 79ರಷ್ಟು ವೃದ್ಧಿಯಾಗಿದೆ. ಅದಾನಿ ಪವರ್ ಲಿಮಿಟೆಡ್ ಮತ್ತು ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯಗಳ ಲಿಮಿಟೆಡ್ ಈ ವರ್ಷ ಶೇ 52ಕ್ಕಿಂತ ಹೆಚ್ಚು ಗಳಿಕೆ ಕಂಡಿವೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಕಳೆದ ವರ್ಷ ಶೇ 500ಕ್ಕಿಂತ ಏರಿಕೆಯಾದ ನಂತರ, ಈ ವರ್ಷ 12ರಷ್ಟು ಹೆಚ್ಚಳವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.