ETV Bharat / business

ಫೋರ್ಡ್- ಮಹೀಂದ್ರಾ ಜಂಟಿ ಸಹಭಾಗಿತ್ವ ಒಪ್ಪಂದಕ್ಕೆ ಇತಿಶ್ರೀ! - ಜಂಟಿ ಉದ್ಯಮ

ಸಣ್ಣ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೊಸ ಸ್ಪೋರ್ಟ್ಸ್ ಯುಟಿಲಿಟಿ ವಾಹನ ಅಭಿವೃದ್ಧಿಪಡಿಸಲು ಫೋರ್ಡ್ ಮತ್ತು ಮಹೀಂದ್ರಾ ಶೇ 51:49ರಷ್ಟು ಈಕ್ವಿಟಿ ಪಾಲುದಾರಿಕೆಯ ಜಂಟಿ ಉದ್ಯಮಕ್ಕಾಗಿ ಆರಂಭಿಕ ಒಪ್ಪಂದವನ್ನು 2018ರಲ್ಲಿ ಘೋಷಿಸಿದ್ದವು.

Mahindra
ಮಹೀಂದ್ರಾ
author img

By

Published : Jan 1, 2021, 12:08 PM IST

ನವದೆಹಲಿ: ಕೋವಿಡ್​-19 ಪ್ರಚೋದಿತ ಆರ್ಥಿಕ ಕುಸಿತದ ಪ್ರಭಾವದಿಂದಾಗಿ ಅಮೆರಿಕದ ವಾಹನ ತಯಾರಕ ಫೋರ್ಡ್ ಮೋಟಾರ್ ಕಂಪನಿ ಮತ್ತು ದೇಶದ ಪ್ರಮುಖ ವಾಹನೋದ್ಯಮ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಭಾರತದಲ್ಲಿ ಜಂಟಿ ಉದ್ಯಮ ರೂಪಿಸುವ ನಿರ್ಧಾರ ರದ್ದುಗೊಳಿಸಿದ್ದಾಗಿ ಶುಕ್ರವಾರ ಘೋಷಿಸಿವೆ.

ಈ ಕ್ರಮವು 2020ರ ಡಿಸೆಂಬರ್ 31ರ 'ಲಾಂಗ್‌ಸ್ಟಾಪ್ ದಿನಾಂಕ' ಮುಗಿದ ನಂತರ ಕಂಪನಿ ಮತ್ತು ಎಫ್‌ಎಂಸಿ ನಡುವಿನ ಒಪ್ಪಂದಗಳನ್ನು ಮರುಪರಿಶೀಲನೆ ಮಾಡಲಾಗಿದೆ ಎಂದು ಬಾಂಬೆ ಷೇರು ವಿನಿಮಯಕ್ಕೆ ಎಂ & ಎಂ ತಿಳಿಸಿದೆ.

ಜಾಗತಿಕ ಸಾಂಕ್ರಾಮಿಕ ರೋಗ ಜಾಗತಿಕ ಆರ್ಥಿಕತೆಯ ಮೇಲೆ ಉಂಟು ಮಾಡಿದ ಅಡೆತಡೆ ಮತ್ತು ವ್ಯವಹಾರಿಕ ವಾತಾವರಣಗಳಲ್ಲಿನ ಮೂಲಭೂತ ಬದಲಾವಣೆಗಳು ಈಗಿನ ನಿರ್ಧಾರಕ್ಕೆ ಕಾರಣವಾಗಿವೆ. ಈ ಬದಲಾವಣೆಗಳು ಆಯಾ ಬಂಡವಾಳ ಹಂಚಿಕೆ ಆದ್ಯತೆಗಳನ್ನು ಮರು ಮೌಲ್ಯಮಾಪನ ಮಾಡಲು ಎರಡೂ ಕಂಪನಿಗಳ ಪ್ರತ್ಯೇಕ ನಿರ್ಧಾರಗಳ ಮೇಲೆ ಪ್ರಭಾವ ಬೀರಿತು ಎಂದು ಹೇಳಿದೆ.

ಸಣ್ಣ ಎಲೆಕ್ಟ್ರಿಕ್ ವಾಹನದಲ್ಲಿ ಹೊಸ ಸ್ಪೋರ್ಟ್ಸ್ ಯುಟಿಲಿಟಿ ವಾಹನ ಅಭಿವೃದ್ಧಿಪಡಿಸಲು ಫೋರ್ಡ್ ಮತ್ತು ಮಹೀಂದ್ರಾ ಶೇ 51:49ರಷ್ಟು ಈಕ್ವಿಟಿ ಪಾಲುದಾರಿಕೆಯ ಜಂಟಿ ಉದ್ಯಮಕ್ಕಾಗಿ ಆರಂಭಿಕ ಒಪ್ಪಂದವನ್ನು 2018ರಲ್ಲಿ ಘೋಷಿಸಿದ್ದವು.

ಈ ತರುವಾಯ ಅಕ್ಟೋಬರ್​​ನಲ್ಲಿ ಮಹೀಂದ್ರಾ ಮತ್ತು ಫೋರ್ಡ್ ಭಾರತ್ ಸ್ಟೇಜ್​ VI- ಕಂಪ್ಲೈಂಟ್ ಎಂಜಿನ್​ಗಳನ್ನು ಹಂಚಿಕೊಳ್ಳಲು ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಘೋಷಿಸಿದವು. ಈ ಎಲ್ಲ ಒಪ್ಪಂದಗಳು 2021ರ ಆರಂಭದಲ್ಲಿ ಮುರಿದು ಬಿದ್ದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.