ಹೈದರಾಬಾದ್: ಕೋವ್ಯಾಕ್ಸಿನ್ -19 ಲಸಿಕೆ ಪೂರೈಕೆಯ ತಯಾರಿಕೆಯಲ್ಲಿ ತಂತ್ರಜ್ಞಾನ ಮತ್ತು ನಿಯಂತ್ರಕ ಅನುಮೋದನೆ ಅವಲಂಬಿಸಿ ಕೋವ್ಯಾಕ್ಸಿನ್ ನಾಲ್ಕು ತಿಂಗಳು ವಿಳಂಬ ಸಮಯ ಒಳಗೊಂಡಿರುತ್ತದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ತಂತ್ರಜ್ಞಾನದ ಚೌಕಟ್ಟು ಮತ್ತು ಪೂರೈಸಬೇಕಾದ ನಿಯಂತ್ರಕ ಮಾರ್ಗಸೂಚಿಗಳನ್ನು ಅವಲಂಬಿಸಿ ಸುಮಾರು 120 ದಿನಗಳ ಕೋವ್ಯಾಕ್ಸಿನಿಸ್‌ನ ಉತ್ಪಾದನೆ, ಪರೀಕ್ಷೆ ಮತ್ತು ಬಿಡುಗಡೆಗೆ ಸಮಯ ತಗುಲಲಿದೆ. ಹೀಗಾಗಿ, ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭಿಸಲಾದ ಕೋವ್ಯಾಕ್ಸಿನ್ ಉತ್ಪಾದನಾ ಬ್ಯಾಚ್‌ಗಳು ಜೂನ್ ತಿಂಗಳಲ್ಲಿ ಮಾತ್ರ ಪೂರೈಕೆಗೆ ಸಿದ್ಧವಾಗುತ್ತವೆ ಎಂದು ಲಸಿಕೆ ತಯಾರಕರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೇಶವು ಕೋವಿಡ್-19 ಲಸಿಕೆಗಳ ಕೊರತೆ ಎದುರಿಸುತ್ತಿರುವ ಸಮಯದಲ್ಲಿ ಭಾರತ್ ಬಯೋಟೆಕ್ನ ಸ್ಪಷ್ಟೀಕರಣವು ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಕಾರ್ಯಕ್ರಮದಲ್ಲಿ ಅಡೆತಡೆಗಳಿಗೆ ಕಾರಣವಾಗಿದೆ. 'ನೈಜ ವ್ಯಾಕ್ಸಿನೇಷನ್ ಆಗಿ ವರ್ಗಾಯಿಸಲು ಕೋವ್ಯಾಕ್ಸಿನ್ಗೆ ನಾಲ್ಕು ತಿಂಗಳ ವಿಳಂಬ ಸಮಯವಿದೆ' ಎಂದಿದೆ.
ಲಸಿಕೆಗಳ ಉತ್ಪಾದನೆ, ಪರೀಕ್ಷೆ, ಬಿಡುಗಡೆ ಮತ್ತು ವಿತರಣೆ ನೂರಾರು ಹಂತಗಳನ್ನು ಹೊಂದಿರುವ ಸಂಕೀರ್ಣ ಹಾಗೂ ಬಹು ಪರಿವರ್ತನಾ ಪ್ರಕ್ರಿಯೆಗಳಾಗಿದ್ದು, ವೈವಿಧ್ಯಮಯ ಮಾನವ ಸಂಪನ್ಮೂಲ ಅಗತ್ಯವಿರುತ್ತದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಲಸಿಕೆಗಳು ಜನರಿಗೆ ಲಭ್ಯವಾಗಿ ವ್ಯಾಕ್ಸಿನೇಷನ್ಗೆ ಕಾರಣವಾಗಲು ಅಂತಾರಾಷ್ಟ್ರೀಯ ಪೂರೈಕೆ ಸರಪಳಿಗಳು, ತಯಾರಕರು, ನಿಯಂತ್ರಕರು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಂಸ್ಥೆಗಳಿಂದ ಹೆಚ್ಚು ಸಂಘಟಿತ ಪ್ರಯತ್ನಗಳು ಅಗತ್ಯವಿದೆ ಎಂದು ಹೇಳಿದೆ.
ಲಸಿಕೆಗಳ ಉತ್ಪಾದನಾ ಪ್ರಮಾಣವು ಹಂತ - ಹಂತದ ಪ್ರಕ್ರಿಯೆಯಾಗಿದ್ದು, ಜಿಎಂಪಿಯ ಹಲವು ನಿಯಂತ್ರಕ ಎಸ್‌ಒಪಿಗಳನ್ನು ಒಳಗೊಂಡಿರುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿಡಿಎಸ್ಕೊ) ಮಾರ್ಗಸೂಚಿಗಳ ಆಧಾರದ ಮೇಲೆ ಭಾರತದಲ್ಲಿ ಸರಬರಾಜು ಮಾಡಲಾದ ಎಲ್ಲ ಲಸಿಕೆಗಳನ್ನು ಭಾರತ ಸರ್ಕಾರದ ಕೇಂದ್ರ ಔಷಧ ಪ್ರಯೋಗಾಲಯಕ್ಕೆ ಪರೀಕ್ಷಿಸಲು ಮತ್ತು ಬಿಡುಗಡೆ ಮಾಡಲು ಕಾನೂನಿನ ಪ್ರಕಾರ ಕಡ್ಡಾಯಗೊಳಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸರಬರಾಜು ಮಾಡಲಾದ ಎಲ್ಲಾ ಬ್ಯಾಚ್‌ಗಳ ಲಸಿಕೆಗಳು ಕೇಂದ್ರದಿಂದ ಪಡೆದ ಹಂಚಿಕೆ ಚೌಕಟ್ಟನ್ನು ಆಧರಿಸಿವೆ ಎಂದು ಕಂಪನಿ ತಿಳಿಸಿದೆ.