ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಬ್ರಾಂಡ್ ಅಂಬಾಸಿಡರ್ ಮತ್ತು ಹೂಡಿಕೆದಾರರಾಗಿ ಬಂದಿದ್ದಾರೆ ಎಂದು ದೇಶೀಯ ಕಿರು ವಿಡಿಯೋ ಪ್ಲಾಟ್‌ಫಾರ್ಮ್ ಚಿಂಗಾರಿ ಹೇಳಿದೆ.
ಸಲ್ಮಾನ್ ಖಾನ್ ಅವರು ಚಿಂಗಾರಿಯ ಪಾಲುದಾರರು ಆಗುತ್ತಿರುವುದು ನಿಜವಾಗಿಯೂ ಮಹತ್ವದಾಗಿದೆ. ಭಾರತದ ಪ್ರತಿಯೊಂದು ರಾಜ್ಯಕ್ಕೂ ತಲುಪುವುದು ನಮ್ಮ ಉದ್ದೇಶ. ಸಲ್ಮಾನ್ ಖಾನ್ ನಮ್ಮ ಜಾಗತಿಕ ಬ್ರಾಂಡ್ ರಾಯಭಾರಿಗಳು ಮತ್ತು ಹೂಡಿಕೆದಾರರಲ್ಲಿ ಒಬ್ಬರಾಗಿರುವುದು ಸಂತೋಷ ತಂದಿದೆ ಎಂದು ಚಿಂಗಾರಿ ಸಹ ಸಂಸ್ಥಾಪಕ ಮತ್ತು ಸಿಇಒ ಸುಮಿತ್ ಘೋಷ್ ಹೇಳಿದರು.
-
It's #Dabangg time on #Chingari! Welcoming our official Global Brand Ambassador and investor @BeingSalmanKhan to Team Chingari with a whole lot of swag and excitement! @salvidee @sumitgh85 @adityakothari @thebiswatma pic.twitter.com/HypzJIkDOg
— Chingari Official Page (@Chingari_IN) April 2, 2021 " class="align-text-top noRightClick twitterSection" data="
">It's #Dabangg time on #Chingari! Welcoming our official Global Brand Ambassador and investor @BeingSalmanKhan to Team Chingari with a whole lot of swag and excitement! @salvidee @sumitgh85 @adityakothari @thebiswatma pic.twitter.com/HypzJIkDOg
— Chingari Official Page (@Chingari_IN) April 2, 2021It's #Dabangg time on #Chingari! Welcoming our official Global Brand Ambassador and investor @BeingSalmanKhan to Team Chingari with a whole lot of swag and excitement! @salvidee @sumitgh85 @adityakothari @thebiswatma pic.twitter.com/HypzJIkDOg
— Chingari Official Page (@Chingari_IN) April 2, 2021
ಕಳೆದ ವರ್ಷ ಏಂಜಲ್ ಲಿಸ್ಟ್, ಐಸೀಡ್, ವಿಲೇಜ್ ಗ್ಲೋಬಲ್, ಬ್ಲೂಮ್ ಫೌಂಡರ್ಸ್ ಫಂಡ್, ಜಾಸ್ಮಿಂದರ್ ಸಿಂಗ್ ಗುಲಾಟಿ ಮತ್ತು ಇತರ ಹೂಡಿಕೆದಾರರಿಂದ ಚಿಂಗಾರಿ 1.4 ಮಿಲಿಯನ್ ಡಾಲರ್ ಸಂಗ್ರಹಿಸಿತ್ತು. ಈ ಆ್ಯಪ್ ಅನ್ನು ಬೆಂಗಳೂರು ಮೂಲದ ಡೆವಲಪರ್‌ಗಳಾದ ಬಿಸ್ವತ್ಮಾ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಅಭಿವೃದ್ಧಿಪಡಿಸಿದ್ದಾರೆ.
ಇದನ್ನೂ ಓದಿ: ರಿಲಯನ್ಸ್-ಫ್ಯೂಚರ್ ಒಪ್ಪಂದಕ್ಕೆ ಇನ್ನೂ 6 ತಿಂಗಳು ಗಡುವು
ಇತ್ತೀಚಿನ ಹೂಡಿಕೆಯು ಚಿಂಗಾರಿ ತನ್ನ ಬೆಳವಣಿಗೆಯನ್ನು 56 ದಶಲಕ್ಷ ಬಳಕೆದಾರರಿಂದ 100 ದಶಲಕ್ಷಕ್ಕೂ ಹೆಚ್ಚಿನ ಬಳಕೆದಾರರಿಗೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ.
ಚಿಂಗಾರಿ ತನ್ನ ಕಂಟೆಂಟ್ ಪೋರ್ಟ್ಫೋಲಿಯೊ ಹೆಚ್ಚಿಸಲು ಮತ್ತು ಉನ್ನತ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಈ ಹಣವನ್ನು ಬಳಸುತ್ತದೆ.
ಟೆಕ್ 4 ಬಿಲಿಯನ್ ಮೀಡಿಯಾವು ಚಿಂಗಾರಿ ಆ್ಯಪ್ ಹೊಂದಿದ್ದು ಇಂಗ್ಲಿಷ್, ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ, ಕನ್ನಡ, ಒಡಿಯಾ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗು ಸೇರಿದಂತೆ 14 ಭಾಷೆಗಳಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
ಚಿಂಗಾರಿ ಆ್ಯಪ್ ಅನ್ನು ಮೊದಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನವೆಂಬರ್ 2018ರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಅದನ್ನು ಮರುಬ್ರಾಂಡ್ ಮಾಡಿ ಜೂನ್ 2020ರಲ್ಲಿ ಮರುವಿನ್ಯಾಸಗೊಳಿಸಲಾಯಿತು.