ಹೈದರಾಬಾದ್: ಹನ್ನೆರಡು ವರ್ಷದ ಬಾಲಕನೊಬ್ಬ ಸಾಫ್ಟವೇರ್ ಕಂಪನಿಯೊಂದರಲ್ಲಿ ಡೇಟಾ ವಿಜ್ಞಾನಿಯಾಗಿ ಕೆಲಸ ಗಿಟ್ಟಿಸಿಕೊಂಡು ದಾಖಲೆ ಬರೆದಿದ್ದು, ಇದಕ್ಕೆ ಪ್ರೇರಣೆ ಆಗಿದ್ದು ತನ್ನದೇ ವಯಸ್ಸಿನ ಮತ್ತೊಬ್ಬ ಬಾಲಕ ಎಂದು ಹೇಳಿಕೊಂಡಿದ್ದಾನೆ.
ಕಳೆದ ವರ್ಷ ತನ್ಮಯ ಬಕ್ಸಿ ಎಂಬ 11ನೇ ವಯಸ್ಸಿನ ಬಾಲಕ ಪ್ರತಿಷ್ಠಿತ ಗೂಗಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಇವನ ಸಾಧನೆಯಿಂದ ಸ್ಫೂರ್ತಿ ಪಡೆದ ಹೈದರಾಬಾದ್ನ ಚೈತನ್ಯ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಸಿದ್ಧಾರ್ಥ ಶ್ರೀವತ್ಸವ್ ಪಿಳ್ಳಿ ಎಂಬ ಬಾಲಕ ಡೇಟಾ ವಿಜ್ಞಾನಿಯಾಗಿ ನೇಮಕವಾಗಿದ್ದಾನೆ.
ಮೊಂಟೆಜಿನ್ ಸ್ಮಾರ್ಟ್ ಬಿಜಿನೆಸ್ ಸೊಲ್ಯೂಷನ್ ಸಾಫ್ಟವೇರ್ ಕಂಪನಿಯೊಂದಕ್ಕೆ ಆಯ್ಕೆಯಾಗಿ ಮಾತನಾಡಿದ ಸಿದ್ಧಾರ್ಥ, ನನಗೆ ಸಾಫ್ಟವೇರ್ ಕಂಪನಿಗೆ ಸೇರಲು ತನ್ಮಯಾ ಬಕ್ಸಿ ಪ್ರಮುಖ ಪ್ರೇರಣೆ. ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಗೂಗಲ್ ಸಂಸ್ಥೆಗೆ ಡೆವಲಪರ್ ಆಗಿ ಆಯ್ಕೆಯಾಗಿದ್ದರು. ಇದು ನನಗೆ ಅವರಂತೆ ಸಾಧನೆ ಮಾಡಲು ಉತ್ತೇಜನ ನೀಡಿತ್ತು ಎಂದಿದ್ದಾನೆ.
ನಾನು ತುಂಬಾ ಸಮಯ ವಿಡಿಯೋ ಗೇಮ್ ಆಡುವುದರಲ್ಲಿ ಕಾಲ ಕಳೆಯುತ್ತಿದೆ. ಅಂತಹ ಸಮಯದಲ್ಲಿ ನಾನೇ ಒಂದು ಗೇಮ್ ತಯಾರಿಸಿದೆ. ನಂತರ ಇದೇ ರೀತಿ ಸಾಫ್ಟ್ವೇರ್ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲು ನೆರವಾಯಿತು. ನನಗೆ ನನ್ನ ತಂದೆ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು ಎಂದು ಬಾಲಕ ಹೇಳಕೊಂಡಿದ್ದಾನೆ.