ಚೆನ್ನೈ: ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಅಧ್ಯಕ್ಷರ ಹೆಸರನ್ನು ಬ್ಯಾಂಕ್ಗಳ ಮಂಡಳಿ ಶಿಫಾರಸು ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮುಂದಿನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರಾ ಅವರನ್ನು ಬ್ಯಾಂಕ್ಗಳ ಮಂಡಳಿ ಶುಕ್ರವಾರ ಸೂಚಿಸಿ ಅಂತಿಮಗೊಳಿಸಿದೆ. ಇದೇ ಹುದ್ದೆಗೆ ಮೀಸಲು ಅಭ್ಯರ್ಥಿ ಚಲ್ಲಾ ಶ್ರೀನಿವಾಸುಲು ಸೆಟ್ಟಿ ಹೆಸರು ಕೂಡಾ ಕೇಳಿ ಬಂದಿದೆ.
ಖಾರಾ ಮತ್ತು ಸೆಟ್ಟಿ ಇಬ್ಬರೂ ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2017ರ ಅಕ್ಟೋಬರ್ 7ರಂದು ಹಾಲಿ ಅಧ್ಯಕ್ಷ ರಜನೀಶ್ ಕುಮಾರ್ ನೇಮಕ ಆಗಿದ್ದರು. ಅವರ ಅವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಬ್ಯಾಂಕಿನ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಮಂಡಳಿಯ ಸದಸ್ಯರು ಶುಕ್ರವಾರ ಎಸ್‌ಬಿಐನ ನಾಲ್ಕು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿದ್ದರು.