ETV Bharat / business

ಬಿರ್ಲಾ ಗ್ರೂಪ್​ನಿಂದ 100 ಕೋಟಿ ರೂ. ಸ್ಕಾಲರ್ಶಿಪ್: ನಿಮ್ಮ ಪ್ರತಿಭೆಗೆ ಸಿಗಲಿದೆ ಪ್ರೋತ್ಸಾಹ -

ಯುರೋಪ್ ಬ್ಯುಸಿನೆಸ್​ ಸ್ಕೂಲ್​ಗಳಲ್ಲಿ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಬಿರ್ಲಾ ಗ್ರೂಪ್​ ಘೋಷಿಸಿದ ಈ ಮೊತ್ತವೇ ಅತ್ಯಧಿಕ ಪ್ರಮಾಣದಲ್ಲಿದೆ. ಯುರೋಪ್​ನಲ್ಲಿ ಶಿಕ್ಷಣ ಪಡೆಯಲು ಬಯಸುವರಲ್ಲಿ ಶೇ 5ರಷ್ಟು ವಿದ್ಯಾರ್ಥಿಗಳು ಮಾತ್ರವೇ ಇಂತಹ ಸ್ಕಾಲರ್ಶಿಪ್​ಗೆ ಅರ್ಹತೆ ಪಡೆಯುತ್ತಾರೆ. ಯುರೋಪ್​ನಲ್ಲಿ 2019ರ ಶೈಕ್ಷಣಿಕ ವರ್ಷವು ಸೆಪ್ಟೆಂಬರ್​ ತಿಂಗಳಿಂದ ಆರಂಭವಾಗಲಿವೆ.

ಸಾಂದರ್ಭಿಕ ಚಿತ್ರ
author img

By

Published : Jul 12, 2019, 11:24 PM IST

ಮುಂಬೈ: ಲಂಡನ್ ಸ್ಕೂಲ್ ಆಫ್ ಬ್ಯುಸಿನೆಸ್​ ಹಳೆಯ ವಿದ್ಯಾರ್ಥಿ/ ಪ್ರತಿಷ್ಠ ಸಂಸ್ಥೆಯಾದ ಆದಿತ್ಯ ಬಿರ್ಲಾ ಗ್ರೂಪ್​ನ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಅವರು 100 ಕೋಟಿ ರೂ. (15 ಮಿಲಿಯನ್ ಪೌಂಡ್​) ಮೊತ್ತದ ವಿದ್ಯಾರ್ಥಿ ವೇತನ ಘೋಷಿಸಿದ್ದಾರೆ.

ಪೂರ್ಣ ಪ್ರಮಾಣದ ಎಂಬಿಎ ಓದಬಯಸುವ ಪ್ರತಿಭಾನ್ವಿತ 10 ವಿದ್ಯಾರ್ಥಿಗಳಿಗೆ ಈ ಮೊತ್ತ ಹಂಚಿಕೆ ಆಗಲಿದೆ. ಇದರಲ್ಲಿ ಭಾರತದ ಐವರು ವಿದ್ಯಾರ್ಥಿಗಳಿಗೆ ದೊರೆಯಲಿದೆ. ಉಳಿದ ಐವರು ವಿಶ್ವದ ಇತರೆ ರಾಷ್ಟ್ರಗಳ ಅಭ್ಯರ್ಥಿಗಳ ಪಾಲಾಗಲಿದೆ.

ಯುರೋಪ ಬ್ಯುಸಿನೆಸ್​ ಸ್ಕೂಲ್​ಗಳಲ್ಲಿ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಬಿರ್ಲಾ ಗ್ರೂಪ್​ ಘೋಷಿಸಿದ ಈ ಮೊತ್ತವೇ ಅತ್ಯಧಿಕ ಪ್ರಮಾಣದಲ್ಲಿದೆ. ಯುರೋಪ್​ನಲ್ಲಿ ಶಿಕ್ಷಣ ಪಡೆಯಲು ಬಯಸುವರಲ್ಲಿ ಶೇ 5ರಷ್ಟು ವಿದ್ಯಾರ್ಥಿಗಳು ಮಾತ್ರವೇ ಇಂತಹ ಸ್ಕಾಲರ್ಶಿಪ್​ಗೆ ಅರ್ಹತೆ ಪಡೆಯುತ್ತಾರೆ. ಯುರೋಪ್​ನಲ್ಲಿ 2019ರ ಶೈಕ್ಷಣಿಕ ವರ್ಷವು ಸೆಪ್ಟೆಂಬರ್​ ತಿಂಗಳಿಂದ ಆರಂಭವಾಗಲಿವೆ.

ಇಂತಹ ಕಾರ್ಯಕ್ರಮದ ಮೂಲಕ ಮುಂದಿನ ತಲೆಮಾರಿನ ವೈವಿಧ್ಯಮಯ ನಾಯಕರ ಪಿಳೀಗೆಯನ್ನು ಮತ್ತು ಸಮುದಾಯವನ್ನು ಪೋಷಿಸಲು ಇದು ನೆರವಾಗಲಿದೆ. ಭವಿಷ್ಯದ ನಾಯಕರ ಸಮಗ್ರತೆ, ಸಮರ್ಪಣೆ ಮತ್ತು ಮಾನವೀಯತೆಯ ಸೇವೆಯ ಆದರ್ಶಗಳಿಗೆ ಬೆಂಬಲ ನೀಡಲು ಬದ್ಧರಾಗಿದ್ದೇವೆ ಎಂದು ಬಿರ್ಲಾ ಅವರು ತಿಳಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.