ETV Bharat / business

ಯೆಸ್​ ಬ್ಯಾಂಕ್​ ಉಪಾಧ್ಯಕ್ಷ ಧೀರಜ್ ಕಿಡ್ನಾಪ್​, ಹತ್ಯೆ ಪ್ರಕರಣ: 5 ತಿಂಗಳ ಬಳಿಕ ಕೇಸ್​ ಸಿಬಿಐಗೆ ಹಸ್ತಾಂತರ

ಹರಿಯಾಣ ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿಯಿಲ್ಲದ ಕಾರಣ, ಅವರ ಕುಟುಂಬವು ಅಕ್ಟೋಬರ್ 17ರಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿತು.

author img

By

Published : Jan 21, 2021, 5:28 PM IST

CBI
ಸಿಬಿಐ

ನವದೆಹಲಿ: ಯೆಸ್ ಬ್ಯಾಂಕ್ ಉಪಾಧ್ಯಕ್ಷ ಧೀರಜ್ ಅಹ್ಲಾವತ್ ಕೊಲೆಯಾಗಿ ಸುಮಾರು ಐದು ತಿಂಗಳು ಕಳೆದ ಬಳಿಕ, ಕೇಂದ್ರ ತನಿಖಾ ದಳ (ಸಿಬಿಐ) ಹರಿಯಾಣ ಪೊಲೀಸರಿಂದ ತನಿಖೆ ಉಸ್ತುವಾರಿಯನ್ನು ತಾವು ವಹಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಜನವರಿ 17ರಂದು ಕೇಂದ್ರದಿಂದ ಅಧಿಸೂಚನೆ ಬಂದ ನಂತರ ಸಿಬಿಐ ಕೊಲೆ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡಿದೆ. ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ ತನಿಖೆಗೆ ಅಧಿಸೂಚನೆ ಹೊರಡಿಸಿದೆ.

ಯೆಸ್ ಬ್ಯಾಂಕಿನ ಕಾರ್ಪೊರೇಟ್ ಬ್ಯಾಂಕಿಂಗ್ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಅಹ್ಲಾವತ್ ಕಳೆದ ವರ್ಷ ಆಗಸ್ಟ್ 5ರಂದು ಗುರುಗ್ರಾಮ್​ನ ಸೆಕ್ಟರ್ 46ರಲ್ಲಿ ಇರುವ ತಮ್ಮ ನಿವಾಸದ ಬಳಿ ಓಡಾಡುತ್ತಿರುವಾಗ ನಾಪತ್ತೆಯಾಗಿದ್ದರು. ಎರಡು ದಿನಗಳ ನಂತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: 2,841 ರೂ. ಜಿಗಿದ ಬೆಳ್ಳಿ ಬೆಲೆ: ಬಂಗಾರದ ಬೆಲೆ ಕೇಳುವಂತಿಲ್ಲ!

ಸಿಬಿಐ ಎಫ್‌ಐಆರ್ ಪ್ರಕಾರ, 38 ವರ್ಷದ ಅಹ್ಲಾವತ್ ಕೊನೆಯ ಬಾರಿಗೆ ಆಗಸ್ಟ್ 5ರಂದು ಸಂಜೆ 7.45ರ ಸುಮಾರಿಗೆ ತನ್ನ ಗುರುಗ್ರಾಮ್ ನಿವಾಸದ ಬಳಿಯ ಸರ್ವಿಸ್ ಲೇನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಈ ಬಳಿಕ ಕುಟುಂಬಸ್ಥರು ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು. ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 346ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ರೋಹಿಣಿ ಕಾಲುವೆಯಲ್ಲಿ ಅವರ ಶವ ಪತ್ತೆಯಾದ ನಂತರ, ಅಪಹರಣ ಮತ್ತು ಕೊಲೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ತನಿಖೆಯಲ್ಲಿ ಯಾವುದೇ ಪ್ರಗತಿಯಿಲ್ಲದ ಕಾರಣ, ಅವರ ಕುಟುಂಬವು ಅಕ್ಟೋಬರ್ 17ರಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿತ್ತು.

ಈ ಹಿಂದೆ ಎಸ್‌ಪಿ ಮಟ್ಟದ ಅಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಎಸ್‌ಐಟಿ ಪ್ರಕರಣದ ತನಿಖೆ ನಡೆಸುತ್ತಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.